ಆಸ್ತಿ ವಿವರ ಘೋಷಿಸಿದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಲಕ್ಷ್ಮಿ ಹೆಬ್ಬಾಳ್ಕರ್ 2021-22ನೆ ಸಾಲಿನಲ್ಲಿ 7.14 ಕೋಟಿ ರೂ.ಆದಾಯ ಘೋಷಿಸಿದ್ದಾರೆ. ಇವರ ಕೈಯಲ್ಲಿ 11.51 ಲಕ್ಷ ರೂ. ಹಾಗೂ ಅವರ ಪತಿ ರವೀಂದ್ರ ಹೆಬ್ಬಾಳ್ಕರ್ ಅವರ ಕೈಯಲ್ಲಿ 29,658 ರೂ.ನಗದು ಇದೆ.
ಲಕ್ಷ್ಮಿ ಹೆಬ್ಬಾಳ್ಕರ್ ಹೆಸರಿನಲ್ಲಿ 10.85 ಕೋಟಿ ರೂ. ಹಾಗೂ ಅವರ ಪತಿ ಹೆಸರಿನಲ್ಲಿ 26.80 ಲಕ್ಷ ರೂ.ಗಳ ಚರಾಸ್ತಿ ಇದೆ. ಲಕ್ಷ್ಮಿ ಹೆಬ್ಬಾಳ್ಕರ್ ಹೆಸರಿನಲ್ಲಿ 1.80 ಕೋಟಿ ರೂ.ಹಾಗೂ ಅವರ ಪತಿ ಹೆಸರಿನಲ್ಲಿ 25.44 ಲಕ್ಷ ರೂ.ಸ್ಥಿರಾಸ್ತಿ ಇದೆ.
ಲಕ್ಷ್ಮಿ ಹೆಬ್ಬಾಳ್ಕರ್ ಹೆಸರಿನಲ್ಲಿ 5.63 ಕೋಟಿ ರೂ. ಹಾಗೂ ಅವರ ಪತಿ ಹೆಸರಿನಲ್ಲಿ 5.25 ಲಕ್ಷ ರೂ.ಸಾಲ ಇದೆ. 2017-18ನೆ ಸಾಲಿನಲ್ಲಿ ಆದಾಯ ತೆರಿಗೆ 1.19 ಕೋಟಿ ರೂ.ಬಾಕಿ ಉಳಿಸಿಕೊಂಡಿದ್ದಾರೆ. ಇವರ ವಿರುದ್ಧ ಮೂರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
Next Story





