142.86 ಕೋಟಿ ಜನಸಂಖ್ಯೆಯೊಂದಿಗೆ ಚೀನಾವನ್ನು ಹಿಂದಿಕ್ಕಿದ ಭಾರತ

ಹೊಸದಿಲ್ಲಿ: ಭಾರತವು 142.86 ಕೋಟಿ ಜನಸಂಖ್ಯೆಯೊಂದಿಗೆ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ ಎಂದು ವಿಶ್ವಸಂಸ್ಥೆ ಇಂದು ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ವಿಶ್ವಸಂಸ್ಥೆಯ ಅಂದಾಜಿನ ಪ್ರಕಾರ ಚೀನಾ 142.57 ಕೋಟಿ ಜನಸಂಖ್ಯೆ ಹೊಂದಿದ್ದರೆ ಭಾರತದ ಜನಸಂಖ್ಯೆ 142.86 ಕೋಟಿ ತಲುಪಿದೆ.
1950 ರಲ್ಲಿ ಜನಸಂಖ್ಯೆಯ ಅಂಕಿ-ಅಂಶಗಳನ್ನು ಸಂಗ್ರಹಿಸಲು ಆರಂಭಿಸಿದ ನಂತರ ಭಾರತವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ವಿಶ್ವಸಂಸ್ಥೆಯ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವುದು ಇದೇ ಮೊದಲು.
1960ರಲ್ಲಿ ಮಾಜಿ ನಾಯಕ ಮಾವೋ ಝೆಡಾಂಗ್ ಅವರ ವಿನಾಶಕಾರಿ ಕೃಷಿ ನೀತಿಗಳ ಅಡಿಯಲ್ಲಿ ಲಕ್ಷಾಂತರ ಜನರು ಹಸಿವಿನಿಂದ ಸತ್ತ ನಂತರ ಮೊದಲ ಬಾರಿ ಚೀನಾದಲ್ಲಿ ಜನರ ಸಂಖ್ಯೆ ಕಳೆದ ವರ್ಷ ಕುಸಿತ ಕಂಡಿತ್ತು.
Next Story





