Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪ್ರಧಾನಿ ಮೋದಿ ವಿರುದ್ಧ ನಿರ್ಣಯ...

ಪ್ರಧಾನಿ ಮೋದಿ ವಿರುದ್ಧ ನಿರ್ಣಯ ಅಂಗೀಕರಿಸಿದ ದಿಲ್ಲಿ ವಿಧಾನಸಭೆ

18 April 2023 3:48 PM IST
share
ಪ್ರಧಾನಿ ಮೋದಿ ವಿರುದ್ಧ ನಿರ್ಣಯ ಅಂಗೀಕರಿಸಿದ ದಿಲ್ಲಿ ವಿಧಾನಸಭೆ

ಹೊಸದಿಲ್ಲಿ: ದಿಲ್ಲಿ ಸರ್ಕಾರದ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ  ಸಮನ್ಸ್‌ ಕಳುಹಿಸಿದ್ದ ಸಿಬಿಐ ಅವರನ್ನು ಸುಮಾರು ಒಂಬತ್ತು ಗಂಟೆಗಳ ಕಾಲ ಪ್ರಶ್ನಿಸಿದ ಬೆಳವಣಿಗೆಯ ನಂತರ ಸೋಮವಾರ ನಡೆದ ದಿಲ್ಲಿ ವಿಧಾನಸಭೆಯ (Delhi Assembly) ವಿಶೇಷ ಅಧಿವೇಶನವು ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ನಿರ್ಣಯವನ್ನು ಅಂಗೀಕರಿಸಿದೆ.

"ಅರವಿಂದ್‌ ಕೇಜ್ರಿವಾಲ್‌ ಅವರ ಬೆಳೆಯುತ್ತಿರುವ ಜನಪ್ರಿಯತೆಯನ್ನು ತಡೆಯಲು ವಿಫಲವಾದ ನಂತರ ತನಿಖಾ ಏಜನ್ಸಿಗಳನ್ನು ಅವರ ವಿರುದ್ಧ ಛೂ ಬಿಟ್ಟಿದ್ದಕ್ಕಾಗಿ" ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಈ ನಿರ್ಣಯ ಅಂಗೀಕರಿಸಲಾಗಿದೆ.

ಮುಖ್ಯಮಂತ್ರಿ ಕೇಜ್ರಿವಾಲ್‌ ಮಾತನಾಡಿ, "ಇಂದು ನಾನು ಸದನಕ್ಕೆ ಅನ್‌ಪಢ್‌ ರಾಜಾ (ಅನಕ್ಷರಸ್ಥ ರಾಜ) ಒಬ್ಬನ ಕಥೆ ಹೇಳುತ್ತೇನೆ, ರಾಜ ಒಬ್ಬ ಚೌಥೀ (ನಾಲ್ಕನೇ ಕ್ಲಾಸ್)‌ ಪಾಸ್‌ ಆಗಿದ್ದ, ತುಂಬಾ ಅಹಂಕಾರಿಯಾಗಿದ್ದ ಮತ್ತು ಹಣಕ್ಕಾಗಿ ಅದೆಷ್ಟು ದುರಾಸೆಯಿತ್ತೆಂದರೆ ಆತ ಅತೀವ ಭ್ರಷ್ಟನಾಗಿದ್ದ," ಎಂದು ಹೇಳಿದರು.

"ಅಧಿಕಾರಿಗಳು ಬಂದು ಇಂಗ್ಲಿಷಿನಲ್ಲಿ ಮಾತನಾಡುತ್ತಿದ್ದರು ಆದರೆ ರಾಜನಿಗೆ ಒಂದೂ ಅರ್ಥವಾಗುತ್ತಿರಲಿಲ್ಲ. ಈ ಚೌಥೀ ಪಾಸ್‌ ರಾಜ ಏನೆಲ್ಲಾ ಸಹಿ ಹಾಕಿದ ಎಂದು ಗೊತ್ತಿಲ್ಲ, ಕೊನೆಗೆ ಚೌಥೀ ಪಾಸ್‌ ಎಂದು ಹೇಳುತ್ತಾರೆಂದು ನಕಲಿ ಡಿಗ್ರಿ ಪಡೆದು ತಾನು ಎಂಎ ಮಾಡಿದ್ದೇನೆಂದು ಹೇಳಿಕೊಂಡ. ಜನರು ಆರ್‌ಟಿಐ ಹಾಕಲು ಆರಂಭಿಸಿದಾಗ ಅವರಿಗೆ ರೂ. 25,000 ದಂಡ ವಿಧಿಸಲಾಯಿತು," ಎಂದರು.

ವಿಪಕ್ಷ ಸದಸ್ಯರ ಸ್ಥಾನಗಳತ್ತ ನೋಡಿದ ಕೇಜ್ರಿವಾಲ್‌ ನಿಮ್ಮ ನಾಯಕನ ಬಗ್ಗೆ ಮಾತನಾಡುತ್ತಿಲ್ಲ, ನೀವೂ ನಗಬಹುದು ಎಂದರು.

"ಒಂದು ದಿನ ಕೆಲ ಜನರು ರಾಜನ ಬಳಿ ಬಂದು ಅಮಾನ್ಯೀಕರಣ ಘೋಷಿಸಲು ಹೇಳಿದರು., ಆತನಿಗೆ ಏನೂ ಅರ್ಥವಾಗಲಿಲ್ಲ, ಆತ ಅದನ್ನು ಟಿವಿಯಲ್ಲಿ ಘೋಷಿಸಿಬಿಟ್ಟ ಮತ್ತು ಇಡೀ ದೇಶ ಕಷ್ಟಪಟ್ಟಿತು. ನಂತರ ಆತನಿಗೆ ಹಣ ಮಾಡಬೇಕಿತ್ತು, ಸ್ನೇಹಿತನಿಗೆ ಕರೆ ಮಾಡಿ ನಿನಗೆ ಎಲ್ಲಾ ಸರ್ಕಾರಿ ಗುತ್ತಿಗೆ ಕೊಡಿಸುತ್ತೇನೆ, ಹಣ ನನ್ನದು, ಮುಖ ನಿನ್ನದು ಎಂದು ಹೇಳಿದ," ಎಂದು ಹೇಳಿದ ಕೇಜ್ರಿವಾಲ್‌ ತಮ್ಮ ಕಥೆ ಮುಕ್ತಾಯಗೊಳಿಸುತ್ತಾ, "ಒಂದು ದಿನ ಜನರು ರಾಜಾನನ್ನು ಪಟ್ಟದಿಂದ ಕೆಳಕ್ಕಿಳಿಸಿ ಆತನ ಸ್ಥಾನಕ್ಕೆ ಪ್ರಾಮಾಣಿಕ, ದೇಶಭಕ್ತ ವ್ಯಕ್ತಿಯೊಬ್ಬನನ್ನು ತಂದರು, ದೇಶ ನಂತರ ಪ್ರಗತಿ ಕಂಡಿತು," ಎಂದರು.

ವಿಧಾನಸಭೆ ʼಅಸಂವಿಧಾನಿಕವಾಗಿ ಕಾರ್ಯಾಚರಿಸುತ್ತಿದೆʼ ಎಂದು ಆರೋಪಿಸಿ ಮೂವರು ಬಿಜೆಪಿ ಸದಸ್ಯರು ಸದನದಿಂದ ಹೊರನಡೆದರೆಂದು ವರದಿಯಾಗಿದೆ.

share
Next Story
X