ಬೈಕ್ ಕಳವು: ಪ್ರಕರಣ ದಾಖಲು

ಮಂಗಳೂರು, ಎ.18: ನಗರ ಹೊರವಲಯದ ವಳಚ್ಚಿಲ್ ಮಸೀದಿಯ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಬೈಕ್ ಕಳವಾದ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರವಿವಾರ ಬೆಳಗ್ಗೆ 5ಕ್ಕೆ ಪಲ್ಸರ್ ಬೈಕ್ ನಿಲ್ಲಿಸಿ ಕೀಯನ್ನು ಅದರಲ್ಲಿಯೇ ಬಿಟ್ಟು ಮಸೀದಿಯೊಳಗೆ ಹೋಗಿ ನಮಾಝ್ ಮುಗಿಸಿ ವಾಪಸ್ ಬಂದಾಗ ಬೈಕ್ ಕಳವಾಗಿತ್ತು. ಕಳವಾದ ಬೈಕಿನ ಮೌಲ್ಯ 70,000 ರೂ. ಆಗಿದೆ ಎಂದು ಇಸ್ಮಾಯೀಲ್ ಎಂಬವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
Next Story