ಸುಡಾನ್: ಸೌದಿಯ ವಿಮಾನದತ್ತ ಗುಂಡಿನ ದಾಳಿ: ವಿಮಾನ ಸಂಚಾರ ಸ್ಥಗಿತ

ಖಾರ್ಟಮ್, ಎ.16: ಸುಡಾನ್ ವಿಮಾನ ನಿಲ್ದಾಣದಿಂದ ಟೇಕ್‍ಆಫ್ ಆಗುತ್ತಿದ್ದ ಸೌದಿ ಅರೆಬಿಯಾದ ಪ್ರಯಾಣಿಕರ ವಿಮಾನದತ್ತ ಗುಂಡು ಹಾರಿದ ಘಟನೆಯ ಬಳಿಕ ಸುಡಾನ್‍ನಿಂದ ಹೊರಡುವ ಎಲ್ಲಾ ಪ್ರಯಾಣಿಕರ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಿರುವುದಾಗಿ ಸೌದಿ ಅಧಿಕಾರಿಗಳು ಹೇಳಿದ್ದಾರೆ.
ಸೌದಿ ಅರೆಬಿಯಾದತ್ತ ಹೊರಟಿದ್ದ ಏರ್‍ಬಸ್ ಎ330 ವಿಮಾನದತ್ತ ಗುಂಡು ಹಾರಾಟ ನಡೆದ ಬಳಿಕ ಸುಡಾನ್‍ನಿಂದ ತೆರಳುವ ಎಲ್ಲಾ ಸೌದಿ ಅರೆಬಿಯಾ ವಿಮಾನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ವಿಮಾನದಲ್ಲಿದ್ದವರನ್ನು ಸೌದಿ ರಾಯಭಾರ ಕಚೇರಿಗೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಸುಡಾನ್‍ನಲ್ಲಿನ ಸೌದಿ ರಾಯಭಾರ ಕಚೇರಿಯ ಹೇಳಿಕೆ ತಿಳಿಸಿದೆ.
Next Story





