Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಆಸ್ತಿ ವಿವರ ಘೋಷಣೆ: ಎಂ.ಬಿ.ಪಾಟೀಲ್...

ಆಸ್ತಿ ವಿವರ ಘೋಷಣೆ: ಎಂ.ಬಿ.ಪಾಟೀಲ್ ಶತಕೋಟಿ ಒಡೆಯ

17 April 2023 11:07 PM IST
share
ಆಸ್ತಿ ವಿವರ ಘೋಷಣೆ: ಎಂ.ಬಿ.ಪಾಟೀಲ್ ಶತಕೋಟಿ ಒಡೆಯ

ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎಂ.ಬಿ.ಪಾಟೀಲ್ ಶತಕೋಟಿ ರೂ.ಒಡೆಯ. ಅವರ ಬಳಿ 8.59 ಕೋಟಿ ರೂ.ಮೌಲ್ಯದ ಚರಾಸ್ಥಿ ಹಾಗೂ 94.29 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿ ಇದೆ. ಅವರ ಪತ್ನಿ ಆಶಾ ಪಾಟೀಲ್ 12.39 ಕೋಟಿ ರೂ. ಹಾಗೂ ಮಗ ಧ್ರುವ ಪಾಟೀಲ್ 58.05 ಲಕ್ಷ ರೂ.ಚರಾಸ್ತಿ ಹೊಂದಿರುವುದಾಗಿ ಚುನಾವಣಾಧಿಕಾರಿಗೆ ಸಲ್ಲಿಸಿರುವ ಆಸ್ತಿಯ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

ಆಶಾ ಪಾಟೀಲ್ 24.32 ಕೋಟಿ ರೂ.ಗಳ ಸ್ಥಿರಾಸ್ತಿ ಹೊಂದಿದ್ದಾರೆ. ಎಂ.ಬಿ.ಪಾಟೀಲ್ 34.26 ಕೋಟಿ ರೂ. ಹಾಗೂ ಆಶಾ ಪಾಟೀಲ್ 12.98 ಕೋಟಿ ರೂ.ಸಾಲವನ್ನು ಹೊಂದಿದ್ದಾರೆ. ಎಂ.ಬಿ.ಪಾಟೀಲ್ ಕೈಯಲ್ಲಿ ಒಂದು ಲಕ್ಷ ರೂ.ಹಾಗೂ ಆಶಾ ಪಾಟೀಲ್ ಕೈಯಲ್ಲಿ 50 ಸಾವಿರ ರೂ.ನಗದು ಇದೆ. ವಿವಿಧ ಬ್ಯಾಂಕುಗಳಲ್ಲಿ ಎಂ.ಬಿ.ಪಾಟೀಲ್ ಹೆಸರಿನಲ್ಲಿ 11.99 ಲಕ್ಷ ರೂ. ಹಾಗೂ ಆಶಾ ಪಾಟೀಲ್ ಹೆಸರಿನಲ್ಲಿ 1.07 ಕೋಟಿ ರೂ.ಠೇವಣಿ ಮತ್ತು ಧ್ರುವ ಪಾಟೀಲ್ ಹೆಸರಿನಲ್ಲಿ 9.15 ಲಕ್ಷ ರೂ.ಗಳ ಠೇವಣಿ ಇದೆ.

