Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಆಪರೇಷನ್ ಫ್ಲಡ್ ಯಶಸ್ಸಿನಿಂದಾದ ಗಣನೀಯ...

ಆಪರೇಷನ್ ಫ್ಲಡ್ ಯಶಸ್ಸಿನಿಂದಾದ ಗಣನೀಯ ಸಾಧನೆಗಳೇನು?

ಕೇಸರಿ ಹರವೂ, ಬೆಂಗಳೂರುಕೇಸರಿ ಹರವೂ, ಬೆಂಗಳೂರು17 April 2023 1:07 PM IST
share
ಆಪರೇಷನ್ ಫ್ಲಡ್ ಯಶಸ್ಸಿನಿಂದಾದ ಗಣನೀಯ ಸಾಧನೆಗಳೇನು?

►► ಸರಣಿ : 04

ಎಲ್ಲೆಲ್ಲಿ ಉತ್ಪಾದಕರ ಸಂಘಗಳು ಇವೆಯೋ ಆ ಗ್ರಾಮಗಳಲ್ಲಿ ಸಂಘಗಳಿಲ್ಲದ ಗ್ರಾಮಗಳಿಗಿಂತ ಹೆಚ್ಚು ಮಿಶ್ರತಳಿ ಹಸುಗಳು ಕಾಣುತ್ತಿವೆ, ಜೊತೆಗೆ ಸದಸ್ಯರುಗಳ ಕುಟುಂಬಗಳ ಸರಾಸರಿ ಆದಾಯವೂ ಸಂಘಗಳಿರದ ಕಡೆಗಿಂತ ಹೆಚ್ಚು ಇದೆ ಎನ್ನುತ್ತದೆ ಮತ್ತೊಂದು ಅಧ್ಯಯನ. ಸದಸ್ಯರು ನೀಡುವ ಹಾಲಿಗೆ ಉತ್ತಮ ದರ ಕೊಡಿಸು ವಲ್ಲಿ, ಪಶುಗಳಿಗೆ ಉತ್ತಮ ಮೇವು ಮತ್ತು ಆರೋಗ್ಯ ವ್ಯವಸ್ಥೆಗಳನ್ನು ಮಾಡಿಸುವಲ್ಲಿ ಸಹಕಾರಿ ಸಂಘಗಳು ಬಹಳ ಉಪಯುಕ್ತವಾಗಿವೆ ಎನ್ನುತ್ತದೆ ಮತ್ತೂ ಒಂದು ಅಧ್ಯಯನ.

ವಿಶ್ವಸಂಸ್ಥೆ ಮತ್ತು ಯೂರೋಪಿಯನ್ ಇಕನಾಮಿಕ್ ಕಮ್ಯೂನಿಟಿ (ಇಇಸಿ) ನೆರವಿನಿಂದ ನ್ಯಾಷನಲ್ ಡೇರಿ ಡೆವಲಪ್ಮೆಂಟ್ ಬೋರ್ಡ್ (ಎನ್ಡಿಡಿಬಿ) 1970 ರಿಂದ 1996 ರವರೆಗೆ ಮೂರು ಹಂತಗಳಲ್ಲಿ ಆಪರೇಷನ್ ಫ್ಲಡ್ ಯೋಜನೆ ಯನ್ನು ದೇಶದುದ್ದಕ್ಕೂ ಹಮ್ಮಿಕೊಂಡಿತು. ಹಾಲು ಉತ್ಪಾದನೆಯನ್ನು ದೇಶದಲ್ಲಿ ಹೆಚ್ಚಿಸುವುದು, ಗ್ರಾಮೀಣ ಆರ್ಥಿಕತೆಗೆ ಇಂಬು ನೀಡುವುದು ಮತ್ತು ಗ್ರಾಹಕರಿಗೆ ನ್ಯಾಯಯುತ ಬೆಲೆಯಲ್ಲಿ ಹಾಲು ಮತ್ತು ಉತ್ಪನ್ನಗಳನ್ನು ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶಗಳಾಗಿದ್ದವು.

