Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಕಾರ್ಕಳ: ಶಾಸಕ ಸುನಿಲ್ ಕುಮಾರ್...

ಕಾರ್ಕಳ: ಶಾಸಕ ಸುನಿಲ್ ಕುಮಾರ್ ಸಂಪತ್ತಿನಲ್ಲಿ ಗಣನೀಯ ಹೆಚ್ಚಳ

19 April 2023 9:18 PM IST
share
ಕಾರ್ಕಳ: ಶಾಸಕ ಸುನಿಲ್ ಕುಮಾರ್ ಸಂಪತ್ತಿನಲ್ಲಿ ಗಣನೀಯ ಹೆಚ್ಚಳ

ಉಡುಪಿ, ಎ.19: ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಲು ಐದನೇ ಬಾರಿಗೆ ಸ್ಪರ್ಧಿಸುತ್ತಿರುವ ಹಾಲಿ ಶಾಸಕ ಬಿಜೆಪಿಯ ವಿ.ಸುನೀಲ್ ಕುಮಾರ್ ಅವರ ಒಟ್ಟು ಆದಾಯದಲ್ಲಿ ಕಳೆದ ಸಾಲಿಗಿಂತ (2018) ಗಣನೀಯ ಹೆಚ್ಚಳ ಕಂಡುಬಂದಿದೆ.

ಇಂದು ಕಾರ್ಕಳದಲ್ಲಿ ಬಿಜೆಪಿ ವತಿಯಿಂದ ಐದನೇ ಬಾರಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಸುನೀಲ್ ಕುಮಾರ್(47), ಇದರೊಂದಿಗೆ ನೀಡಿರುವ ತನ್ನ ಕುಟುಂಬದ ಆಸ್ತಿ-ಪಾಸ್ತಿಯ ವಿವರಗಳಿಂದ ಈ ವಿಷಯ ತಿಳಿದುಬರುತ್ತದೆ. ಅದು ನೀಡಿರುವ ಮಾಹಿತಿಯಂತೆ ಅವರ ಒಟ್ಟು ಸಂಪತ್ತಿನ ಮೊತ್ತ 5,63,48,832 ರೂ. (5.63 ಕೋಟಿ ರೂ.) ಗಳಾಗಿವೆ. 2018ರಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಅವರು ಸಲ್ಲಿಸಿದ ಅಫಿದಾವತ್‌ನಲ್ಲಿ ಅವರ ಒಟ್ಟು ಸಂಪತ್ತಿನ ಮೊತ್ತ 2,22,10,194 ರೂ. (2.22 ಕೋಟಿ ರೂ.) ಗಳಾಗಿತ್ತು.

ಇದರಲ್ಲಿ ಸುನಿಲ್ ಕುಮಾರ್ ಅವರಲ್ಲಿರುವ ಚರಾಸ್ಥಿಯ ಮೊತ್ತ 1,59,72,832 ರೂ.ಗಳಾದರೆ, ಸ್ಥಿರಾಸ್ಥಿಯ ಮೌಲ್ಯ 4,03,76,000ರೂ. ಗಳಾಗಿವೆ. ಇನ್ನು ಪತ್ನಿ ಪ್ರಿಯಾಂಕ ಅವರ ಆದಾಯದಲ್ಲೂ ಹೆಚ್ಚಳ ಕಂಡುಬಂದಿದೆ. ಅವರ ಒಟ್ಟು ಆದಾಯ 1,80,51,942 ರೂ.ಗಳಾಗಿವೆ. ಇದರಲ್ಲಿ 1.42 ಕೋಟಿ ರೂ. ಚರಾಸ್ಥಿಯಾದರೆ, 37.62 ಲಕ್ಷ ರೂ. ಸ್ಥಿರಾಸ್ಥಿಯದ್ದಾಗಿದೆ.

ಸುನಿಲ್ ಕುಮಾರ್ ಬಳಿ 18,650ರೂ. ನಗದು, ಪತ್ನಿ ಬಳಿ 14,500ರೂ. ನಗದು ಹಣವಿದೆ. ವಿವಿಧ ಬ್ಯಾಂಕುಗಳಲ್ಲಿ ಠೇವಣಿ, ವಿವಿಧ ಕಂಪೆನಿಗಳಲ್ಲಿ  ಶೇರು, ಬಾಂಡುಗಳು,  ವಿವಿಧ ಪಾಲಿಸಿಗಳು, ಎನ್‌ಎಸ್‌ಎಸ್ ಉಳಿತಾಯ, 14.31 ಲಕ್ಷ ರೂ. ಮೌಲ್ಯದ 272.70ಗ್ರಾಂ ಚಿನ್ನ ಸೇರಿದಂತೆ ಅವರ ಚರಾಸ್ಥಿಗಳ ಒಟ್ಟು ಮೌಲ್ಯ 1.59 ಕೋಟಿ ರೂ.ಗಳಾಗಿವೆ. ಅವರ ಪತ್ನಿಯ ಬಳಿ 1.17 ಕೋಟಿ ರೂ.ಮೌಲ್ಯದ 2230ಗ್ರಾಂ ಚಿನ್ನ, 7.42 ಲಕ್ಷ ರೂ.ಮೌಲ್ಯದ ಬೆಳ್ಳಿ  ಸಾಮಗ್ರಿ ಸೇರಿದಂತೆ ಇರುವ ಚರಾಸ್ಥಿಯ ಒಟ್ಟು ಮೌಲ್ಯ 1.42 ಕೋಟಿರೂ.ಗಳಾಗಿವೆ. ಅಲ್ಲದೇ ಸುನಿಲ್ ಅವರಲ್ಲಿ 24.60 ಲಕ್ಷ ರೂ.ಮೌಲ್ಯದ ಟೊಯೊಟಾ ಇನ್ನೋವಾ ಕಾರು ಸಹ ಇದೆ.

