Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಆಪರೇಷನ್ ಫ್ಲಡ್‌ನಿಂದ ನಮ್ಮ ದೇಸೀ...

ಆಪರೇಷನ್ ಫ್ಲಡ್‌ನಿಂದ ನಮ್ಮ ದೇಸೀ ತಳಿಗಳಿಗೆ ಹಿನ್ನಡೆಯಾಯಿತೇ?

ಕೇಸರಿ ಹರವೂ, ಬೆಂಗಳೂರುಕೇಸರಿ ಹರವೂ, ಬೆಂಗಳೂರು18 April 2023 12:26 PM IST
share
ಆಪರೇಷನ್ ಫ್ಲಡ್‌ನಿಂದ ನಮ್ಮ ದೇಸೀ ತಳಿಗಳಿಗೆ ಹಿನ್ನಡೆಯಾಯಿತೇ?

►► ಸರಣಿ - 05

ವಿಶ್ವದಲ್ಲೇ ಬೃಹತ್ ಅನಿಸಿಕೊಂಡಿದ್ದ ಆಪರೇಷನ್ ಫ್ಲಡ್ ಯೋಜನೆಯಿಂದ ನೂರಾರು ದೇಸೀ ಹಸು ತಳಿಗಳು ಕಡಿಮೆಯಾಗತೊಡಗಿದವು. ಕೆಲವು ತಳಿಗಳು ಮಾಯವೇ ಆಗತೊಡಗಿವೆ. ಈ ನಷ್ಟವನ್ನು ಧಾರ್ಮಿಕವಾಗಿ ನೋಡಬೇಕಿಲ್ಲ. ಜೀವವೈವಿಧ್ಯ ದೃಷ್ಟಿಕೋನದಿಂದ ನೋಡಬೇಕು. ಇದರಿಂದಾಗಿ ನಮ್ಮ ಆಹಾರ ಸಾರ್ವಭೌಮತೆ ಮತ್ತು ಆರೋಗ್ಯದ ಮೇಲೆಯೂ ಪೆಟ್ಟು ಬೀಳುವಂತಾಗಿದೆ.

ಆಪರೇಷನ್ ಫ್ಲಡ್ನ ದೊಡ್ಡ ಯಶಸ್ಸಿನಿಂದಾಗಿ ದೇಶದಲ್ಲಿ ಡೇರಿ ಉದ್ದಿಮೆ ಬೆಳೆದಂತೆಲ್ಲಾ ಆ ಯೋಜನೆಯ ಉದ್ದೇಶಿತ ರಾಷ್ಟ್ರೀಯ ಮಿಲ್ಕ್ ಗ್ರಿಡ್ನ ಸ್ಥಾಪನೆಯೂ ಆಯಿತು. ಹಾಲಿನ ಕೊರತೆ ಅನುಭವಿಸುತ್ತಿದ್ದ ನಗರ, ಪಟ್ಟಣಗಳಿಗೆ ಬೇಡಿಕೆಗೆ ಸಾಕಾಗುವಷ್ಟು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪೂರೈಸಲು ಸಾಧ್ಯವಾಯಿತು. ಆದರೆ, ವಿಶ್ವದಲ್ಲೇ ಬೃಹತ್ ಅನಿಸಿಕೊಂಡಿದ್ದ ಈ ಯೋಜನೆಯಿಂದ ನೂರಾರು ದೇಸೀ ಹಸು ತಳಿಗಳು ಕಡಿಮೆಯಾಗತೊಡಗಿದವು. ಕೆಲವು ತಳಿಗಳು ಮಾಯವೇ ಆಗತೊಡಗಿವೆ. ಈ ನಷ್ಟವನ್ನು ಧಾರ್ಮಿಕವಾಗಿ ನೋಡಬೇಕಿಲ್ಲ. ಜೀವವೈವಿಧ್ಯ ದೃಷ್ಟಿಕೋನದಿಂದ ನೋಡಬೇಕು. ಇದರಿಂದಾಗಿ ನಮ್ಮ ಆಹಾರ ಸಾರ್ವಭೌಮತೆ ಮತ್ತು ಆರೋಗ್ಯದ ಮೇಲೆಯೂ ಪೆಟ್ಟು ಬೀಳುವಂತಾಗಿದೆ. 

