ಸಲಿಂಗ ವಿವಾಹ ನಗರ ಗಣ್ಯರ ದೃಷ್ಟಿಕೋನದ ಪ್ರತಿಬಿಂಬ: ಸುಪ್ರೀಂಕೋರ್ಟ್‌ಗೆ ತಿಳಿಸಿದ ಕೇಂದ್ರ ಸರಕಾರ

ಹೊಸದಿಲ್ಲಿ, ಎ. 17: ಸಲಿಂಗ ವಿವಾಹ ‘ನಗರ ಗಣ್ಯರ’ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸರಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ವಿವಾಹಕ್ಕೆ ಅಂಗೀಕಾರ ನೀಡುವುದು ಶಾಸಕಾಂಗ. ಆದುದರಿಂದ ನ್ಯಾಯಾಲಯ ಇದರಿಂದ ಹಿಂದೆ ಸರಿಯಬೇಕು ಎಂದು ಅದು ತಿಳಿಸಿದೆ.
ಸಲಿಂಗ ವಿವಾಹವು ಸಾಮಾಜಿಕ ಸ್ವೀಕಾರದ ಉದ್ದೇಶಕ್ಕಾಗಿ ಕೇವಲ ‘ನಗರ ಗಣ್ಯ’ರ ದೃಷ್ಟಿಕೋನವಾಗಿದೆ. ಸಮರ್ಥ ಶಾಸಕಾಂಗವು ಗ್ರಾಮೀಣ, ಅರೆನಗರ ಹಾಗೂ ನಗರ ವಾಸಿಗಳ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡು, ಧಾರ್ಮಿಕ ಪಂಗಡ, ವೈಯುಕ್ತಿಕ ಕಾನೂನು, ವಿವಾಹ ಪದ್ಧತಿಗಳ ಜೊತೆಗೆ ಅದರ ಪರಿಣಾಮಗಳನ್ನು ಗಮನಿಸುತ್ತದೆ ಎಂದು ಕೇಂದ್ರ ಸರಕಾರ ಹೇಳಿದೆ. ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಗಳ ಸಂಬಂಧ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡಾವಿಟ್‌ನಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
Next Story





