ಬಿಜೆಪಿ ಸೇರಲಿದ್ದಾರೆಂಬ ವದಂತಿಯ ನಡುವೆ ತನ್ನ ಟ್ವಿಟರ್ ಬಯೋದಿಂದ ಎನ್‌ಸಿಪಿ ಚಿಹ್ನೆ ತೆಗೆದ ಅಜಿತ್ ಪವಾರ್

ಮುಂಬೈ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸೋದರಳಿಯ ಅಜಿತ್ ಪವಾರ್ ಅವರು ಬಿಜೆಪಿಗೆ ಸೇರಲಿದ್ದಾರೆ ಎಂಬ ವದಂತಿಗಳ ನಡುವೆಯೇ ತಮ್ಮ ಟ್ವಿಟರ್ ಮತ್ತು ಫೇಸ್‌ಬುಕ್ ಬಯೋದಿಂದ ಎನ್‌ಸಿಪಿ ಲೋಗೋವನ್ನು ಅವರು ತೆಗೆದುಹಾಕಿದ್ದಾರೆ
ಅದಾಗ್ಯೂ, ಅಜಿತ್ ಪವಾರ್ ಬಿಜೆಪಿಗೆ ಸೇರ್ಪಡೆಗೊಳ್ಳುವ ಕುರಿತು ಮಾಧ್ಯಮ ವರದಿಗಳನ್ನು ಶರದ್ ಪವಾರ್ ನಿರಾಕರಿಸಿದ್ದಾರೆ.
ಅಜಿತ್ ಅವರು ಚುನಾವಣಾ ಸಂಬಂಧಿತ ಕೆಲಸಗಳಲ್ಲಿ ನಿರತರಾಗಿದ್ದಾರೆ ಎಂದು ಹೇಳಿದ ಶರದ್, ಪಕ್ಷದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಬಗೆಗಿನ ಎಲ್ಲಾ ವರದಿಗಳು ಕೇವಲ ವದಂತಿಗಳಾಗಿವೆ ಎಂದು ಹೇಳಿದ್ದಾರೆ.
Next Story





