ಎ.22ರಂದು ‘ದಿಗಂತಯಾನ’ ಕೃತಿಯ ಬಿಡುಗಡೆ

ಉಡುಪಿ, ಎ.18: ಲೇಖಕ, ಪತ್ರಕರ್ತ ನಿವೃತ್ತ ಶಿಕ್ಷಕ ಶಿಕಾರಿಪುರ ಈಶ್ವರ ಭಟ್ ಅವರ ಪತ್ರಕರ್ತನ ಅನುಭವ ಕಥನ ‘ದಿಗಂತಯಾನ’ ಕೃತಿಯ ಬಿಡುಗಡೆ ಸಮಾರಂಭವು ಎ.22ರಂದು ಸಂಜೆ 4ಗಂಟೆಗೆ ಉಡುಪಿ ಕಿದಿಯೂರು ಹೊಟೇಲಿನ ಅನಂತಶಯನ ಸಭಾಂಗಣದಲ್ಲಿ ನಡೆಯಲಿದೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿಕಾರಿಪುರ ಈಶ್ವರ ಭಟ್, ಮೂಡಬಿದಿರೆ ಕೋಡಂಗಲ್ಲು ಶ್ರೀನಂದಿಕೇಶ್ವರ ಸೇವಾ ಟ್ರಸ್ಟ್ ಆಶ್ರಯದಲ್ಲಿ ಉಡುಪಿ ಸುಹಾಸಂ ಸಹಯೋಗದಲ್ಲಿ ಹಮ್ಮಿಕೊ ಳ್ಳಲಾಗಿರುವ ಕಾರ್ಯಕ್ರಮದಲ್ಲಿ ಹೊಸದಿಗಂತ ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಪಿ.ಎಸ್.ಪ್ರಕಾಶ್ ಕೃತಿ ಬಿಡುಗಡೆ ಮಾಡಲಿರುವರು. ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ್ ಕೃತಿ ಪರಿಚಯ ಮಾಡಲಿರುವರು ಎಂದರು.
ಅಧ್ಯಕ್ಷತೆಯನ್ನು ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ ಐತಾಳ್ ವಹಿಸಲಿರುವರು. ಈ ಕೃತಿಯು 24 ಅಧ್ಯಾಯನ ಗಳನ್ನು ಒಳಗೊಂಡಿವೆ. ಚಿತ್ರ ವಿಚಿತ್ರ ಸುದ್ದಿಗಳನ್ನೊಂಡ ಸುದ್ದಿ ಮಾಲಿಕೆ, ಲೇಖನ ಮಾಲಿಕೆ, ಗಣ್ಯ ಸಂದರ್ಶನ ಮಾಲಿಕೆ, ವಿಶೇಷ ವರದಿ ಮಾಲಿಕೆ ಸೇರಿದಂತೆ ಆರು ವಿಭಾಗಗಳಿವೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸುಹಾಸಂ ಅಧ್ಯಕ್ಷ ಎಚ್.ಶಾಂತರಾಜ ಐತಾಳ್ ಹಾಜರಿದ್ದರು.