ಕರ್ನಾಟಕದಲ್ಲಿ ಯೋಜನೆ ಎರಡನೇ ಹಂತದೊಂದಿಗೆ ಆರಂಭವಾ ಯಿತು. ಆಪರೇಷನ್ ಫ್ಲಡ್ ಅನ್ನು ಕರ್ನಾಟಕದಲ್ಲಿ ‘ಕ್ಷೀರಧಾರೆ’ ಎಂದು ಕರೆಯಲಾಯಿತು. ಯೋಜನೆ ಕರ್ನಾಟಕಕ್ಕೆ ಬರುವ ಮೊದಲೇ 1975ರಲ್ಲಿ ಸ್ಥಾಪನೆಯಾಗಿದ್ದ ಕರ್ನಾಟಕ ಡೇರಿ ಅಭಿವೃದ್ಧಿ ನಿಗಮ (ಕೆಡಿಡಿಸಿ) ಒಂದಷ್ಟು ಕೆಲಸಗಳನ್ನು ಮಾಡಿತ್ತು. 1965 ರಲ್ಲಿ ಬೆಂಗಳೂರು ಡೇರಿ ಸ್ಥಾಪನೆಯಾಗಿ, ಹೊಸೂರು ರಸ್ತೆಯಲ್ಲಿರುವ ಡೇರಿ ವೃತ್ತದಲ್ಲಿ ದಿನಕ್ಕೆ ಒಂದೂವರೆ ಲಕ್ಷ ಲೀಟರ್ ಸಾಮರ್ಥ್ಯದ ಹಾಲು ಸಂಸ್ಕರಣಾ ಘಟಕವನ್ನು ಸ್ಥಾಪಿಸಿತ್ತು. 1980ರಲ್ಲಿ ಕರ್ನಾಟಕ ಮಿಲ್ಕ್ ಪ್ರಾಡಕ್ಟ್ಸ್ ಲಿಮಿಟೆಡ್ ಪ್ರಾರಂಭಿಸಿತ್ತು. ಅಮಿತ್ ಶಾ ನಂದಿನಿ ಯನ್ನು ಅಮುಲ್ ನೊಂದಿಗೆ ವಿಲೀನ ಮಾಡುತ್ತೇವೆ ಎಂದು ಮಂಡ್ಯದ ಗೆಜ್ಜಲಗೆರೆಯಲ್ಲಿ ಹೇಳಿದರಲ್ಲವೇ? ಆ ಡೇರಿ 1982 ರಲ್ಲಿಯೇ ಕೆಡಿಡಿಸಿ ಸ್ಥಾಪಿಸಿದ್ದ ರಾಜ್ಯದ ಮೊಟ್ಟಮೊದಲ ಹಾಲು ಉತ್ಪನ್ನಗಳ ಡೇರಿ.

ಆಪರೇಷನ್ ಫ್ಲಡ್ ಯೋಜನೆಯ ಮೊದಲ ಹಂತದಲ್ಲಿ (1970-80) ದೇಶದ ನಾಲ್ಕು ಮಹಾನಗರಗಳ ಸುತ್ತಲ ಹದಿನೆಂಟು ಹಾಲು ಉತ್ಪಾದನಾ ಪ್ರದೇಶಗಳನ್ನು ಗುರುತಿಸಿ, ಅವನ್ನು ಆ ಮಹಾ ನಗರಗಳಿಗೆ ಸಂಪರ್ಕ ಕಲ್ಪಿಸಿ, ಹಾಲು ಸರಬರಾಜು ಮಾಡುವ ಕೆಲಸವನ್ನು ಆರಂಭಿಸಲಾಯಿತು. 

