ಕಾಂಗ್ರೆಸ್ 4ನೇ ಪಟ್ಟಿ: ಪುಲಕೇಶಿನಗರ ಸೇರಿ ಇನ್ನೂ ಅಭ್ಯರ್ಥಿ ಘೋಷಣೆಯಾಗದೆ ಬಾಕಿ ಉಳಿದಿರುವ ಕ್ಷೇತ್ರಗಳಿವು

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 124, ಎರಡನೆ ಪಟ್ಟಿಯಲ್ಲಿ 42, ಮೂರನೆ ಪಟ್ಟಿಯಲ್ಲಿ 43 ಹಾಗೂ ನಾಲ್ಕನೆ ಪಟ್ಟಿಯಲ್ಲಿ 7 ಸೇರಿದಂತೆ ಒಟ್ಟು 216 ಕ್ಷೇತ್ರಗಳಿಗೆ ಹೆಸರು ಘೋಷಿಸಿದ್ದು, ರಾಜ್ಯದ 224 ಕ್ಷೇತ್ರಗಳ ಪೈಕಿ ಇನ್ನೂ 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಿದೆ.
ತೀವ್ರ ಕುತೂಹಲ ಕೆರಳಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿಲ್ಲ. ಇನ್ನು ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದ ಅಭ್ಯರ್ಥಿಯ ಹೆಸರು ಕೂಡ ಘೋಷಣೆ ಮಾಡಲಾಗಿಲ್ಲ.
ಇಂದು ಪುಲಕೇಶಿಯನಗರ ಅಭ್ಯರ್ಥಿ ಪೈನಲ್ ಮಾಡಲೇ ಬೇಕಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇದ್ದು, ಬಂಡಾಯ ಅಭ್ಯರ್ಥಿಯಾಗಿ ಅಖಂಡ ಶ್ರೀನಿವಾಸ ಮೂರ್ತಿ ಕಣಕ್ಕಿಳಿದಿದ್ದಾರೆ. ಈ ನಡುವೆ ಇವತ್ತೊಂದು ದಿನ ಕಾಯಿರಿ ಎಂದು ಸಿದ್ದರಾಮಯ್ಯ ಮತ್ತು ಝಮೀರ್ ಅವರು ಅಖಂಡಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆದರೆ 4ನೇ ಪಟ್ಟಿಯಲ್ಲೂ ಪುಲಕೇಶಿಯನಗರದ ಅಭ್ಯರ್ಥಿ ಘೋಷಣೆಯಾಗಿಲ್ಲ.
8 ಕ್ಷೇತ್ರಗಳ ಹೆಸರು
1. ಪುಲಕೇಶಿನಗರ
2. ಸಿವಿ ರಾಮನ್ ನಗರ
3. ಮುಳಬಾಗಿಲು
4. ರಾಯಚೂರು ನಗರ
5. ಅರಕಲಗೂಡ
6. ಮಂಗಳೂರು ಉತ್ತರ
7. ಶಿಡ್ಲಘಟ್ಟ
8. ಕೆ.ಆರ್ ಪುರಂ







