ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಬರುತ್ತಾರೆಂಬ ನಿರೀಕ್ಷೆ ಮಾಡಲ್ಲ: ಸಿಎಂ ಬೊಮ್ಮಾಯಿ
ಬೆಂಗಳೂರು: 'ಜಗದೀಶ್ ಶೆಟ್ಟರ್ ಮತ್ತೆ ಪಕ್ಷಕ್ಕೆ ಬರುತ್ತಾರೆಂಬ ನಿರೀಕ್ಷೆ ಮಾಡಲ್ಲ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಚುನಾವಣೆ ವೇಳೆ ಕಾಂಗ್ರೆಸ್ಗೆ ಲಿಂಗಾಯತರ ಬಗ್ಗೆ ಪ್ರೀತಿ ಬಂದಿದೆ. ಬಿ.ಎಸ್. ಯಡಿಯೂರಪ್ಪ ಅವರು ಇರುವವರೆಗೂ ಲಿಂಗಾಯಿತ ಸಮುದಾಯ ನಮನ್ನ ಬಿಟ್ಟು ಹೋಗೋದಿಲ್ಲ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಬಿಜೆಪಿ ಜಗದೀಶ್ ಶೆಟ್ಟರ್ರನ್ನು ಗೌರವಯುತವಾಗಿ ಕಂಡಿದೆ. ಜಗದೀಶ್ ಶೆಟ್ಟರ್ರನ್ನು ಕಡೆಗಣಿಸಿರುವ ಪ್ರಶ್ನೆಯೇ ಇಲ್ಲ. ಎಲ್ಲಾ ಬೆಳವಣಿಗೆ ಪಕ್ಷದ ವರಿಷ್ಠರ ಗಮನಕ್ಕೆ ಬಂದಿದೆ. ಕಾಂಗ್ರೆಸ್ನ ಸಂಸ್ಕೃತಿ ಯೂಸ್ ಆ್ಯಂಡ್ ಥ್ರೋ. ವೀರೇಂದ್ರ ಪಾಟೀಲ್, ಬಂಗಾರಪ್ಪ, ದೇವರಾಜ ಅರಸರನ್ನ ಹೊರಹಾಕಿದಂಥ ಪಕ್ಷಕ್ಕೆ ಶೆಟ್ಟರ್ ಹೋಗಿದ್ದಾರೆ. ಶೆಟ್ಟರ್ ಅವರನ್ನೂ ಅದು ಯೂಸ್ ಆ್ಯಂಡ್ ಥ್ರೋ ಮಾಡುತ್ತೆ. ಇದೆಲ್ಲಾ ಗೊತ್ತಿದ್ದರೂ ಶೆಟ್ಟರ್ ಯಾಕೆ ಕಾಂಗ್ರೆಸ್ಗೆ ಹೋದ್ರೋ ಗೊತ್ತಿಲ್ಲ' ಎಂದರು.
Next Story