Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಟಿಎಂಸಿ ಹಾದಿ: ಸದ್ಯದ ಆಯ್ಕೆ ಯಾವುದು?

ಟಿಎಂಸಿ ಹಾದಿ: ಸದ್ಯದ ಆಯ್ಕೆ ಯಾವುದು?

ಸ್ನಿಗ್ಧೇಂದು ಭಟ್ಟಾಚಾರ್ಯಸ್ನಿಗ್ಧೇಂದು ಭಟ್ಟಾಚಾರ್ಯ19 April 2023 1:49 PM IST
share
ಟಿಎಂಸಿ ಹಾದಿ: ಸದ್ಯದ ಆಯ್ಕೆ ಯಾವುದು?

ಪ್ರತಿಯೊಂದು ಪಕ್ಷಕ್ಕೂ ರಾಷ್ಟ್ರೀಯ ಪಕ್ಷವಾಗುವ ಆಕಾಂಕ್ಷೆಯ ಹಕ್ಕಿದೆ. ಆದರೆ ಟಿಎಂಸಿಗೆ ಖಂಡಿತವಾಗಿಯೂ ಈಗ ತವರು ನೆಲದಲ್ಲಿ ಹೆಚ್ಚಿನ ಕೆಲಸವಿದೆ. ಪ್ರಸಕ್ತ, ಅದು ಬಂಗಾಳದ 42 ಲೋಕಸಭಾ ಸ್ಥಾನಗಳಲ್ಲಿ ಎಷ್ಟು ಸೀಟುಗಳನ್ನು ಗೆಲ್ಲಬೇಕೆಂಬುದರತ್ತ ಗಮನಹರಿಸಬೇಕು. ಬಂಗಾಳದಲ್ಲಿ ಕಳಪೆ ಪ್ರದರ್ಶನಕ್ಕಿಂತ ದೊಡ್ಡ ವಿಪತ್ತು ಅದಕ್ಕೆ ಮತ್ತೊಂದಿಲ್ಲ. ಹಾಗಾಗಿ, ಇತರ ರಾಜ್ಯಗಳಲ್ಲಿ ಹಾಕಬೇಕೆಂದುಕೊಂಡ ಶಕ್ತಿಯನ್ನೆಲ್ಲ ಪಶ್ಚಿಮ ಬಂಗಾಳಕ್ಕೆ ಹಾಕಬೇಕು. ಏಕೆಂದರೆ ಅದು ಅದರ ಭದ್ರಕೋಟೆ ಮತ್ತು ಇಲ್ಲಿಂದಲೇ ಅದು ತನ್ನ ಸಂಸದೀಯ ಅಸ್ತಿತ್ವವನ್ನು ಉತ್ತಮಗೊಳಿಸಬಹುದು.

ತೃಣಮೂಲ ಕಾಂಗ್ರೆಸ್ಗಿದ್ದ ರಾಷ್ಟ್ರೀಯ ಪಕ್ಷದ ಮಾನ್ಯತೆಯನ್ನು ಚುನಾವಣಾ ಆಯೋಗ ಹಿಂಪಡೆದಿದೆ. ಇದಾದ ಬಳಿಕ ಬಂಗಾಳ ಹಕ್ಕುಗಳ ಸಂಘಟನೆ ಬಾಂಗ್ಲಾ ಪೊಕ್ಖೋ ಸಂಸ್ಥಾಪಕ ನಾಯಕ ಗಾರ್ಗಾ ಚಟರ್ಜಿ ಹೀಗೆ ಬರೆದಿದ್ದಾರೆ: ‘‘ತೃಣಮೂಲ ಬಂಗಾಳದ ಪಕ್ಷ. ಅದು ತನ್ನ ಹೆಸರಿನ ಮೊದಲು ‘ಅಖಿಲ ಭಾರತ’ ಎಂದು ಬಳಸಿದರೆ ಪರವಾಗಿಲ್ಲ. ಎಲ್ಲರೂ ತೃಣಮೂಲವನ್ನು ಬಂಗಾಳ ಮತ್ತು ಬೆಂಗಾಲಿಗಳ ರಾಜಕೀಯ ಪಕ್ಷವೆಂದು ಭಾವಿಸುತ್ತಾರೆ.’’

