ಐಪಿಎಲ್: ಹೈದರಾಬಾದ್ ಗೆಲುವಿಗೆ 193 ರನ್ ಗುರಿ ನೀಡಿದ ಮುಂಬೈ ಇಂಡಿಯನ್ಸ್
ಕ್ಯಾಮರೂನ್ ಗ್ರೀನ್ ಅರ್ಧಶತಕ

ಹೈದರಾಬಾದ್, ಎ.18: ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅರ್ಧಶತಕದ(ಔಟಾಗದೆ 64 ರನ್, 40 ಎಸೆತ, 6 ಬೌಂಡರಿ, 2 ಸಿಕ್ಸರ್)ಕೊಡುಗೆಯ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ತಂಡದ ಐಪಿಎಲ್ ಗೆಲುವಿಗೆ 193 ರನ್ ಗುರಿ ನೀಡಿದೆ.
ಮಂಗಳವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿದೆ.
ಇನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ(28 ರನ್, 18 ಎಸೆತ) ಹಾಗೂ ಇಶಾನ್ ಕಿಶನ್(38 ರನ್, 31 ಎಸೆತ)ಮೊದಲ ವಿಕೆಟಿಗೆ 41 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಸೂರ್ಯಕುಮಾರ್ ಯಾದವ್(7 ರನ್)ಮತ್ತೊಮ್ಮೆ ನಿರಾಸೆಗೊಳಿಸಿದರು.
ಕಿಶನ್ ಜೊತೆ 2ನೇ ವಿಕೆಟಿಗೆ 46 ರನ್ ಸೇರಿಸಿದ ಗ್ರೀನ್ ಅವರು ತಿಲಕ್ ವರ್ಮಾ(37 ರನ್, 17 ಎಸೆತ) ಜೊತೆ 4ನೇ ವಿಕೆಟಿಗೆ 56 ರನ್ ಜೊತೆಯಾಟ ನಡೆಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಿದರು. ಗ್ರೀನ್ ಹಾಗೂ ಟಿಮ್ ಡೇವಿಡ್(16 ರನ್) 5ನೇ ವಿಕೆಟ್ ಜೊತೆಯಾಟದಲ್ಲಿ 41 ರನ್ ಸೇರಿಸಿ ತಂಡದ ಮೊತ್ತವನ್ನು 200ರ ಗಡಿ ತಲುಪಿಸಿದರು.
ಆತಿಥೇಯ ಹೈದರಾಬಾದ್ ಪರ ಮಾರ್ಕೊ ಜಾನ್ಸನ್(2-43)ಎರಡು ವಿಕೆಟ್ ಪಡೆದರು.