ಉಡುಪಿ: ಪೊಲೀಸ್ ವೀಕ್ಷಕರ ನೇಮಕ

ಉಡುಪಿ, ಎ.19: ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂದಿಸಿದಂತೆ ಉಡುಪಿ ಜಿಲ್ಲೆಗೆ ಪೊಲೀಸ್ ವೀಕ್ಷಕರನ್ನಾಗಿ ಐಪಿಎಸ್ ಅಧಿಕಾರಿ ಬಿನಿತ ಠಾಕೂರ್ ಅವರನ್ನು ನೇಮಿಸಿದ್ದು, ಅವರು ಈಗಾಗಲೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇವರ ಕಚೇರಿಯನ್ನು ಉಡುಪಿ ಪ್ರವಾಸಿ ಮಂದಿರದ ಕೊಠಡಿ ಸಂಖ್ಯೆ ವಿವಿಐಪಿ-1ರಲ್ಲಿ ತೆರೆಯಲಾಗಿದ್ದು, ಚುನಾವಣೆಗೆ ಸಂಬಂದಿಸಿದ ದೂರುಗಳಿ ದ್ದಲ್ಲಿ ಸಾರ್ವಜನಿಕರು/ ಜನಪ್ರತಿನಿಧಿಗಳು ಪ್ರತಿದಿನ ಬೆಳಗ್ಗೆ 12ರಿಂದ ಅಪರಾಹ್ನ 1 ಗಂಟೆಯವರೆಗೆ ಅಥವಾ ಅವರ ಪ್ರತಿನಿಧಿಗಳಿಗೆ ಸಲ್ಲಿಸಬಹುದಾಗಿದೆ.ಪೊಲೀಸ್ ವೀಕ್ಷಕರ ಮೊಬೈಲ್ ಸಂಖ್ಯೆ: 9482778235, ದೂ.ಸಂ. 0820-2003022 ಮೂಲಕ ಸಹ ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Next Story





