ಮಂಗಳೂರು: ಬ್ಯಾಂಕ್ ಮ್ಯಾನೇಜರ್ ಎಂದು ನಂಬಿಸಿ ಒಟಿಪಿ ಪಡೆದು ವಂಚನೆ

ಮಂಗಳೂರು, ಎ.18: ಬ್ಯಾಂಕ್ ಮ್ಯಾನೇಜರ್ ಎಂದು ನಂಬಿಸಿ ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತನೊಬ್ಬ ವ್ಯಕ್ತಿಗೆ ಕರೆ ಮಾಡಿ ನಿಮ್ಮ ಬ್ಯಾಂಕ್ ಖಾತೆ ಸ್ಥಗಿತಗೊಂಡಿದ್ದು, 24 ಗಟೆಯೊಳಗೆ ಕೆವೈಸಿ ಅಪ್‌ಡೇಟ್ ಮಾಡಬೇಕು ಎಂದು ಮೆಸೇಜ್ ಕಳುಹಿಸಿದ್ದ ಎನ್ನಲಾಗಿದೆ. ಬಳಿಕ ಕರೆ ಮಾಡಿದ ಅಪರಿಚಿತನು ತನ್ನನ್ನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿ ಒಟಿಪಿ ಶೇರ್ ಮಾಡುವಂತೆ ಸೂಚಿಸಿದ. ಅದನ್ನು ನಂಬಿದ ವ್ಯಕ್ತಿಯು ಒಟಿಪಿ ನೀಡಿದ ಕೂಡಲೇ ಬ್ಯಾಂಕ್ ಖಾತೆಯಿಂದ 30,677 ರೂ. ವರ್ಗಾವಣೆಗೊಂಡಿದೆ ಎನ್ನಲಾಗಿದೆ.
Next Story





