ಜಲಮಂಡಳಿ ಕಾಮಗಾರಿ ನಿರ್ಲಕ್ಷ್ಯ ಆರೋಪ: ಬೆಂಗಳೂರಿನಲ್ಲಿ ಪುಟ್ಟ ಮಗು ಬಲಿ

ಬೆಂಗಳೂರು: ಬಿಡಬ್ಲ್ಯುಎಸ್‌ಎಸ್‌ಬಿ (BWSSB) ಅಗೆದಿದ್ದ ಕಾಮಗಾರಿ ಗುಂಡಿಗೆ ಎರಡೂವರೆ ವರ್ಷದ ಮಗುವೊಂದು ಬಿದ್ದು ಮೃತಪಟ್ಟಿರುವುದು ನಗರದ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಗೊಲ್ಲರಹಟ್ಟಿ ಪೈಪ್ ಲೇನ್ನಲ್ಲಿ ಮಂಗಳವಾರ ಬೆಳಗ್ಗೆ ವರದಿಯಾಗಿದೆ.
ಮೃತ ಬಾಲಕನನ್ನು ಉತ್ತರಪ್ರದೇಶ ಮೂಲದ ಹನುಮಾನ್ ದಂಪತಿಯ ಪುತ್ರ ಕಾರ್ತಿಕ್ ಎಂದು ಗುರುತಿಸಲಾಗಿದೆ.
ಕಾಮಗಾರಿಗಾಗಿ ಹೊಂಡ ತೆಗೆದಿದ್ದ ಬಿಡಬ್ಲ್ಯುಎಸ್‌ಎಸ್‌ಬಿ ಅದನ್ನು ಮುಚ್ಚದೆ ಹಾಗೇ ಬಿಟ್ಟಿತ್ತು. ಆಟವಾಡುತ್ತಾ ಹೊಂಡದ ಬಳಿ ಹೋದ ಮಗು ಅದಕ್ಕೆ ಕಾಲು ಜಾರಿ ಬಿದ್ದು ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ.
ಕೂಲಿ ಕೆಲಸಕ್ಕಾಗಿ ಇವರ ಕುಟುಂಬ ಬೆಂಗಳೂರಿಗೆ ಬಂದಿತ್ತು. ಬಿಡಬ್ಲ್ಯುಎಸ್‌ಎಸ್‌ಬಿ ಎಂಜಿನಿಯರ್ ಹಾಗು ಕಾಂಟ್ರ್ಯಾಕ್ಟರ್ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮಗು ಸಾವಿಗೆ ಕಾರಣರಾದ BWSSB ಇಂಜಿನಿಯರ್ ಹಾಗೂ ಕಂಟ್ರಾಕ್ಟರ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Next Story