ದೇಸೀ ಹಸು ತಳಿಗಳಿಗಿಂತ ವಿದೇಶಿ ತಳಿಗಳು ಮೂರು ಪಟ್ಟು ಹೆಚ್ಚು ಹಾಲನ್ನು ಕರೆಯುತ್ತವೆ ಮತ್ತು ಅವುಗಳ ಹಾಲು ಹೆಚ್ಚು ಕೊಬ್ಬಿನಂಶದಿಂದ ಕೂಡಿರುತ್ತದೆ ಎಂದು ಕಂಡುಕೊಂಡಿತು ರಾಷ್ಟ್ರೀಯ ಡೇರಿ ಅಭಿವೃದ್ಧಿ ನಿಗಮ (ಎನ್ಡಿಡಿಬಿ). ಆದರೆ ವಿದೇಶದಿಂದ ತಂದ ಜೆರ್ಸಿ, ಹೋಲ್ಸ್ಟೀನ್ ಫ್ರೀಜಿಯನ್ ತಳಿಯ ಹಸುಗಳು ಭಾರತದ ಹವಾಗುಣಕ್ಕೆ ಒಗ್ಗುವುದಿಲ್ಲ ಎನ್ನುವ ಅಂಶವೂ ಒಂದು ಸವಾಲಾಗಿದ್ದರಿಂದ, ಅವನ್ನು ದೇಸಿ  ತಳಿಗಳೊಂದಿಗೆ ಕ್ರಾಸ್ ಮಾಡುವ ತೀರ್ಮಾನಕ್ಕೆ ಬರಲಾಯಿತು. ಯೋಜನೆಯ ಎರಡನೇ ಹಂತದಲ್ಲಿ ದೇಶದಲ್ಲಿ ಕ್ರಾಸ್ ಬ್ರೀಡಿಂಗ್ ಕಾರ್ಯಕ್ರಮಕ್ಕೆ ಒತ್ತು ನೀಡಲಾಯಿತು. ಈ ಮಿಶ್ರತಳಿ ಹಸುಗಳನ್ನು ಯೋಜನೆಯನ್ನು ವಿಸ್ತರಿಸಿದ್ದ ವಿವಿಧ ರಾಜ್ಯಗಳಲ್ಲಿ ಹೈನು ರೈತರು ಕೊಳ್ಳುವಂತೆ ಉತ್ತೇಜಿಸಲಾಯಿತು. ನಮ್ಮವೇ ಹಳ್ಳಿಗಳಲ್ಲಿ ನಮ್ಮಲ್ಲಿದ್ದ ತಳಿಗಳು ಕ್ರಮೇಣ ನಶಿಸಿಹೋಗುತ್ತಿರುವುದನ್ನು, ಅವುಗಳ ಬದಲಿಗೆ ಮಿಶ್ರತಳಿ ಹಸುಗಳನ್ನು ನಾವು ಕಾಣುತ್ತಿದ್ದೇವೆ. 

ಯೋಜನೆಯ ಮೂರನೇ ಹಂತದಲ್ಲಿ ಗ್ರಾಮೀಣ ಹಸುಗಳಿಗೆ ಭೌತಿಕವಾಗಿ ಕ್ರಾಸ್ ಮಾಡುವುದನ್ನೂ ಕಡಿಮೆಮಾಡಿ, ಕೃತಕ ಗರ್ಭಧಾರಣೆ ಮಾಡಿಸುವ ಮೂಲಕ ವಿದೇಶಿ ತಳಿಗಳ ವೀರ್ಯವನ್ನು ಕ್ರಾಸ್ ಮಾಡಲಾಯಿತು. ಕೆಲವೆಡೆ ಈ ಕಾರ್ಯಕ್ರಮವನ್ನು ಎಷ್ಟು ಕಟ್ಟುನಿಟ್ಟಾಗಿ ಮಾಡಲಾಯಿತು ಎಂದರೆ, ಕೇರಳದಲ್ಲಿ ದೇಸಿ ಹೋರಿಗಳಿಗೆ ಕಡ್ಡಾಯವಾಗಿ ಗರ್ಭ ನಿರೋಧಕ ಚಿಕಿತ್ಸೆ ನೀಡಬೇಕು ಎನ್ನುವಷ್ಟರ ಮಟ್ಟಿಗೂ ಹೋಯಿತು.   

