ಡ್ರೀಮ್ಸ್ ಇಂಡಿಯಾ ಫೌಂಡೇಶನ್ ವತಿಯಿಂದ ಇಫ್ತಾರ್ ಕೂಟ

ಉಳ್ಳಾಲ: ಡ್ರೀಮ್ಸ್ ಇಂಡಿಯಾ ಫೌಂಡೇಶನ್ ಹಳೆಕೋಟೆ ಉಳ್ಳಾಲ ಹಾಗೂ ಹಳೆಕೋಟೆ ಯುವಕರ ಬಳಗ ಇದರ ವತಿಯಿಂದ ಇಫ್ತಾರ್ ಕೂಟವು ಡ್ರೀಮ್ಸ್ ಇಂಡಿಯಾ ಕಛೇರಿಯ ಬಳಿ ನಡೆಯಿತು.
ಕಾರ್ಯಕ್ರಮದಲ್ಲಿ ಅಲ್ ಕರೀಮ್ ಜುಮಾ ಮಸೀದಿ ಇದರ ಖತೀಬರಾದ ಹಾಫಿಳ್ ಸಿರಾಜುದ್ದೀನ್ ಖಾಸೀಂ ಸಖಾಫಿ ದುವಾ ನೆರವೇರಿಸಿದರು. ಸುಮಾರು 400ಕ್ಕೂ ಹೆಚ್ಚು ಜನರ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಟೆಸ್ಟ್ ಸ್ಪೋರ್ಟ್ಸ್ ಹಳೆಕೋಟೆ ಇದರ ಅಧ್ಯಕ್ಷರಾದ ಅಬ್ದುಲ್ ರಹ್ಮಾನ್ ಹಳೆಕೋಟೆ, ಆದಂ ಉಸ್ತಾದ್, ಅಬ್ದುಲ್ ರವೂಫ್, ಹಿಶಾಂ ಹಳೆಕೋಟೆ, ಫಾಝಿಲ್ ಬಿ.ಹೆಚ್, ರಿಯಾಝ್ ಪಿ.ಪಿ, ಸಲೀಂ ಇಬ್ರಾಹಿಂ ಹಳೆಕೋಟೆ, ಲತೀಫ್ ಐಸ್ ಮರ್ಚೆಂಟ್ ಹಾಗೂ ಹಳೆಕೋಟೆಯ ವಿವಿಧ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು. ಸಫ್ವಾನ್ ಅಬ್ಬಾಸ್ ಕಾರ್ಯಕ್ರಮವನ್ನು ನಿರೂಪಿಸಿದರು.
Next Story





