ಮಂಗಳೂರು ವಿಮಾನ ನಿಲ್ದಾಣದಲ್ಲಿ ಫಾಸ್ಟ್ಯಾಗ್ ಕಾರು ಪಾರ್ಕ್ ಸೌಲಭ್ಯ

ಮಂಗಳೂರು, ಎ.17: ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಫಾಸ್ಟ್ಯಾಗ್ ಅವಳವಡಿಕೆ ಯೊಂದಿಗೆ ಸ್ವಯಂಚಾಲಿತ ಕಾರು ಪಾರ್ಕಿಂಗ್ ವ್ಯವಸ್ಥೆಗೆ ಇಂದು ಚಾಲನೆ ನೀಡಲಾಗಿದೆ.
ವಿಮಾನ ನಿಲ್ದಾಣವನ್ನು ಪ್ರವೇಶಿಸಲು, ನಿರ್ಗಮಿಸಲು ಪ್ರಯಾಣಿಕರಿಗೆ ಇದು ಅನುಕೂಲವಾಗಲಿದೆ ಎಂದು ವಕ್ತಾರರು ಹೇಳಿದ್ದಾರೆ.
ಫಾಸ್ಟ್ಯಾಗ್ ಮೂಲಕ ನಗದು ವಹಿವಾಟಿನ ಅಗತ್ಯವನ್ನು ನಿವಾರಿಸಲಿದೆ. ಪಾರ್ಕಿಂಗ್ ರಶೀದಿಗಾಗಿ ಕಾಯುವುದು ದೂರವಾಗಲಿದೆ. ಗೊತ್ತುಪಡಿಸಿದ ಫಾಸ್ಟ್ಯಾಗ್ (ಲೇನ್ 2) ಮೂಲಕ ಪ್ರವೇಶಿಸಿ (ಲೇನ್ 3) ಮೂಲಕ ಹೊರಹೋಗಬೇಕಾಗಿದೆ. ಪ್ರಯಾಣಿಕರು ಪ್ರಮಾಣಿತ ಪಾರ್ಕಿಂಗ್ ದರವನ್ನು ಪಾವತಿಸಬೇಕಾಗುತ್ತದೆ ಮತ್ತು ವಾಹನಗಳಿಗೆ ಈ ಸ್ವಯಂಚಾಲಿತ ಪಾರ್ಕಿಂಗ್ ಸೌಲಭ್ಯಕ್ಕಾಗಿ ಯಾವುದೇ ಹೆಚ್ಚುವರಿ ವೆಚ್ಚವನ್ನು ಸೇರಿಸಲಾಗಿಲ್ಲ ಎಂದು ಪ್ರಕಟನೆ ತಿಳಿಸಿದೆ.
Next Story