ಆದರೆ, ಆ ಮಿಶ್ರತಳಿ ಹಸುಗಳಿಗೆ ನೀಡುತ್ತಿರುವ ಅತ್ಯುತ್ತಮ ಪೌಷ್ಟಿಕ ಆಹಾರ, ಆರೋಗ್ಯ ಸೇವೆ, ವಿಟಮಿನ್ ಮತ್ತು ಹಾರ್ಮೋನ್ ವರ್ಧನೆ ಮುಂತಾದವನ್ನು ನಮ್ಮ ತಳಿಗಳಿಗೆ ಒದಗಿಸಿದ್ದರೂ, ದೇಶದ ಹಾಲು ಉತ್ಪಾದನೆ ಇದೇ ಪ್ರಮಾಣದಲ್ಲಿಯೇ ಇರುತ್ತಿತ್ತು ಎನ್ನುವ ಒಂದು ವಾದವೂ ಇದೆ. ಮಹಾರಾಷ್ಟ್ರ ಸರಕಾರದ ಜೀನ್ ಬ್ಯಾಂಕ್ ಪ್ರೋಗ್ರಾಂನ ಎಸ್.ವಿ. ಓಜಸ್, ಅಲೋಕ್ ಬಂಗ್ ಮತ್ತು ಮಿಲಿಂದ್ ವಾತ್ವೆ ಅವರ ಅಧ್ಯಯನ ಕುತೂಹಲಕರ ಅಂಶಗಳನ್ನು ಹೊರಗೆಡವುತ್ತವೆ.  

ಭಾರತದ ಡೇರಿಗಳು ಪ್ರಮುಖವಾಗಿ ಹಸು ಮತ್ತು ಎಮ್ಮೆಗಳಿಂದ ಹಾಲನ್ನು ಶೇಖರಿಸುತ್ತವೆ. ಒಂದು ಅಂದಾಜಿನ ಪ್ರಕಾರ 2020ರಲ್ಲಿ ದೇಶದ ಹಸುಗಳ ಸಂಖ್ಯೆ 19 ಕೋಟಿ ಇದ್ದರೆ, ಎಮ್ಮೆಗಳು 10 ಕೋಟಿ ಇವೆ. ಆದರೂ ದೇಶದಲ್ಲಿ ದಿನನಿತ್ಯವೂ ಶೇಖರವಾಗುವ ಹಾಲಿನ ಪ್ರಮಾಣದಲ್ಲಿ ಸುಮಾರು ಅರ್ಧದಷ್ಟು ಎಮ್ಮೆ ಹಾಲು ಇರುತ್ತದೆ. 1950ರಲ್ಲಿ 1.7 ಕೋಟಿ ಟನ್ ಇದ್ದ ಹಾಲು ಉತ್ಪಾದನೆ 2013ರಲ್ಲಿ 13.77 ಕೋಟಿ ಟನ್ ತಲುಪಿತು. ಅಂದರೆ ಹಾಲು ಉತ್ಪಾದನೆ ಎಂಟು ಪಟ್ಟು ಹೆಚ್ಚಿತು.  

ಒಂದು ದೇಸೀ ಹಸು, ಅದು ಹಾಲು ಕರೆಯುವ ಸೀಜನ್ನಲ್ಲಿ ದಿನಕ್ಕೆ ಸರಾಸರಿ 2.46 ಲೀಟರ್ ಹಾಲು ನೀಡುತ್ತದೆ. ಅದೇ ಮಿಶ್ರತಳಿ ಹಸು 7.4 ಲೀಟರ್ ನೀಡುತ್ತದೆ. ಮಿಶ್ರತಳಿ ಹಸುಗಳ ಹಾಲಿನ ಪ್ರಮಾಣ ಶೇ. 21 ಇದ್ದರೂ, ಒಟ್ಟು ಶೇಖರವಾಗುವ ಹಸುವಿನ ಹಾಲಿನ ಪ್ರಮಾಣದಲ್ಲಿ ಶೇ. 59.15 ಆಗುತ್ತದೆ. 

