ಮಂಗಳೂರು: ಉದ್ಯೋಗದ ಆಮಿಷವೊಡ್ಡಿ ವಂಚನೆ

ಮಂಗಳೂರು, ಎ.19: ಪಾರ್ಟ್ ಟೈಂ ಉದ್ಯೋಗವಿದೆ ಎನ್ನುತ್ತಾ 4.96 ಲ.ರೂ. ವಂಚಿಸಿರುವ ಬಗ್ಗೆ ಮಂಗಳೂರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಫಿರ್ಯಾದಿದಾರರ ಟೆಲಿಗ್ರಾಮ್ ಖಾತೆಗೆ ಆನ್‌ಲೈನ್‌ನಲ್ಲಿ ಪಾರ್ಟ್ ಟೈಂ ಜಾಬ್ ಇದೆ ಎನ್ನುತ್ತಾ ಅಪರಿಚಿತನೋರ್ವ ವೆಬ್‌ಸೈಟ್ ಲಿಂಕ್ ಕಳುಹಿಸಿದ್ದ. ಬಳಿಕ 9233424937 ಮತ್ತು 9501710027 ಸಂಖ್ಯೆಯಿಂದ ಕರೆ ಮಾಡಿದ್ದಲ್ಲದೆ ಆತನ ಖಾತೆಯಿಂದ ಫಿರ್ಯಾದಿದಾರರ ಖಾತೆಗೆ 872 ರೂ, 12,000 ರೂ.ಗಳನ್ನು ಕಳುಹಿಸಿದ್ದ. ಬಳಿಕ ಟಾಸ್ಕ್ ಪೂರ್ಣಗೊಳಿಸುವ ಸಂಬಂಧವಾಗಿ ಫಿರ್ಯಾದಿದಾರರಿಂದ 1 ಲ.ರೂ., 1.80 ಲ.ರೂ, 1.04 ಲ.ರೂ, 40,576 ರೂ. ಸೇರಿದಂತೆ ಒಟ್ಟು 4.96 ಲ.ರೂ.ಗಳನ್ನು ಅಪರಿಚಿತ ಆತನ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story