ಎರಡನೇ ಹಂತದಲ್ಲಿ (1981-85) ಇನ್ನೂ 118 ಹಾಲು ಉತ್ಪಾದನಾ ಪ್ರದೇಶಗಳಿಂದ ಹಾಲು ಶೇಖರಿಸಿ 290 ನಗರ ಪ್ರದೇಶಗಳಿಗೆ ಸರಬರಾಜು ಹಮ್ಮಿಕೊಳ್ಳಲಾಯಿತು. ಆಗ ಯೋಜನೆ ಕರ್ನಾಟಕಕ್ಕೂ ವಿಸ್ತರಿಸಿತು. ಈ ಹಂತದಲ್ಲಿ ದೇಶದಲ್ಲಿ 43,000 ಗ್ರಾಮ ಸಹಕಾರಿ ಹಾಲು ಉತ್ಪಾದಕ ಸಂಘಗಳು ಅಸ್ತಿತ್ವಕ್ಕೆ ಬಂದು, 42 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರು ಆ ಸಂಘಗಳ ಸದಸ್ಯರಾದರು. ಕರ್ನಾಟಕದಲ್ಲಿ, ವಿಶೇಷವಾಗಿ ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿ ಕರ್ನಾಟಕದ ಸಾವಿರಾರು ಹಳ್ಳಿಗಳಲ್ಲಿ ಸಂಘಗಳು ಹುಟ್ಟಿಕೊಂಡವು. ಯೋಜನೆಗೆ ಮೊದಲು ದೇಶದಲ್ಲಿ 22,000 ಟನ್ ಇದ್ದ ಹಾಲಿನ ಪುಡಿಯ ವಾರ್ಷಿಕ ಉತ್ಪಾದನೆ 1989 ರ ಹೊತ್ತಿಗೆ 1,40,000 ಟನ್ ಆಯಿತು. 2003-04 ರ ಹೊತ್ತಿಗೆ ದೇಶದ 750 ನಗರ,ಪಟ್ಟಣಗಳಿಗೆ ಹಾಲು ಸರಬರಾಜು ವ್ಯವಸ್ಥೆ ಸಾಧ್ಯವಾಯಿತು. ಇಂದು ಸಣ್ಣಪಟ್ಟಣಗಳಲ್ಲೂ, ದೊಡ್ಡ ಗ್ರಾಮಗಳಲ್ಲೂ ಡೇರಿ ಹಾಲು, ಮೊಸರು ಮತ್ತಿತರ ಉತ್ಪನ್ನಗಳು ದೊರೆಯುತ್ತಿವೆ. 

ಈ ಪ್ರಮಾಣದ ಪ್ರಗತಿ ಕಾಣಲು, ಪ್ರತಿ ರಾಜ್ಯದಲ್ಲಿಯೂ ಅಮುಲ್ ಸಹಕಾರಿ ಸಂಸ್ಥೆಯ ಮೂರು ಸ್ತರದ ಸಂಘಟನಾ ವಿನ್ಯಾಸ ಮಾದರಿ ಯನ್ನು ಅನುಸರಿಸಲಾಯಿತು. ಹಾಲು ಉತ್ಪಾದನೆ ಗ್ರಾಮದ ಉತ್ಪಾದಕರ ಕೊಟ್ಟಿಗೆಗಳಲ್ಲಿ, ಹಾಲು ಶೇಖರಣೆ ಗ್ರಾಮದ ಹಾಲು ಸಹಕಾರಿ ಸಂಘಗಳಲ್ಲಿ, ಹಾಲು ಸಂಸ್ಕರಣೆ ಮತ್ತು ವಿತರಣೆ ಆಯಾ ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳಲ್ಲಿ - ಹೀಗೆ ವಿವಿಧ ಸ್ತರಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ಹಂಚಿಕೊಳ್ಳಲಾಯಿತು. ಆಯಾ ರಾಜ್ಯದ ಎಲ್ಲಾ ಜಿಲ್ಲಾ ಒಕ್ಕೂಟಗಳು ಒಟ್ಟಾಗಿ ಸ್ಥಾಪಿಸಿಕೊಂಡ ಸಹಕಾರಿ ಮಹಾ ಮಂಡಳಿಯು ಜಿಲ್ಲಾ ಒಕ್ಕೂಟಗಳ ಕಾರ್ಯಚಟುವಟಿಕೆ ಗಳನ್ನು ಸಮನ್ವಯಗೊಳಿಸುವ ಮತ್ತು ಹಾಲು ಉತ್ಪನ್ನಗಳಿಗೆ ಮಾರುಕಟ್ಟೆ ಅಭಿವೃದ್ಧಿ ಮಾಡುವ ಜವಾಬ್ದಾರಿಯನ್ನು ಹೊತ್ತಿತು. ಎಲ್ಲ ಸ್ತರಗಳಲ್ಲೂ ಪ್ರಾಥಮಿಕ ಹಾಲು ಉತ್ಪಾದಕರೇ ಮಾಲಕರಾಗಿ, ಸಹಕಾರಿ ತತ್ವದಲ್ಲಿ ಸಂಘಟಿತರಾದರು. 

