ರಾಜಸ್ಥಾನ :ಶಾಸಕರೊಂದಿಗೆ ಉನ್ನತ ನಾಯಕರ ಭೇಟಿಯಿಂದ ದೂರವುಳಿದ ಸಚಿನ್ ಪೈಲಟ್

ಜೈಪುರ,ಎ.17: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜೊತೆ ಭಿನ್ನಾಭಿಪ್ರಾಯವನ್ನು ಹೊಂದಿರುವ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಸೋಮವಾರ ಪಕ್ಷದ ನಾಯಕರಿಂದ ಶಾಸಕರ ವ್ಯಕ್ತಿಗತ ಭೇಟಿಯನ್ನು ತಪ್ಪಿಸಿಕೊಂಡಿದ್ದಾರೆ. ಪೈಲಟ್ ಜನಸಂಪರ್ಕ ಕಾರ್ಯಕ್ರಮಕ್ಕಾಗಿ ಭೇಟಿಯಿಂದ ದೂರವಿದ್ದರು ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಗೆಹ್ಲೋಟ್,ಕಾಂಗ್ರೆಸ್ ಉಸ್ತುವಾರಿ ಸುಖಜಿಂದರ್ ಸಿಂಗ್ ರಾಂಧವಾ ಮತ್ತು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ಸಿಂಗ್ ದೋಟಸ್ರಾ ಅವರು ಚುನಾವಣೆಯ ಪೂರ್ವಸಿದ್ಧತೆಗಾಗಿ ಒಬ್ಬೊಬ್ಬರೇ ಶಾಸಕರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಚರ್ಚಿಸುತ್ತಿದ್ದಾರೆ. ಸೋಮವಾರ ಪೈಲಟ್ ಜೊತೆ ಭೇಟಿ ನಿಗದಿಯಾಗಿತ್ತು.
ಪೈಲಟ್ ಜನಸಂಪರ್ಕ ಕಾರ್ಯಕ್ರಮ ಮೊದಲೇ ನಿಗದಿಯಾಗಿತ್ತು ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.
Next Story