ಟಿಎಂಸಿ ಎಂದೇ ಜನಪ್ರಿಯವಾಗಿರುವ ಇದು ಅಧಿಕೃತವಾಗಿ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಅಥವಾ ಎಐಟಿಸಿ. 2016ರಲ್ಲಿ ಪಡೆದಿದ್ದ ರಾಷ್ಟ್ರೀಯ ಪಕ್ಷದ ಮಾನ್ಯತೆ ಈಗ ಇಲ್ಲವಾಗಿರುವುದು ಅದಕ್ಕೆ ಆಘಾತಕಾರಿಯಾಗಿದೆ.

ಕಾಲು ಶತಮಾನದ ಹಿಂದೆ ತನ್ನ ಪ್ರಾರಂಭದ ಸಮಯದಿಂದಲೂ ಅದು ಬಂಗಾಳದ ಆಚೆಗೆ ತನ್ನ ಅಸ್ತಿತ್ವವನ್ನು ಕಾಣಿಸಲು ಹಾತೊರೆಯುತ್ತಲೇ ಇತ್ತು. ರಾಜ್ಯದ ಹೊರಗೆ ತನ್ನ ಹೆಜ್ಜೆಗುರುತನ್ನು ವಿಸ್ತರಿಸುವ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಟಿಎಂಸಿ ಹೊರತುಪಡಿಸಿ ಎಲ್ಲರೂ ಪಕ್ಷವನ್ನು ‘ಬಂಗಾಳಿ ಪಕ್ಷ’ ಎಂದು ನೋಡುತ್ತಾರೆ ಎಂಬ ಚಟರ್ಜಿಯವರ ಅಭಿಪ್ರಾಯ ಸಂಪೂರ್ಣವಾಗಿ ತಪ್ಪಾಗಿರದೆ ಇರಬಹುದು. ಈ ಸಲದ ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ, ‘ಬಂಗಾಲಿ ಪಕ್ಷ’ ಮತ್ತು ‘ಹೊರಗಿನದು’ ಎಂಬ ತೀವ್ರ ಪ್ರಚಾರವನ್ನು ಟಿಎಂಸಿ ಎದುರಿಸಬೇಕಾಯಿತು. ಟಿಎಂಸಿ ಕೇವಲ ಬಂಗಾಲಿ ಪಕ್ಷವಲ್ಲ ಎಂದು ಸ್ಪಷ್ಟಪಡಿಸಲು ಬ್ಯಾನರ್ಜಿ ಬಹಳ ಕಷ್ಟಪಡಬೇಕಾಯಿತು. ಕಡೆಗೂ ಅವರ ಪ್ರಯತ್ನ ಪ್ರಭಾವ ಬೀರದೆ ಹೋಯಿತು. ಅಸ್ಸಾಮಿನಲ್ಲಿಯೂ ಟಿಎಂಸಿ ನಾಯಕರು ಇದೇ ರೀತಿಯ ಸ್ಪಷ್ಟೀಕರಣಗಳನ್ನು ನೀಡಬೇಕಾಗಿತ್ತು.

ಕಳೆದ ವರ್ಷದ ಗೋವಾ ವಿಧಾನಸಭೆಗೆ ಟಿಎಂಸಿ ಇಳಿದದ್ದು ಕೂಡ ರಾಷ್ಟ್ರೀಯ ಮಾನ್ಯತೆಯನ್ನು ಉಳಿಸಿಕೊಳ್ಳುವ ಹಾದಿಯಲ್ಲಿನ ಪ್ರಯತ್ನವೇ ಆಗಿತ್ತು. ಆದರೆ ಅಲ್ಲಿ ನಿರೀಕ್ಷಿತ ಯಶಸ್ಸು ಸಿಗದೇ ಹೋಯಿತು. ಅರುಣಾಚಲ ಪ್ರದೇಶ ಮತ್ತು ಮಣಿಪುರದಲ್ಲಿ ಸ್ಥಾನಮಾನ ಕಳೆದುಕೊಳ್ಳಲಿದ್ದೇವೆ ಎಂದು ತಿಳಿದಿತ್ತು. ಆದ್ದರಿಂದ, ಗೋವಾ ಮತ್ತು ಮೇಘಾಲಯದಲ್ಲಿ ಪ್ರಯತ್ನಿಸಿದೆವು. ಆದರೆ ಹಿಂದೆ ಬಿದ್ದೆವು. ತ್ರಿಪುರಾದ ಫಲಿತಾಂಶವೂ ನಿರಾಶಾದಾಯಕವಾಗಿತ್ತು ಎನ್ನುತ್ತಾರೆ ಮಮತಾ ಬ್ಯಾನರ್ಜಿ ಸರಕಾರದ ಸಚಿವರೊಬ್ಬರು.