ಮೂರನೇ ಹಂತದಲ್ಲಿ ಹಾಲು ಮಹಾಮಂಡಳಿಗಳು ಮತ್ತು ಜಿಲ್ಲಾ ಒಕ್ಕೂಟಗಳು ಹಾಲು ಶೇಖರಣೆ ಮತ್ತು ಸಂಸ್ಕರಣಾ ಸಾಮರ್ಥ್ಯ 
ಗಳನ್ನು ಹೆಚ್ಚಿಸಿಕೊಳ್ಳಲು, ಹೆಚ್ಚುವರಿ ಉತ್ಪಾದನೆಗೆ ಮಾರುಕಟ್ಟೆಗಳನ್ನು ಹೆಚ್ಚಿಸಿಕೊಳ್ಳಲು ಒತ್ತು ನೀಡಲಾಯಿತು. ಅದಲ್ಲದೇ, ಪಶು ಆರೋಗ್ಯ ಸೌಲಭ್ಯಗಳು, ಕೃತಕ ಗರ್ಭಧಾರಣೆ ಮತ್ತು ಉತ್ಪಾದಕ ಸದಸ್ಯರುಗಳಿಗೆ ಸಾಮರ್ಥ್ಯವರ್ಧನೆಯ ತರಬೇತಿಗಳನ್ನು ಹಮ್ಮಿಕೊಳ್ಳಲಾಯಿತು.

1984ರಲ್ಲಿ ಕೆಡಿಡಿಸಿಯನ್ನು ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳಿಯನ್ನಾಗಿ (ಕಹಾಮ, ಕೆಎಮ್ಎಫ್) ಪರಿವರ್ತಿಸಲಾಯಿತು. ಇಂದು ಅಮುಲ್ ಭಾರತದ ಅತಿದೊಡ್ಡ ಸಹಕಾರಿ ಹಾಲು ಒಕ್ಕೂಟವೆನಿಸಿದರೆ, ಕರ್ನಾಟಕದ ಕೆಎಂಎಫ್ ಎರಡನೇ ಸ್ಥಾನದ ಲ್ಲಿದೆ. ಅದರ ಅರವತ್ತೈದಕ್ಕೂ ಹೆಚ್ಚು ಡೇರಿ ಉತ್ಪನ್ನಗಳು ದೇಶ, ವಿದೇಶಗಳ ಮಾರುಕಟ್ಟೆಗಳಲ್ಲಿವೆ. ಕರ್ನಾಟಕದ 
22,000 ಹಳ್ಳಿಗಳ 24 ಲಕ್ಷಕ್ಕೂ ಹೆಚ್ಚು ಉತ್ಪಾದಕ ಸದಸ್ಯರು 17,000 ಹಾಲು ಸಹಕಾರಿ ಸಂಘಗಳನ್ನು ಸ್ಥಾಪಿಸಿಕೊಂಡು ದಿನನಿತ್ಯ ಹಾಲು ಪೂರೈಕೆ ಮಾಡುತ್ತಿದ್ದಾರೆ. ಒಟ್ಟು 15 ಜಿಲ್ಲಾ ಒಕ್ಕೂಟ ಗಳು ಕಾರ್ಯನಿರ್ವಹಿ ಸುತ್ತಿದ್ದು, ಕೆಎಂಎಫ್ ಪ್ರತಿದಿನ 22 ಕೋಟಿಗೂ ಹೆಚ್ಚು ಹಣವನ್ನು ತನ್ನ ಹಾಲು ಉತ್ಪಾದಕ ಸದಸ್ಯರಿಗೆ ಸಂದಾಯ ಮಾಡುತ್ತಿದೆ. 

