ಗಾಂಜಾ ಬೆಳೆ ಕಾನೂನುಬದ್ಧಗೊಳಿಸಲು ಹಿಮಾಚಲ ಪ್ರದೇಶ ಚಿಂತನೆ

ಶಿಮ್ಲಾ: ಗಾಂಜಾ ಬೆಳೆಯುವುದನ್ನು ನಿಯಂತ್ರಿಸಲು ಸಾಧ್ಯವಾಗದೇ, ಆದಾಯ ಮತ್ತು ಆರ್ಥಿಕತೆಗೆ ಉತ್ತೇಜನ ನೀಡುವ ದೃಷ್ಟಿಯಿಂದ ಗಾಂಜಾ ಬೆಳೆಯನ್ನು ಕಾನೂನುಬದ್ಧಗೊಳಿಸಲು ಹಿಮಾಚಲಪ್ರದೇಶ ಸರ್ಕಾರ ಚಿಂತನೆ ನಡೆಸಿದೆ.
ಗಾಂಜಾವನ್ನು ವೈದ್ಯಕೀಯ ಮತ್ತು ಕೈಗಾರಿಕಾ ಬಳಕೆಗೂ ಉಪಯೋಗಿಸುವುದರಿಂದ ಕಾನೂನುಚೌಕಟ್ಟು ಆಧರಿತ ಪರಿಹಾರವನ್ನು ಕಲ್ಪಿಸುವ ಸಾಧ್ಯತೆಗಳ ಬಗ್ಗೆ ತಜ್ಞರ ತಂಡ ಪರಿಶೀಲನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಸುಖ್ವೀಂದರ್ ಸಿಂಗ್ ಸುಖು ಹೇಳಿದ್ದಾರೆ.
ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ರಾಜ್ಯ ಸರ್ಕಾರ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸಲಿದ್ದು, ಇತರ ರಾಜ್ಯಗಳಲ್ಲೂ ಈ ಬಗ್ಗೆ ಅಧ್ಯಯನ ನಡೆಸಲಿದೆ.
"ಗಾಂಜಾ ಎಲೆ ಮತ್ತು ಬೀಜಗಳ ಬಳಕೆ ಬಗ್ಗೆ ಸಮಗ್ರ ಮಾಹಿತಿಯನ್ನು ನಮ್ಮ ಕಾನೂನು ಆಧರಿಸಿರುತ್ತದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಕೆಲ ಪ್ರದೇಶಗಳಲ್ಲಿ ಗಾಂಜಾ ಬೆಳೆಯನ್ನು ಕೇಂದ್ರ ಸರ್ಕಾರ ಕಾನೂನುಬದ್ಧಗೊಳಿಸಿದೆ" ಎಂದು ಸುಖು ಹೇಳಿದ್ದಾರೆ.
Next Story