ರಾಷ್ಟ್ರೀಯ ಪಕ್ಷ ಎಂದಲ್ಲವಾದರೂ, 2021ರ ವಿಧಾನಸಭಾ ಚುನಾವಣೆಯಲ್ಲಿ ನಾವು ಮೂರು ರಾಷ್ಟ್ರೀಯ ಪಕ್ಷಗಳನ್ನು (ಬಿಜೆಪಿ, ಕಾಂಗ್ರೆಸ್ ಮತ್ತು ಸಿಪಿಐ-ಎಂ) ಸೋಲಿಸಿದ್ದೇವೆ ಎಂಬ ಅಂಶವನ್ನು ಬದಲಿಸಲಾಗದು ಎನ್ನುತ್ತಾರೆ ಪಕ್ಷದ ರಾಜ್ಯ ಘಟಕದ ವಕ್ತಾರ ಅರೂಪ್ ಚಕ್ರವರ್ತಿ. ಚುನಾವಣಾ ಆಯೋಗದ ಆದೇಶದ ವಿರುದ್ಧ ನ್ಯಾಯಾಲಯದ ಮೊರೆಹೋಗುವ ಅವಕಾಶವೇನೋ ಇದೆ. ಆದರೆ ಅದರ ಬಗ್ಗೆ ಇನ್ನೂ ಪಕ್ಷ ಯೋಚಿಸಿಲ್ಲ ಎನ್ನುತ್ತಾರೆ ಸಂಸದ ಸೌಗತ್ ರಾಯ್.

ಆದರೆ ತನ್ನ ವಿಸ್ತರಣೆಯನ್ನು ಮುಂದುವರಿಸುವ ವಿಚಾರದಲ್ಲಿ ಟಿಎಂಸಿ ಮೇಲೆ ಚುನಾವಣಾ ಆಯೋಗದ ತೀರ್ಮಾನವೇನೂ ಪ್ರಭಾವ ಬೀರಿದಂತಿಲ್ಲ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ನೇತೃತ್ವದಲ್ಲಿ ನಮ್ಮ ರಾಷ್ಟ್ರೀಯ ವಿಸ್ತರಣಾ ಅಭಿಯಾನ ನಡೆಯುತ್ತಿದೆ ಮತ್ತು ಮುಂದುವರಿಯುತ್ತದೆ. ಮುಂಬರುವ ಚುನಾವಣೆಯಲ್ಲಿ ಉತ್ತಮ ಪ್ರದರ್ಶನದ ಮೂಲಕ ಅಗತ್ಯ ಮಾನದಂಡಗಳನ್ನು ಪೂರೈಸುವುದರೊಂದಿಗೆ ನಾವು ಸ್ಥಾನಮಾನ ಮರಳಿ ಪಡೆಯುವ ವಿಶ್ವಾಸವಿದೆ ಎಂದಿದ್ದಾರೆ ಪಕ್ಷದ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಸುಖೇಂದು ಶೇಖರ್ ರಾಯ್.

ನಮ್ಮ ಪಕ್ಷಕ್ಕೆ ಮೊದಲಿನಿಂದಲೂ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಎಂದು ಹೆಸರಿತ್ತು. ಆದರೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ 2014ರಲ್ಲಿ ಬಂತು. ರಾಷ್ಟ್ರೀಯ ಪಕ್ಷದ ಮಾನ್ಯತೆಯಿಲ್ಲದೆಯೂ ರಾಜ್ಯದ ಹೊರಗೆ ಚುನಾವಣೆಗಳನ್ನು ಗೆದ್ದಿದ್ದೇವೆ ಎನ್ನುತ್ತಾರೆ ಅವರು.