1950ರಿಂದ 2012ರ ವರೆಗೆ ದೇಶದಲ್ಲಿ ಹಸುಗಳ ಸಂಖ್ಯೆ ಸುಮಾರು ಒಂದೂಕಾಲು ಪಟ್ಟು ಹೆಚ್ಚಾಗಿದ್ದರೆ, ಎಮ್ಮೆಗಳ ಸಂಖ್ಯೆ ಎರಡೂವರೆ ಪಟ್ಟು ಹೆಚ್ಚಾಗಿದೆ. 1950ರಲ್ಲಿ ಒಂದು ಎಮ್ಮೆ ಒಂದು ದಿನಕ್ಕೆ ಸರಾಸರಿ 1.54 ಲೀಟರ್ ಹಾಲು ಕೊಟ್ಟಿದ್ದರೆ, 2012ರಲ್ಲಿ ಸರಾಸರಿ ನಾಲ್ಕೂವರೆ ಲೀಟರ್ ಕೊಟ್ಟಿದೆ. ಅಂದರೆ ಸುಮಾರು 2.9ರಷ್ಟು ಪ್ರಮಾಣ ಹೆಚ್ಚಿದೆ. ಇದು ಸಾಧ್ಯವಾದದ್ದು ಎಮ್ಮೆಗಳಿಗೆ ಉತ್ತಮ ಪೌಷ್ಟಿಕ ಆಹಾರ, ಆರೋಗ್ಯ, ಉತ್ತಮ ವಂಶಾಭಿವೃದ್ಧಿಗಾಗಿ ನೀಡಿದ ಹೆಚ್ಚುವರಿ ಹಾರ್ಮೋನುಗಳು ಮತ್ತು ಉತ್ತಮ ಲಿಂಗ ಅನುಪಾತ ನಿರ್ವಹಣೆ, ಮುಂತಾದವುಗಳಿಂದ. ಈಗ ದೇಶದಲ್ಲಿ ಕೋಣಗಳ ಸಂಖ್ಯೆಗಿಂತ ಎಮ್ಮೆಗಳ ಸಂಖ್ಯೆ ಹೆಚ್ಚಾಗಿರುವುದೇ ಇದಕ್ಕೆ ನಿದರ್ಶನ. ಹಾಗಾಗಿ, ಮಿಶ್ರತಳಿ ಹಸುಗಳಿಂದ, ಅವುಗಳಿಗೆ ಕೃತಕ ಗರ್ಭ ಕೊಡಿಸುವುದರಿಂದ ಆದ ಹಾಲು ಹೆಚ್ಚಳಿಕೆಯ ಪ್ರಮಾಣದಷ್ಟೇ ಅದ್ಯಾವುದೂ ಇಲ್ಲದ ಎಮ್ಮೆಗಳಿಂದಲೂ ಆಗಿದೆ. 