ಎನ್ಡಿಡಿಬಿ ಪ್ರಕಾರ, ಆಪರೇಷನ್ ಫ್ಲಡ್ ಯೋಜನೆಯನ್ನು ಬಡತನದ ಸಮಸ್ಯೆಗಳನ್ನು ನಿವಾರಿಸಲು ಮತ್ತು ಉದ್ಯೋ ಸೃಷ್ಟಿಯನ್ನು ಹೆಚ್ಚಿಸಲು ಕೈಗೊಳ್ಳಲಾಗಿತ್ತು. ಅದರಿಂದಾಗಿ ಲಕ್ಷಾಂತರ ಭೂರಹಿತರು, ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳು ಆರ್ಥಿಕ ಅನುಕೂಲ ಪಡೆದುಕೊಂಡಿವೆ. ನಾವೇ ನೋಡಿ ರುವ ಹಾಗೆ, ಎರಡು ಹಸುಗಳನ್ನು ಸಾಕಿಕೊಂಡು ಹಾಲು ಕರೆಯುವ ಅನೇಕ ತಾಯಂದಿರು ತಮ್ಮ ಮಕ್ಕಳಿಗೆ ಉನ್ನತಮಟ್ಟದಲ್ಲಿ ಶಿಕ್ಷಣ ಕೊಡಿಸಿ, ಸಮಾಜದ ವಿವಿಧ ಕ್ಷೇತ್ರ ಗಳಲ್ಲಿ ಒಳ್ಳೆಯ ಸ್ಥಾನಮಾನ ಪಡೆಯುವಂತೆ ಮಾಡಿದ್ದಾರೆ. 

ಅನೇಕ ಗ್ರಾಮಗಳಲ್ಲಿ ಮಹಿಳೆಯರೇ ಸಹಕಾರಿ ಹಾಲು ಉತ್ಪಾದಕ ಸಂಘಗಳನ್ನು ನಡೆಸುತ್ತಿದ್ದಾರೆ. 2021-22 ರ ಅಂಕಿ-ಅಂಶಗಳಂತೆ, ಕರ್ನಾಟಕದಲ್ಲಿ ಸಕ್ರಿಯವಾಗಿರುವ 17,000 ಗ್ರಾಮ ಹಾಲು ಸಹಕಾರಿ  ಸಂಘಗಳಲ್ಲಿ 4,143 ಮಹಿಳೆಯರ ಸಂಘಗಳೇ ಇವೆ. ಸ್ತ್ರೀಶಕ್ತಿ ಸಂಘಗಳಂತೆಯೇ ಹಾಲು ಉತ್ಪಾದಕ ಸಂಘಗಳೂ ಮಹಿಳೆಯರಿಗೆ ತಮ್ಮ ಮನೆಗಳ ಆಚೆಗಿನ ವಾತಾವರಣದಲ್ಲಿ ಸಂಘಟಿತರಾಗಿ, ಸ್ವತಂತ್ರವಾಗಿ ಸಮಸ್ಯೆಗಳನ್ನು ನಿಭಾಯಿಸುವ, ಸ್ವತಂತ್ರವಾಗಿ ತೀರ್ಮಾನ ಗಳನ್ನು ತೆಗೆದುಕೊಳ್ಳುವ, ಆರ್ಥಿಕ ಸ್ವಾತಂತ್ರ್ಯವನ್ನು ಹೊಂದುವ ಅಮೂಲ್ಯ ಅವಕಾಶಗಳನ್ನು ಸಹಕಾರಿ ಕ್ಷೀರಕ್ರಾಂತಿ ನೀಡಿದೆ. 