ಪಕ್ಷದ ರಾಷ್ಟ್ರೀಯ ಮಾನ್ಯತೆಯ ಗುರಿಯನ್ನೇ ಮುಖ್ಯವಾಗಿಟ್ಟುಕೊಂಡು ವಿಶೇಷವಾಗಿ 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಟಿಎಂಸಿ ಗೋವಾದ ಮಾಜಿ ಕಾಂಗ್ರೆಸ್ ನಾಯಕ ಲುಜಿನ್ಹೋ ಫಲೈರೊ ಮತ್ತು ಅಸ್ಸಾಮಿನ ಮಾಜಿ ಕಾಂಗ್ರೆಸ್ ನಾಯಕಿ ಸುಶ್ಮಿತಾ ದೇವ್ ಅವರನ್ನು ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಕಳುಹಿಸಿತ್ತು. ಆದರೆ ಟಿಎಂಸಿಯ ರಾಷ್ಟ್ರೀಯ ಪಕ್ಷದ ಮಾನ್ಯತೆ ರದ್ದಾದ ಒಂದು ದಿನದ ನಂತರ ಫಲೈರೊ ಮೇಲ್ಮನೆ ಮತ್ತು ಪಕ್ಷಕ್ಕೆ ರಾಜೀನಾಮೆ ನೀಡಿದರು. ಆದರೆ ಈ ಬೆಳವಣಿಗೆಗೂ ಚುನಾವಣಾ ಆಯೋಗದ ಕ್ರಮಕ್ಕೂ ಸಂಬಂಧವಿಲ್ಲ ಎಂದು ಪಕ್ಷದ ಪಶ್ಚಿಮ ಬಂಗಾಳ ಘಟಕದ ನಾಯಕರು ಹೇಳಿದರು.

ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಅನ್ನು ದುರ್ಬಲಗೊಳಿಸಲು ಪ್ರಯತ್ನಿಸುವ ಮೂಲಕ ಟಿಎಂಸಿ ಬಿಜೆಪಿಯ ನೆರವಿಗೆ ಬರುತ್ತಿದೆ ಎಂದು ಕಾಂಗ್ರೆಸ್ ಪದೇ ಪದೇ ಆರೋಪಿಸಿದರೆ, ಟಿಎಂಸಿ ಮಾತ್ರ ತನ್ನ ವಿಸ್ತರಣೆಯ ಪ್ರಯತ್ನಗಳನ್ನು ಸಮರ್ಥಿಸಿಕೊಂಡಿದೆ. ಬಿಜೆಪಿ ವಿರುದ್ಧ ಕುಸಿಯುತ್ತಿರುವ ಕಾಂಗ್ರೆಸ್ಗಿಂತ ಟಿಎಂಸಿ ಉತ್ತಮ ಹೋರಾಟ ನೀಡಿದೆ ಎಂಬುದು ಟಿಎಂಸಿ ವಾದ.

ಕೋಲ್ಕತಾದ ಜಾದವ್ಪುರ ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ವಿಜ್ಞಾನ ಬೋಧಕರಾದ ಅಬ್ದುಲ್ ಮತೀನ್ ಪ್ರಕಾರ, ಟಿಎಂಸಿ ತನ್ನ ಮಿತಿಗಳನ್ನು ಅರ್ಥಮಾಡಿಕೊಳ್ಳಬೇಕಿದೆ ಮತ್ತು ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಅನುಕೂಲವಾಗುವಂತೆ ನಿರ್ಣಾಯಕ 2024ರ ಚುನಾವಣೆಗೆ ಮುಂಚಿತವಾಗಿ ರಾಷ್ಟ್ರೀಯ ವಿಸ್ತರಣಾ ಅಭಿಯಾನದಿಂದ ಹಿಂದೆ ಸರಿಯಲು ಇದು ಸಕಾಲ.