ದೇಸೀ ಹಸುಗಳಿಗೂ ಅಷ್ಟೇ ಪ್ರಮಾಣದಲ್ಲಿ, ಗುಣಮಟ್ಟದಲ್ಲಿ ಸೌಲಭ್ಯಗಳನ್ನು ನೀಡುವುದರಿಂದ ಅವುಗಳ ಗರ್ಭಧಾರಣಾ ಶಕ್ತಿಯೂ ಹೆಚ್ಚುತ್ತದೆ, ಹಾಲಿನ ಪ್ರಮಾಣವೂ ಹೆಚ್ಚುತ್ತದೆ. ಕೃತಕ ಗರ್ಭ ಕೊಡಿಸುವ ಅಗತ್ಯವೇ ಇರುವುದಿಲ್ಲ. 2012ರಲ್ಲಿ ಆದ ಒಟ್ಟು ಹಾಲು ಉತ್ಪಾದನೆಯಲ್ಲಿ ದೇಸೀ ಹಸುಗಳ ಪಾಲು 2.7 ಕೋಟಿ ಟನ್ (ಶೇ. 21.68) ಇತ್ತು. ಅದೇ ಮಿಶ್ರತಳಿಗಳ ಉತ್ಪಾದನೆ 3.86 ಕೋಟಿ ಟನ್ (ಶೇ. 31.39) ಆಗಿದ್ದರೆ, ಎಮ್ಮೆಗಳ ಪಾಲು 5.77 ಕೋಟಿ ಟನ್ (ಶೇ 46.97) ಇತ್ತು. ದೇಸೀ ಹಸುಗಳ ಉತ್ಪಾದನೆಯ ಪಾಲು ಮಿಶ್ರತಳಿಗಳ ಪಾಲಿನ ಒಂದನೇ ಮೂರರಷ್ಟು ಇತ್ತು ಎಂದರೂ, ಬರೀ ದೇಸೀ ಇದ್ದಿದ್ದರೆ 3.86 ಕೋಟಿ ಟನ್ ಬದಲಿಗೆ 1.3 ಕೋಟಿ ಟನ್ ಇರುತ್ತಿತ್ತು. ಅಂದರೆ ಒಟ್ಟು ಉತ್ಪಾದನೆಯ ಶೇ. 20ರಷ್ಟು ಕಡಿಮೆ ಇರುತ್ತಿತ್ತು. ಹಾಗಾಗಿ, ಮಿಶ್ರತಳಿಗಳನ್ನು ಪರಿಚಯಿಸದೆ ಇದ್ದಿದ್ದರೆ, ಭಾರತದ ವಾರ್ಷಿಕ ಹಾಲು ಉತ್ಪಾದನೆ 1950ಕ್ಕೆ ಹೋಲಿಸಿದರೆ ಎಂಟು ಪಟ್ಟು ಹೆಚ್ಚಾಗಿದ್ದರ ಬದಲಿಗೆ 6.4 ಪಟ್ಟು ಹೆಚ್ಚಾಗಿರುತ್ತಿತ್ತು. ಹೀಗಿದ್ದಲ್ಲಿ, ಆಪರೇಷನ್ ಫ್ಲಡ್ ನ ಮಿಕ್ಕೆಲ್ಲ ಯೋಜನಾ ಅಂಗಗಳನ್ನೂ ಹಾಗೆಯೇ ಸಮರ್ಥವಾಗಿ ಬಳಸಿಕೊಂಡು, ಮಿಶ್ರತಳಿ ಅಭಿವೃದ್ಧಿಗೆ ಮತ್ತು ಕೃತಕ ಗರ್ಭ ಕಾರ್ಯಕ್ರಮಕ್ಕೆ ವ್ಯಯಿಸಿದ ಹಣವನ್ನು ದೇಸೀ ತಳಿಗಳ ಅಭಿವೃದ್ಧಿಗೆ ಹೂಡಿದ್ದರೆ ಹೆಚ್ಚು ಕಡಿಮೆ ಈಗಿನಷ್ಟೇ ಫಲಿತಾಂಶವನ್ನು ನಾವು ಕಾಣುತ್ತಿದ್ದೆವಲ್ಲವೇ? ಇದು ಮೇಲೆ ಹೇಳಿದ ಅಧ್ಯಯನಕಾರರ ವಾದ. 

ಈ ಅಧ್ಯಯನಕ್ಕೆ ಹಲವು ರೀತಿಯ ಆಕ್ಷೇಪಗಳೂ, ಸಮರ್ಥನೆಗಳೂ ಇರಬಹುದು. ಆದರೆ, ನಾವಿಲ್ಲಿ ಗಮನಿಸಬೇಕಾದ ಅಂಶವೆಂದರೆ ಆಹಾರ ವೈವಿಧ್ಯದ ಮತ್ತು ಜೀವವೈವಿಧ್ಯದ ದೃಷ್ಟಿಯಿಂದ ದೇಸೀ ತಳಿಗಳನ್ನು ಉಳಿಸಿಕೊಂಡು, ಅಭಿವೃದ್ಧಿ ಮಾಡುವುದು ಒಳ್ಳೆಯದಲ್ಲವೇ?