ಈ ಯೋಜನೆ ಗ್ರಾಮೀಣ ಭಾರತದಲ್ಲಿ ಯಾವ ರೀತಿಯಲ್ಲಿ ಫಲ ನೀಡಿತು, ಹಾಕಿಕೊಂಡ ಧ್ಯೇಯೋದ್ದೇಶಗಳು ಈಡೇರಿದವೇ ಎನ್ನುವುದರ ಕುರಿತು ಅನೇಕ ಸಾಮಾಜಿಕ, ಆರ್ಥಿಕ ಸಮೀಕ್ಷೆಗಳು, ಅಧ್ಯಯನಗಳು ನಡೆದಿವೆ. 

ಆಪರೇಷನ್ ಫ್ಲಡ್ ಮೂಲಕ ಸ್ಥಾಪನೆಗೊಂಡ ಗ್ರಾಮ ಹಾಲು ಸಹಕಾರಿ ಸಂಘಗಳು ಖಾಸಗಿ ವ್ಯಾಪಾರಿಗಳು ಹಳ್ಳಿಗಳಲ್ಲಿ ಖರೀದಿಸು ತ್ತಿದ್ದ ಪ್ರಮಾಣಕ್ಕಿಂತ ಹೆಚ್ಚು ಹಾಲನ್ನು ಖರೀದಿಸುತ್ತಿವೆಯಲ್ಲದೇ, ಖಾಸಗಿಯವರಿಗಿಂತ ಹೆಚ್ಚು ದರವನ್ನು ಹಾಲು ಉತ್ಪಾದಕರಿಗೆ ನೀಡುತ್ತಿವೆ ಎನ್ನುತ್ತದೆ ಒಂದು ಅಧ್ಯಯನ. 

ಎಲ್ಲೆಲ್ಲಿ ಉತ್ಪಾದಕರ ಸಂಘಗಳು ಇವೆಯೋ ಆ ಗ್ರಾಮಗಳಲ್ಲಿ ಸಂಘಗಳಿಲ್ಲದ ಗ್ರಾಮಗಳಿಗಿಂತ ಹೆಚ್ಚು ಮಿಶ್ರತಳಿ ಹಸುಗಳು ಕಾಣು 
ತ್ತಿವೆ, ಜೊತೆಗೆ ಸದಸ್ಯರುಗಳ ಕುಟುಂಬಗಳ ಸರಾಸರಿ ಆದಾಯವೂ ಸಂಘಗಳಿರದ ಕಡೆಗಿಂತ ಹೆಚ್ಚು ಇದೆ ಎನ್ನುತ್ತದೆ ಮತ್ತೊಂದು ಅಧ್ಯಯನ. ಸದಸ್ಯರು ನೀಡುವ ಹಾಲಿಗೆ ಉತ್ತಮ ದರ ಕೊಡಿಸು ವಲ್ಲಿ, ಪಶುಗಳಿಗೆ ಉತ್ತಮ ಮೇವು ಮತ್ತು ಆರೋಗ್ಯ ವ್ಯವಸ್ಥೆಗಳನ್ನು ಮಾಡಿಸುವಲ್ಲಿ ಸಹಕಾರಿ ಸಂಘಗಳು ಬಹಳ ಉಪಯುಕ್ತವಾಗಿವೆ ಎನ್ನುತ್ತದೆ ಮತ್ತೂ ಒಂದು ಅಧ್ಯಯನ. 