ಇದು ತಾಂತ್ರಿಕವಾಗಿಯಷ್ಟೆ ರಾಷ್ಟ್ರೀಯ ಪಕ್ಷವಾಗಿತ್ತು. ವಾಸ್ತವದಲ್ಲಿ ನೆರೆಯ ರಾಜ್ಯಗಳಾದ ಜಾರ್ಖಂಡ್, ಬಿಹಾರ ಮತ್ತು ಒಡಿಶಾದಲ್ಲಿಯೂ ಅದು ನಿರೀಕ್ಷೆಗಳನ್ನು ಮುಟ್ಟಲಾಗಿರಲಿಲ್ಲ. ಗೋವಾ ಮತ್ತು ತ್ರಿಪುರಾದಲ್ಲಿನ ಅದರ ಪ್ರಯತ್ನಗಳು ಕಾಂಗ್ರೆಸ್ ಅನ್ನು ದುರ್ಬಲಗೊಳಿಸುವ ಮೂಲಕ ಬಿಜೆಪಿಗೆ ನೆರವಾದವು. ಕಾಂಗ್ರೆಸ್ ಇಲ್ಲದೆ ರಾಷ್ಟ್ರೀಯ ವಿರೋಧ ಪಕ್ಷದ ಮೈತ್ರಿ ಸಾಧ್ಯವಿಲ್ಲ ಎಂಬ ವಾಸ್ತವವನ್ನು ಟಿಎಂಸಿ ಒಪ್ಪಿಕೊಳ್ಳುವ ಸಮಯ ಬಂದಿದೆ. ಅದು ನಿಜವಾಗಿಯೂ ಬಿಜೆಪಿ ಸರಕಾರವನ್ನು ಉರುಳಿಸಲು ಬಯಸಿದರೆ, ಸದ್ಯಕ್ಕೆ ರಾಷ್ಟ್ರೀಯ ವಿಸ್ತರಣಾ ಅಭಿಯಾನದಿಂದ ಹಿಂದೆ ಸರಿಯಬೇಕು ಎಂದು ಅಭಿಪ್ರಾಯಪಡುತ್ತಾರೆ ಮತೀನ್.

1998ರ ಲೋಕಸಭಾ ಚುನಾವಣೆಯಲ್ಲಿ, ಆಗಷ್ಟೆ 8 ತಿಂಗಳ ಹಿಂದೆ ಸ್ಥಾಪನೆಯಾಗಿದ್ದ ಟಿಎಂಸಿ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಪಶ್ಚಿಮ ಬಂಗಾಳದಲ್ಲಿ ಮಾತ್ರ ಸ್ಪರ್ಧಿಸಿತು. ಮರುವರ್ಷವೇ ತ್ರಿಪುರಾ ಪಶ್ಚಿಮ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯಿತು. ಶೇ. 26.4 ಮತಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಮೂರನೇ ಸ್ಥಾನದಲ್ಲಿತ್ತು.

ಅಂದಿನಿಂದ, ಅವರ ಎಲ್ಲಾ ವಿಸ್ತರಣಾ ಕಾರ್ಯಗಳು ಪಕ್ಷದ ಆಯಾ ರಾಜ್ಯ ಘಟಕಗಳನ್ನು ನಿರ್ಮಿಸಲು ಕಾಂಗ್ರೆಸ್ ಅನ್ನು ಬೇಟೆಯಾಡುವುದರ ಮೇಲೆ ಕೇಂದ್ರೀಕೃತವಾಗಿವೆ. ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಇಲ್ಲದ ವಿರೋಧ ಪಕ್ಷದ ಮೈತ್ರಿಯನ್ನು ಕಟ್ಟಲು ಟಿಎಂಸಿ ಸಕ್ರಿಯವಾಗಿರುವುದಕ್ಕೆ ಇದು ಪ್ರಮುಖ ಕಾರಣ.

ತ್ರಿಪುರಾದ ಆರಂಭಿಕ ಯಶಸ್ಸು ಅಷ್ಟೇ ಶೀಘ್ರವಾಗಿ ಕ್ಷೀಣಿಸಿತು. 2002ರ ತ್ರಿಪುರಾ ಪಶ್ಚಿಮ ಉಪಚುನಾವಣೆಯಲ್ಲಿ ಶೋಚನೀಯವಾಗಿ ಸೋತಿತು. 2003ರ ಅಸೆಂಬ್ಲಿ ಚುನಾವಣೆಯಲ್ಲಿ 18 ಸ್ಥಾನಗಳಿಗೆ ಸ್ಪರ್ಧಿಸಿ ಠೇವಣಿ ಕಳೆದುಕೊಳ್ಳುವಂತಾಯಿತು.

