ತೆಲುಗಿನ ಜನಪ್ರಿಯ ಹಾಸ್ಯ ನಟ ಅಲ್ಲು ರಮೇಶ್ ನಿಧನ

ಹೊಸದಿಲ್ಲಿ: ತೆಲುಗಿನ ಜನಪ್ರಿಯ ಹಾಸ್ಯ ನಟ ಅಲ್ಲು ರಮೇಶ್ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು.
ವರದಿಗಳ ಪ್ರಕಾರ ಅವರು ತಮ್ಮ ತವರು ವಿಶಾಖಪಟ್ಟಣದಲ್ಲಿ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು. ಈ ಸುದ್ದಿಯನ್ನು ನಿರ್ದೇಶಕ ಆನಂದ್ ರವಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಅವರ ಅನೇಕ ಉದ್ಯಮ ಸಹೋದ್ಯೋಗಿಗಳು ಹಾಗೂ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡಿ ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಅಲ್ಲು ರಮೇಶ್ ತಮ್ಮ ವೃತ್ತಿಜೀವನವನ್ನು ರಂಗಭೂಮಿಯಿಂದ ಆರಂಭಿಸಿದರು. ಅವರು 'ಚಿರುಜಲ್ಲು' ಶೀರ್ಷಿಕೆಯ ಚಲನಚಿತ್ರದೊಂದಿಗೆ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಸುಮಾರು 50 ಚಿತ್ರಗಳಲ್ಲಿ ನಟಿಸಿದರು. ಅವರ ಕೆಲವು ಗಮನಾರ್ಹ ಚಿತ್ರಗಳಲ್ಲಿ 'ತೋಳು ಬೊಮ್ಮಲತಾ,' 'ಮಥುರಾ ವೈನ್ಸ್,' 'ವೀಧಿ,' 'ಬ್ಲೇಡ್ ಬಾಬ್ಜಿ,' 'ನೆಪೋಲಿಯನ್' ಹಾಗೂ 'ಕೇರಿಂಥಾ' ಸೇರಿವೆ.
Next Story