ಇದನ್ನು ಭಾವನಾತ್ಮಕವಾಗಿ ನೋಡಲೇಬಾರದು. ಏಕೆಂದರೆ, ಇಂದು ಕೃಷಿಯಲ್ಲಿ ತಳಿ ಮಾರ್ಪಾಡು ತಂತ್ರಜ್ಞಾನದಿಂದ ಆಗಿರುವಂತಹ ಅವಾಂತರಗಳನ್ನು ನಾವು ನೋಡುತ್ತಿರುವಂತೆಯೇ, ಇಡಿಯ ಕೃಷಿಯೇ ರೈತನ ಕೈತಪ್ಪಿಕಾರ್ಪೊರೇಟ್ ಹಿಡಿತಕ್ಕೆ ಹೋಗುತ್ತಿರುವ ಪರಿಸ್ಥಿತಿಯನ್ನು ನೋಡುತ್ತಿರುವಂತೆಯೇ, ವಿಶ್ವದಲ್ಲಿ ಬದಲಾಗುತ್ತಿರುವ ಅಥವಾ ಈಗಾಗಲೇ ಬದಲಾಗಿ ಹೋಗಿರುವ ಡೇರಿ ಉದ್ಯಮದ ಕುರಿತಂತೆಯೂ ಅದೇ ಆತಂಕ ಮತ್ತು ಅಪಾಯವನ್ನು ನಾವು ಎದುರಿಸಲಿದ್ದೇವೆ. ಈಗಾಗಲೇ ಪಾಶ್ಚಾತ್ಯ ದೇಶಗಳ ಕಾರ್ಪೊರೇಟ್ ಡೇರಿ ಮನುಷ್ಯನ ಮತ್ತು ಭೂಮಿಯ ಆರೋಗ್ಯಕ್ಕೆ ತಂದೊಡ್ಡಿರುವ ಅಪಾಯಗಳನ್ನು ನಾವು ಕಾಣಲು ಆರಂಭಿಸಿದ್ದೇವೆ.  

1995ರಲ್ಲಿ ಗ್ಯಾಟ್ ಒಪ್ಪಂದಕ್ಕೆ ನಾವು ಸಹಿ ಹಾಕಿ, ಜಾಗತೀಕರಣಕ್ಕೆ ಒಡ್ಡಿಕೊಂಡು, ಕೃಷಿಯಲ್ಲಿ ಹತ್ತಾರು ಮಾರ್ಪಾಡುಗಳನ್ನು ಕಂಡಿದ್ದೇವೆ. ಆದರೆ, ಈ ಸಹಸ್ರಮಾನದ ಆರಂಭದವರೆಗೂ ಗ್ಯಾಟ್ನಲ್ಲಿ ಡೇರಿ ಉದ್ಯಮಕ್ಕೆ ಕೆಲವು ರಿಯಾಯಿತಿಗಳಿದ್ದವು. ಆನಂತರ ಹಲವು ಮಾರ್ಪಾಡುಗಳು ನಡೆದಿವೆ. ಆ ಮಾರ್ಪಾಡುಗಳು ಇಂದು ಭಾರತದ ಡೇರಿ ಕ್ಷೇತ್ರಕ್ಕೂ ತಟ್ಟಿದ್ದು, ನಮ್ಮ ಸಹಕಾರಿ ಸಂಸ್ಥೆಗಳೇ ಒಂದರೊಂದಿಗೆ ಒಂದು ಸ್ಪರ್ಧೆಗೆ ಇಳಿಯುವಂತೆ ಮಾಡಿವೆ. ಆ ಸ್ಪರ್ಧೆಯಲ್ಲಿ ಗೆಲ್ಲುವ ಅನಿವಾರ್ಯದಿಂದ ಅವೂ ಜಾಗತಿಕ ಡೇರಿ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿವೆ. ಅವನ್ನು ನಾವು ಅರ್ಥಮಾಡಿಕೊಂಡಾಗಲೇ ನಮಗೆ ನಂದಿನಿ ಮತ್ತು ಅಮೂಲ್ ನಡುವಿನ ಸ್ಪರ್ಧೆಯೂ, ಅದರ ಹಿಂದಿರುವ ಹುನ್ನಾರಗಳೂ ಅರ್ಥವಾಗುವುದು.

(ನಾಳೆ: ಡೇರಿ ವಿಚಾರದಲ್ಲಿ ಗ್ಯಾಟ್ ಬೆಳವಣಿಗೆಗಳು ಮತ್ತು ಜಾಗತೀಕರಣದ ಸಂದರ್ಭದಲ್ಲಿ ಸಹಕಾರಿ ಡೇರಿ ಉದ್ದಿಮೆ)

share
ಕೇಸರಿ ಹರವೂ, ಬೆಂಗಳೂರು
ಕೇಸರಿ ಹರವೂ, ಬೆಂಗಳೂರು
Next Story
X