2004ರ ಲೋಕಸಭಾ ಚುನಾವಣೆಯಲ್ಲಿ, ಎನ್ಸಿಪಿಯಿಂದ ಹೊರಬಂದ ಪಿ.ಎ. ಸಂಗ್ಮಾ ಅವರನ್ನು ಮೇಘಾಲಯದ ತುರಾದಿಂದ ಪಕ್ಷ ಕಣಕ್ಕಿಳಿಸಿತು, ಮಣಿಪುರ, ತ್ರಿಪುರಾದಲ್ಲೂ ಸ್ಪರ್ಧಿಸಿತು. ಸಂಗ್ಮಾ ತಮ್ಮ ಭದ್ರಕೋಟೆಯಾದ ತುರಾದಿಂದ ಗೆದ್ದರೆ, ಮಣಿಪುರ ಮತ್ತು ತ್ರಿಪುರಾದಲ್ಲಿ ಪಕ್ಷದ ಅಭ್ಯರ್ಥಿಗಳು ಶೇ. 4ಕ್ಕಿಂತ ಕಡಿಮೆ ಮತ ಪಡೆದರು. ಕಡೆಗೆ ಮೇಘಾಲಯ ಯಶೋಗಾಥೆ ಕೂಡ ಬಹುಬೇಗ ಕೊನೆಗೊಂಡಿತು. ಸಂಗ್ಮಾ ಎನ್ಸಿಪಿಗೇ ಮರಳಿದರು.

2008ರ ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸಾಧನೆ ಇನ್ನಷ್ಟು ಕಳಪೆಯಾಗಿತ್ತು. 22 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ ಶೇ.4ರಷ್ಟು ಮತಗಳನ್ನು ಗಳಿಸಿತು. 2009ರ ಲೋಕಸಭಾ ಚುನಾವಣೆಯಲ್ಲಿಯೂ ಬಂಗಾಳದ ಹೊರಗಿನ ಯಾವುದೇ ಕ್ಷೇತ್ರದಲ್ಲಿ ಶೇ. 1ಕ್ಕಿಂತ ಹೆಚ್ಚು ಮತ ಪಡೆಯಲು ಸಾಧ್ಯವಾಗಲಿಲ್ಲ.

ಅದೇನೇ ಇದ್ದರೂ, 2009ರಲ್ಲಿಯೇ ಅದು ರಾಜ್ಯದ ಹೊರಗೂ ತನ್ನ ಮೊದಲ ಯಶಸ್ಸಿನ ರುಚಿ ಕಂಡಿತು. ಅರುಣಾಚಲ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಶೇ. 15ರಷ್ಟು ಮತಗಳನ್ನು ಪಡೆಯುವುದರೊಂದಿಗೆ ಐದು ಸ್ಥಾನಗಳನ್ನು ಗಳಿಸಿತು. ಈ ಐದೂ ಸ್ಥಾನಗಳಲ್ಲಿ ಗೆದ್ದವರು ಹಿಂದಿನ ವಿಧಾನಸಭೆಯ ಕಾಂಗ್ರೆಸ್ ಶಾಸಕರಾಗಿದ್ದು, ಅವರಿಗೆ ಪಕ್ಷದ ಟಿಕೆಟ್ ನಿರಾಕರಿಸಲಾಗಿತ್ತು. ಅದಕ್ಕಾಗಿಯೇ ಅವರು ಟಿಎಂಸಿಗೆ ಸೇರಿದ್ದರು. 2010ರಲ್ಲಿ, ಮಾಜಿ ಕಾಂಗ್ರೆಸ್ ಸಂಸದ ಕಿಮ್ ಗ್ಯಾಂಗ್ಟೆ ನೇತೃತ್ವದಲ್ಲಿ ಟಿಎಂಸಿ ತನ್ನ ಮಣಿಪುರ ಘಟಕ ಪ್ರಾರಂಭಿಸಿತು. 2011ರ ವಿಧಾನಸಭಾ ಉಪಚುನಾವಣೆಯಲ್ಲಿ ಗೆದ್ದಿತು ಮತ್ತು 2012ರ ವಿಧಾನಸಭಾ ಚುನಾವಣೆಯಲ್ಲಿ ಏಳು ಸ್ಥಾನಗಳನ್ನು ಗಳಿಸಿ ಎರಡನೇ ದೊಡ್ಡ ಪಕ್ಷವಾಗಿ ಹೊಮ್ಮಿತು. 2012ರ ವಿಧಾನಸಭಾ ಉಪಚುನಾವಣೆ ಗೆಲುವಿನೊಂದಿಗೆ ಉತ್ತರ ಪ್ರದೇಶದಲ್ಲಿಯೂ ಖಾತೆ ತೆರೆಯಿತು.

