ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರ ಸಮಾವೇಶ

ಬೈಂದೂರು: ಉಡುಪಿ ಜಿಲ್ಲಾ ಬೈಂದೂರು ತಾಲೂಕು ಕೆರ್ಗಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೂಲಿಕಾರರ ಆರು ಕಾಯಕ ಸಂಘದ ಸದಸ್ಯರ ಸಮಾವೇಶವು ರವಿವಾರ ಜರಗಿತು.
ಕೃಷಿಕೂಲಿ ಕಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ ಮಾತನಾಡಿ, ಸರಕಾರ ಕೂಲಿಕಾರರ ಕೂಲಿಯನ್ನು ಈ ಸಾಲಿಗೆ ಕೇವಲ 70ರೂ. ಮಾತ್ರ ಹೆಚ್ಚಿಸಿರುವುದು ತೀರಾ ಖಂಡನೀಯವಾಗಿದೆ. ಅಖಿಲ ಭಾರತ ಕೃಷಿಕೂಲಿಕಾರರ ಸಂಘದ ಬೇಡಿಕೆಯಂತೆ ಕೂಲಿ 600ರೂ. ಕೊಡಬೇಕು ಎಂದು ಒತ್ತಾಯಿಸಿ ಇತ್ತೀಚೆಗೆ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಮುಖಂಡರಾದ ಜಯಂತಿ, ವೀಣಾ, ಸಾಕು, ಸುಶೀಲ, ಶ್ರೀಮತಿ ಮೊದಲಾದವರು ಉಪಸ್ಥಿತರಿದ್ದರು. ಬೈಂದೂರಿನಲ್ಲಿ ಜರಗುವ ಮೇ-ಕಾರ್ಮಿಕ ದಿನಾಚರಣೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು
Next Story