ಉಡುಪಿ: ಎ.21ರಂದು ಬಿಜೆಪಿ ಮಹಿಳಾ ಕಾರ್ಯ ಪ್ರಮುಖರ ಸಭೆ

ಉಡುಪಿ, ಎ.19: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಶಿವಮೊಗ್ಗ ವಿಭಾಗದ ಬಿಜೆಪಿ ಮಹಿಳಾ ಕಾರ್ಯದ ಪ್ರಮುಖ ಸಭೆಯು ಎ.21ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಯಲಿದೆ ಎಂದು ಮಹಿಳಾ ಕಾರ್ಯದ ರಾಜ್ಯ ಸಹ ಸಂಚಾಲಕಿ ಶ್ಯಾಮಲಾ ಕುಂದರ್ ತಿಳಿಸಿದ್ದಾರೆ.
ಕಡಿಯಾಳಿಯ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಕರೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಉಡುಪಿ, ದ.ಕ., ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದ ಮಹಿಳಾ ಕಾರ್ಯ ಪ್ರಮುಖರು ಸೇರಿದಂತೆ ಕೇರಳ, ಗೋವಾ, ದಿಲ್ಲಿಯಿಂದ ಬಂದಿರುವ ಚುನಾವಣೆ ವಿಸ್ತಾರಕರ ಈ ಸಭೆಯಲ್ಲಿ ಸುಮಾರು 90ರಿಂದ 95 ಮಂದಿ ಸೇರುವ ನಿರೀಕ್ಷೆಯಿದೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಮಹಿಳಾ ಕಾರ್ಯದ ರಾಷ್ಟ್ರೀಯ ಉಪಾಧ್ಯಕ್ಷೆ ಜ್ಯೋತಿ ಶೇಟ್, ಮಹಿಳಾ ಮೋರ್ಚಾದ ರಾಜ್ಯ ಸಹಾ ಪ್ರಭಾರಿ ಅಶ್ವಿನಿ ಎಂ.ಎನ್. ಭಾಗವಹಿಸಲಿರುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಿಳಾ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾಜಿ. ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆೆ ವೀಣಾ ಶೆಟ್ಟಿ, ಮಹಿಳಾ ಕಾರ್ಯದ ಜಿಲ್ಲಾ ಸಂಚಾಲಕಿ ನಳಿನಿ ಪ್ರದೀಪ್ ರಾವ್, ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.