ವಿಶ್ವಕಲಾ ದಿನಾಚರಣೆ: ಬೃಹತ್ ರಂಗೋಲಿ ಭಾವಚಿತ್ರ ರಚನೆ

ಉಡುಪಿ, ಎ.16: ವಿಶ್ವ ಕಲಾ ದಿನಾಚರಣೆ ಪ್ರಯುಕ್ತ ಮಣಿಪಾಲ ತ್ರಿವರ್ಣ ಕಲಾ ಕೇಂದ್ರದ ಹಿರಿಯರ ವಿಭಾಗದ ವಿದ್ಯಾರ್ಥಿ ಕಲಾವಿದರು ವಿಶ್ವವಿಖ್ಯಾತ ಚಿತ್ರಕಲಾವಿದ, ನಕ್ಷಗಾರ, ವಿಜ್ಞಾನಿ, ವಾಸ್ತುಶಿಲ್ಪಿ, ಅರ್ಥಶಾಸ್ತ್ರಜ್ಞ ಲಿಯನಾರ್ದೋ ಬೃಹತ್ ರಂಗೋಲಿ ಭಾವಚಿತ್ರವನ್ನು ರಚಿಸಿದರು.
ಗ್ಯಾಲರಿಯಲ್ಲಿ ಕೇಕ್ ಕತ್ತರಿಸುವ ಮೂಲಕ ವಿಶ್ವ ಕಲಾ ದಿನಾಚರಣೆಯನ್ನು ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಕಲಾ ದಿನಾಚರಣೆಯ ಪ್ರಾಮುಖ್ಯತೆ ಮತ್ತು ಡಾವಿನ್ಸಿಯ ಇತಿಹಾಸದ ಕುರಿತು ಮಾಹಿತಿಯನ್ನು ಕೇಂದ್ರದ ನಿರ್ದೇಶಕ, ಕಲಾವಿದ ಹರೀಶ್ ಸಾಗಾ ನೀಡಿದರು.
ಹಿರಿಯ ವಿದ್ಯಾರ್ಥಿ ಕಲಾವಿದರಾದ ಡಾ.ಜಿ.ಎಸ್.ಕೆ.ಭಟ್, ಉಜ್ವಲ್, ಪ್ರಸಾದ್ ಆರ್., ಹರ್ಷಿತ್ ಶೆಟ್ಟಿ, ಗಣೇಶ್ ಶೆಟ್ಟಿ, ಅನುಷಾ ಆಚಾರ್ಯ, ಕೆರೋಲಿನ್, ಚೇತನಾ ಗಣೇಶ್, ರಿಮಾ, ಅಂಬಿಕಾ ಶೆಟ್ಟಿ, ಸುಷ್ಮಾ ಪ್ರಭು, ಅಶ್ವಿನಿ ಶೆಟ್ಟಿ, ಸಸ್ಯಾ, ರಮಾಯಶ್ಮಿತಾ, ಪ್ರಗ್ನ್ಯಾ ಮೊದಲಾದವರು ಉಪಸ್ಥಿತರಿದ್ದರು.
Next Story