1990-91 ರಲ್ಲಿ ನಡೆದ ಇನ್ನೊಂದು ಅಧ್ಯಯನ ಆಪರೇಷನ್ ಫ್ಲಡ್ ಮೂಲಕ ಉಂಟಾದ ಕ್ಷೀರಕ್ರಾಂತಿ ಹಸಿರುಕ್ರಾಂತಿಗಿಂತಲೂ ಹೆಚ್ಚು ಸಮಾನತೆಯನ್ನು ತರುತ್ತಿದೆ ಎಂದು ಉಲ್ಲೇಖಿಸಿ, ಅದಕ್ಕೆ ಹಲವು ಕಾರಣಗಳನ್ನು ಪಟ್ಟಿ ಮಾಡುತ್ತದೆ:

1. ಭೂಮಿ ಹಂಚಿಕೆಗಿಂತ ರಾಸುಗಳ ಹಂಚಿಕೆಯಲ್ಲಿ ಹೆಚ್ಚು ಸಮಾನತೆಯನ್ನು ಕಾಣಬಹುದಾಗಿದೆ; 
2. ಧಾನ್ಯಗಳ ಬೇಡಿಕೆಗಿಂತ ಹಾಲಿನ ಬೇಡಿಕೆ ಹೆಚ್ಚಿರುವುದರಿಂದ, ಭೂರಹಿತರೂ ಹೈನುಗಾರಿಕೆಯಲ್ಲಿ ತೊಡಗಿಕೊಂಡು ಅಧಿಕ ಆದಾಯ ಗಳಿಸುವಂತಾಗಿದೆ; 
3. ಪಶುಸಾಕಣೆ ಮತ್ತು ಡೇರಿ ಉದ್ಯಮದಲ್ಲಿ ಮಹಿಳೆಯರಿಗೆ ಹೆಚ್ಚು ಉದ್ಯೋಗಾವಕಾಶಗಳು ಉಂಟಾಗುತ್ತಿದ್ದು, ಅವರ ಕೌಟುಂಬಿಕ ಆರೋಗ್ಯ ಮತ್ತು ಪೌಷ್ಟಿಕತೆಯ ಮೇಲೆ ಇತ್ಯಾತ್ಮಕ ಬದಲಾವಣೆಗಳನ್ನು ಗುರುತಿಸಬಹುದಾಗಿದೆ; 
4. ಭೂಸುಧಾರಣೆಯ ಮೂಲಕ ಭೂರಹಿತರಿಗೆ ಭೂಮಿಯನ್ನು ಮರುಹಂಚಿಕೆ ಮಾಡುವುದಕ್ಕಿಂತ ಜಾನುವಾರುಗಳನ್ನು ನೀಡುವುದು ಹೆಚ್ಚು ಸುಲಭ ಎನಿಸಿದೆ. 

ಈ ಎಲ್ಲ ಅಧ್ಯಯನಗಳೂ 1990-96 ರ ಆಸುಪಾಸಿನಲ್ಲಿ ನಡೆದವುಗಳು. ಆಪರೇಷನ್ ಫ್ಲಡ್ ಸರ್ವಾಂಗೀಣ ಗ್ರಾಮೀಣ ಅಭಿವೃದ್ಧಿಯ 
ಉದ್ದೇಶವನ್ನು ಹಮ್ಮಿಕೊಂಡು ಅನುಷ್ಠಾನ ಮಾಡಿದ ಯೋಜನೆಯಲ್ಲ, 
ಆದರೆ ಹೈನುಗಾರಿಕೆಯನ್ನು ಉತ್ತೇಜಿಸುವ ಮೂಲಕ ಗ್ರಾಮೀಣ ಪಶುಪಾಲಕರಲ್ಲಿ ಒಂದಿಷ್ಟು ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಯನ್ನು ಕಾಣುವುದಾಗಿತ್ತು ಎಂದು ಯೋಜನೆಯ ಅನುಷ್ಠಾನ ಸಂಸ್ಥೆಗಳೇ ಹೇಳಿಕೊಂಡಿವೆ. 