ಆದರೂ, ಈ ಎಲ್ಲಾ ಯಶಸ್ಸುಗಳು ಅಲ್ಪಕಾಲಿಕವಾದವು ಅಷ್ಟೆ. ಏಕೆಂದರೆ ಅದು ಒಗ್ಗಟ್ಟು ಕಾಯ್ದುಕೊಳ್ಳಲು ಪದೇ ಪದೇ ವಿಫಲವಾಗಿತ್ತು. ಅರುಣಾಚಲದಲ್ಲಿ, ಅದರ ನಾಲ್ವರು ಶಾಸಕರು 2012ರ ಕೊನೆಯಲ್ಲಿ ಕಾಂಗ್ರೆಸ್ಗೆ ಮರಳಿದರು. ಮತ್ತೊಬ್ಬ ಶಾಸಕರು 2013ರಲ್ಲಿ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲದೊಂದಿಗೆ ಹೋದರು. 2014ರ ಲೋಕಸಭೆ ಚುನಾವಣೆಯಲ್ಲಿ ಅರುಣಾಚಲ ಪಶ್ಚಿಮ ಕ್ಷೇತ್ರದಲ್ಲಿ ಕೇವಲ ಶೇ. 2.7 ಮತ ಗಳಿಸುವುದರೊಂದಿಗೆ ಅಲ್ಲಿ ಅದರ ಓಟ ಕೊನೆಯಾಗಿತ್ತು. ಮಣಿಪುರದಲ್ಲಿ, 2014ರ ಲೋಕಸಭಾ ಚುನಾವಣೆಯಲ್ಲಿಯೂ ಸಾಧನೆ ನೀರಸವಾಗಿತ್ತು. ಉತ್ತರ ಪ್ರದೇಶದಲ್ಲಿ ಪಕ್ಷದ ಏಕೈಕ ಶಾಸಕ 2016ರಲ್ಲಿ ಬಹುಜನ ಸಮಾಜ ಪಕ್ಷ ಸೇರಿದರು.

ವಾಸ್ತವವಾಗಿ, ಟಿಎಂಸಿ 2014ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ವಿಸ್ತರಣೆಯ ಹೆಚ್ಚಿನ ಅವಕಾಶ ಹೊಂದಿತ್ತು, ಕಾಂಗ್ರೆಸ್ ವಿರೋಧಿ ಅಲೆಯ ಲಾಭ ಪಡೆಯುವ ಉದ್ದೇಶ ಹೊಂದಿತ್ತು. 131 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು. ಆದರೆ ಬಿಜೆಪಿಯ ಯಶಸ್ಸು ಟಿಎಂಸಿಯ ಎಲ್ಲಾ ಲೆಕ್ಕಾಚಾರಗಳನ್ನು ಹೊಡೆದುಹಾಕಿತ್ತು. ಪಶ್ಚಿಮ ಬಂಗಾಳದಲ್ಲಿ ಬಿಟ್ಟರೆ ತ್ರಿಪುರಾದಲ್ಲಿ ಮಾತ್ರವೇ ಅದಕ್ಕೆ ಯಶಸ್ಸು ಸಿಕ್ಕಿತ್ತು.

2019ರ ಲೋಕಸಭೆ ಚುನಾವಣೆಯಲ್ಲಿ ಮಣಿಪುರ ಮತ್ತು ತ್ರಿಪುರಾದಲ್ಲಿ ಶೋಚನೀಯ ಸ್ಥಿತಿಯಲ್ಲಿತ್ತು. ಅರುಣಾಚಲದಲ್ಲಿ ಸ್ಪರ್ಧಿಸಲಿಲ್ಲ. ಪಕ್ಷವು ಬಂಗಾಳದ ಹೊರಗೆ 19 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿದರೂ, ಶೇ. 2ಕ್ಕಿಂತ ಹೆಚ್ಚು ಮತ ಪಡೆಯಲು ವಿಫಲವಾಯಿತು.