ಸುನೀಲ್ ಕುಮಾರ್ ಅವರ ಸ್ವಯಾರ್ಜಿತ ಸ್ವತ್ತುಗಳು, ಮನೆ ಸೇರಿದಂತೆ ಇರುವ ಸ್ಥಿರಾಸ್ಥಿಯ ಒಟ್ಟು ಮೌಲ್ಯ 4.03 ಕೋಟಿ ರೂ.ಗಳಾಗಿವೆ. ಪತ್ನಿ ಪ್ರಿಯಾಂಕ ಹೆಸರಿನಲ್ಲಿ 37.62 ಲಕ್ಷ ರೂ.ಮೌಲ್ಯದ ಚರಾಸ್ಥಿಗಳಿವೆ. 

ಇದರೊಂದಿಗೆ ಸುನಿಲ್‌ ಕುಮಾರ್ ವಿವಿಧ ಬ್ಯಾಂಕುಗಳು, ಹಣಕಾಸು ಸಂಸ್ಥೆ ಹಾಗೂ ಇತರರಿಂದ 45.15 ಲಕ್ಷ ರೂ. ಸಾಲವನ್ನು ಹೊಂದಿದ್ದಾರೆ. ಇದರಲ್ಲಿ 15.10 ಲಕ್ಷ ರೂ. ಗೃಹ ಸಾಲವಾದರೆ, 17 ಲಕ್ಷ ಚಿನ್ನ ಸಾಲ ಹಾಗೂ 8.04 ವಾಹನ ಸಾಲವು ಸೇರಿವೆ. ಆದರೆ ಪತ್ನಿ ಹೆಸರಿನಲ್ಲಿ ಯಾವುದೇ ಸಾಲ ಇಲ್ಲ ಎಂದು ಅಫಿದಾವತ್‌ನಲ್ಲಿ ತಿಳಿಸಲಾಗಿದೆ.

ಸುನಿಲ್‌ ಕುಮಾರ್ ಅವರ ಕುಟುಂಬದ ಅವಲಂಬಿತರಲ್ಲಿ ತಂದೆ ಎಂ.ಕೆ. ವಾಸುದೇವ ಅವರಲ್ಲಿ 29.13 ಲಕ್ಷ ಮೌಲ್ಯದ ಚರಾಸ್ಥಿ ಇದೆ. 2017-18ನೇ ಸಾಲಿನಲ್ಲಿ 23.04 ಲಕ್ಷ ರೂ. ಇದ್ದ ಸುನಿಲ್‌ ಕುಮಾರ್ ಅವರ ಆದಾಯ ಪ್ರತಿವರ್ಷ ಏರುಗತಿಯಲ್ಲಿದ್ದು, 2021-22ನೇ ಸಾಲಿನಲ್ಲಿ ಅದು 51.46 ಲಕ್ಷ ರೂ. ಎಂದು ತೋರಿಸಲಾಗಿದೆ.

ಅದೇ ರೀತಿ ಅವರ ಪತ್ನಿ ಪ್ರಿಯಾಂಕ ಅವರ 2017-18ನೇ ಸಾಲಿನ ಆದಾಯ 11.26 ಲಕ್ಷ ರೂ.ಗಳಾಗಿದ್ದು, 2021-22ನೇ ಸಾಲಿಗೆ ಅದು 24.76ಲಕ್ಷ ರೂ.ಗಳಿಗೆ ಏರಿಕೆ ಕಂಡಿದೆ.

ಮೂರು ಬಾರಿಯ ಕಾರ್ಕಳ ಶಾಸಕರ ವಿರುದ್ಧ ಬಂಟ್ವಾಳದ ಠಾಣೆಯಲ್ಲಿ ಒಂದು ಪ್ರಕರಣ (ಮೊಕದ್ದಮೆ ನಂ.16/2018) ಇದ್ದು, ಅದು 2018ರ ಜ.22ರಂದು ಕಲ್ಲಡ್ಕದಲ್ಲಿ ಸಾರ್ವಜನಿಕ ಭಾಷಣದ ವೇಳೆ ಕೋಮು ಸೌಹಾರ್ದತೆಗೆ ದಕ್ಕೆಯಾಗಿದೆ ಎಂದು ಆರೋಪದಲ್ಲಿ ತಿಳಿಸಲಾಗಿದೆ ಎಂದು ಅವರು ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿದವತ್‌ನಲ್ಲಿ ತಿಳಿಸಿದ್ದಾರೆ.

share
Next Story
X