ಈ ಅಧ್ಯಯನಗಳು ಹೇಳಿರುವ ಸಾಧನೆಗಳನ್ನು ಇಂದು ಕುಳಿತು  ಅವಲೋಕಿಸಿದಾಗ, ಸಾಮಾಜಿಕ ಕುತೂಹಲದಿಂದ ಮತ್ತಷ್ಟು ಪ್ರಶ್ನೆಗಳು ಏಳುವುದು ಸಹಜ. ವಿವಿಧ ಬಗೆಯ ಕ್ರೂರ ತರತಮಗ ಳಿಂದಾಗಿ ತೀವ್ರ ಅಸಮಾನತೆ ಇರುವ ಸಾಮಾಜಿಕ, ಆರ್ಥಿಕ ಶ್ರೇಣೀಕೃತ ಭಾರತದಲ್ಲಿ, ಭೂಸುಧಾರಣೆಗಳ ಮೂಲಕ ಭೂಮಿಯ ಮರುಹಂಚಿಕೆಗೆ ಪರ್ಯಾಯವಾಗಿ ಪಶು ಸಂಗೋಪನೆಗೆ ಹೆಚ್ಚು ಒತ್ತು ನೀಡುವುದು ಸೂಕ್ತವೇ? ಅದರ ದೀರ್ಘಕಾಲೀನ ಪರಿಣಾ ಮವೇನಾಗಬಹುದು? ಸಹಕಾರಿ ಕ್ಷೀರಕ್ರಾಂತಿಯಿಂದ ಸ್ವಲ್ಪಮಟ್ಟಿಗೆ ಆರ್ಥಿಕ ಔನ್ನತ್ಯ ಹೊಂದಿದ ಭೂರಹಿತರು, ಸಾಮಾಜಿಕ ವಾಗಿ ತಳಸ್ತರದಲ್ಲಿರುವ ರೈತ ಕುಟುಂಬಗಳು ಸಾಂಪ್ರದಾಯಿಕ ಭೂ ಒಡೆತನದಲ್ಲಿ ಬೇರೂರಿರುವ ಊಳಿಗಮಾನ್ಯ ಮನಸ್ಥಿತಿಯನ್ನು ಸ್ವಲ್ಪ ಮಟ್ಟಿಗಾದರೂ ಮಂಕಾಗಿಸುವಲ್ಲಿ ಯಶಸ್ವಿಯಾಗಿವೆಯೇ? ಧಾರ್ಮಿಕ ಸಮಾನತೆಗೆ, ಜಾತಿ ವಿನಾಶಕ್ಕೆ ಆರ್ಥಿಕ ಸುಧಾರಣೆ ಎಂದೂ ಮಾನದಂಡವಾಗಿಲ್ಲದ ನಮ್ಮ ದೇಶದಲ್ಲಿ ದಮನಿತರ, ಅಲ್ಪಸಂಖ್ಯಾತರ, ಮಹಿಳೆಯರ ಆರ್ಥಿಕ ಏಳಿಗೆಯೇ ಕಂದರವನ್ನೂ ಹೆಚ್ಚಿಸಬಹುದೆಂಬುದನ್ನು ನಾವು ಕಂಡಿದ್ದೇವಲ್ಲವೇ? ಹಾಗೆಂದು ಎ ವರ್ಗಗಳ ಆರ್ಥಿಕ ಮುನ್ನಡೆಯನ್ನು ಬದಿಗೆ ಸರಿಸಬೇಕು ಎಂದರ್ಥವಲ್ಲ. ಈ ನಿಟ್ಟಿನಲ್ಲೂ ಅಧ್ಯಯನಗಳು ನಡೆದಿರಬಹುದು. ಅವನ್ನು ಅಭ್ಯಸಿಸುವ ಅವಶ್ಯಕತೆಯೂ ಇದೆ.

(ನಾಳೆ: ಆಪರೇಷನ್ ಫ್ಲಡ್ ನಂತರದ ಜಾಗತೀಕರಣದ ಸಂದರ್ಭದಲ್ಲಿ ಸಹಕಾರಿ ಡೇರಿ ಉದ್ದಿಮೆ...)

share
ಕೇಸರಿ ಹರವೂ, ಬೆಂಗಳೂರು
ಕೇಸರಿ ಹರವೂ, ಬೆಂಗಳೂರು
Next Story
X