ಪ್ರಸಕ್ತ, ಪಶ್ಚಿಮ ಬಂಗಾಳ ಮತ್ತು ಮೇಘಾಲಯದಲ್ಲಿ ಮಾತ್ರವೇ ತನ್ನ ಹೆಚ್ಚುಗಾರಿಕೆ ಉಳಿಸಿಕೊಂಡಿರುವ ಟಿಎಂಸಿಗೆ ಇನ್ನೂ ಎರಡು ರಾಜ್ಯಗಳಲ್ಲಿ ಅಂತಹ ಸ್ಥಾನಮಾನ ಬೇಕು. 2024ರಲ್ಲಿ ಗೋವಾ ಮತ್ತು ಅಸ್ಸಾಮಿನಲ್ಲಿ ಅದೃಷ್ಟ ಪರೀಕ್ಷೆಗೆ ಸಿದ್ಧವಾಗಿರುವ ಟಿಎಂಸಿಗೆ ಅಂಥ ಅವಕಾಶ ಸಿಕ್ಕೀತೆ ಎಂದು ಕಾದುನೋಡಬೇಕಾಗಿದೆ. ಇತ್ತೀಚಿನ ಅಂಥ ಎಲ್ಲ ಪ್ರಯತ್ನಗಳಲ್ಲೂ ಅದು ಸಾಲುಸಾಲಾಗಿ ಹಿನ್ನಡೆಯನ್ನೇ ಅನುಭವಿಸುತ್ತ ಬಂದಿದೆ.

ಕೋಲ್ಕತಾದ ಬಂಗಬಾಸಿ ಕಾಲೇಜಿನ ರಾಜ್ಯಶಾಸ್ತ್ರ ಬೋಧಕ, ಅಂಕಣಕಾರ ಉದಯನ್ ಬಂಡೋಪಾಧ್ಯಾಯ ಪ್ರಕಾರ, ಟಿಎಂಸಿ ಮುಂಬರುವ ಲೋಕಸಭೆ ಚುನಾವಣೆಯವರೆಗೆ ಬಂಗಾಳದ ಮೇಲೆ ಹೆಚ್ಚು ಗಮನವಿಡುವುದು ಉತ್ತಮ. ಪ್ರತಿಯೊಂದು ಪಕ್ಷಕ್ಕೂ ರಾಷ್ಟ್ರೀಯ ಪಕ್ಷವಾಗುವ ಆಕಾಂಕ್ಷೆಯ ಹಕ್ಕಿದೆ. ಆದರೆ ಟಿಎಂಸಿಗೆ ಖಂಡಿತವಾಗಿಯೂ ಈಗ ತವರು ನೆಲದಲ್ಲಿ ಹೆಚ್ಚಿನ ಕೆಲಸವಿದೆ. ಪ್ರಸಕ್ತ, ಅದು ಬಂಗಾಳದ 42 ಲೋಕಸಭಾ ಸ್ಥಾನಗಳಲ್ಲಿ ಎಷ್ಟು ಸೀಟುಗಳನ್ನು ಗೆಲ್ಲಬೇಕೆಂಬುದರತ್ತ ಗಮನಹರಿಸಬೇಕು. ಬಂಗಾಳದಲ್ಲಿ ಕಳಪೆ ಪ್ರದರ್ಶನಕ್ಕಿಂತ ದೊಡ್ಡ ವಿಪತ್ತು ಅದಕ್ಕೆ ಮತ್ತೊಂದಿಲ್ಲ. ಹಾಗಾಗಿ, ಇತರ ರಾಜ್ಯಗಳಲ್ಲಿ ಹಾಕಬೇಕೆಂದುಕೊಂಡ ಶಕ್ತಿಯನ್ನೆಲ್ಲ ಪಶ್ಚಿಮ ಬಂಗಾಳಕ್ಕೆ ಹಾಕಬೇಕು. ಏಕೆಂದರೆ ಅದು ಅದರ ಭದ್ರಕೋಟೆ ಮತ್ತು ಇಲ್ಲಿಂದಲೇ ಅದು ತನ್ನ ಸಂಸದೀಯ ಅಸ್ತಿತ್ವವನ್ನು ಉತ್ತಮಗೊಳಿಸಬಹುದು.

(ಕೃಪೆ: thewire.in)

share
ಸ್ನಿಗ್ಧೇಂದು ಭಟ್ಟಾಚಾರ್ಯ
ಸ್ನಿಗ್ಧೇಂದು ಭಟ್ಟಾಚಾರ್ಯ
Next Story
X