ಜಮಖಂಡಿ ಶುಗರ್ಸ್‍ನಲ್ಲಿ ಒಂದು ಲಕ್ಷ ರೂ.ಗಳ ಷೇರುಗಳು, ಬಸವೇಶ್ವರ ಶುಗರ್ಸ್‍ನಲ್ಲಿ 30 ಲಕ್ಷ ರೂ.ಗಳ ಷೇರು, ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 2 ಸಾವಿರ ರೂ.ಗಳ ಷೇರುಗಳನ್ನು ಎಂ.ಬಿ.ಪಾಟೀಲ್ ಹೊಂದಿದ್ದಾರೆ. ಅಂಚೆ ಕಚೇರಿಯಲ್ಲಿನ ಉಳಿತಾಯ ಯೋಜನೆಯಡಿ ಎಂ.ಬಿ.ಪಾಟೀಲ್ ತಲಾ 20,150 ರೂ.ಗಳ ಆರು ಹೂಡಿಕೆ ಹಾಗೂ 10,075 ರೂ.ಗಳ ಎರಡು ಹೂಡಿಕೆಯನ್ನು ಹೊಂದಿದ್ದಾರೆ. ಆಶಾ ಪಾಟೀಲ್ ಎಲ್‍ಐಸಿಯಲ್ಲಿ 15 ಪಾಲಿಸಿಗಳಲ್ಲಿ ಒಟ್ಟು 29,271,950 ರೂ.ಗಳ ವಿಮೆಯನ್ನು ಹೊಂದಿದ್ದಾರೆ. ಧ್ರುವ ಹೆಸರಿನಲ್ಲಿ ಎಲ್‍ಐಸಿಯಲ್ಲಿ 48,89,560 ರೂ.ಗಳ ವಿಮೆ ಹೊಂದಿದ್ದಾರೆ.

ಎಂ.ಬಿ.ಪಾಟೀಲ್ ತಮ್ಮ ಪತ್ನಿಗೆ ನೀಡಿರುವ 7.79 ಲಕ್ಷ ರೂ.ಗಳು ಸೇರಿದಂತೆ ಇತರರಿಗೆ 5.59 ಕೋಟಿ ರೂ.ಸಾಲವನ್ನು ನೀಡಿದ್ದಾರೆ. ಆಶಾ ಪಾಟೀಲ್ ಡಾ.ಸಿ.ಆರ್.ಬಿದರಿ ಎಂಬವರಿಗೆ 45 ಲಕ್ಷ ರೂ., ಎಂ.ಬಿ.ಪಾಟೀಲ್ ಅವರಿಗೆ 4.18 ಕೋಟಿ ರೂ., ಬಿ.ಎಂ.ಪಾಟೀಲ್ ಅವರಿಗೆ 4.89 ಕೋಟಿ ರೂ., ದ್ರುವ ಪಾಟೀಲ್ ಅವರಿಗೆ 2.50 ಲಕ್ಷ ರೂ. ಹಾಗೂ ಬಂಜಾರ ಕಸೂತಿ ಸೊಸೈಟಿಗೆ 2 ಲಕ್ಷ ರೂ.ಸಾಲ ನೀಡಿದ್ದಾರೆ.

ವಾಹನಗಳು: ಎಂ.ಬಿ.ಪಾಟೀಲ್ ಹೆಸರಿನಲ್ಲಿ 8 ಲಕ್ಷ ರೂ.ಮೌಲ್ಯದ ಹೊಂಡಾ ಜೀಪ್, 97.22 ಲಕ್ಷ ರೂ.ಮೌಲ್ಯದ ಮರ್ಸಿಡಿಸ್ ಬೆಂಜ್, 1.50 ಕೋಟಿ ರೂ.ಮೌಲ್ಯದ ಬಿ.ಎಂ.ಡಬ್ಯ್ಲೂ ಕಾರು ಇದೆ. ಇವರ ಬಳಿ ಯಾವುದೆ ಆಭರಣಗಳು ಇಲ್ಲ. ಆಶಾ ಪಾಟೀಲ್ ಬಳಿ 8.33 ಲಕ್ಷ ರೂ.ಮೌಲ್ಯದ ಹೊಂಡಾ ಜಾಝ್ ಕಾರು, 14.78 ಲಕ್ಷ ರೂ.ಮೌಲ್ಯದ ಸ್ಕಾರ್ಪಿಯೊ, 10.50 ಲಕ್ಷ ರೂ.ಮೌಲ್ಯದ ಹುಂಡೈ ಐ10, 18 ಲಕ್ಷ ರೂ.ಮೌಲ್ಯದ ಇನ್ನೋವಾ, ತಾಯಿಯಿಂದ ಉಡುಗೊರೆ ರೂಪದಲ್ಲಿ ಬಂದಿರುವ ಹುಂಡೈ ಕ್ರೇಟಾ ಕಾರು ಇದೆ. 92.80 ಲಕ್ಷ ರೂ.ಮೌಲ್ಯದ 160 ತೊಲೆ ಬಂಗಾರ ಇದೆ.

share
Next Story
X