ಮಂಗಳೂರು: ಟೆಲಿಗ್ರಾಂ ಲಿಂಕ್ ಪರಿಶೀಲಿಸಿ ಹಣ ಕಳಕೊಂಡ ವ್ಯಕ್ತಿ

ಮಂಗಳೂರು, ಎ.19: ಟೆಲಿಗ್ರಾಂ ಖಾತೆಯಲ್ಲಿ ಬಂದ ಲಿಂಕ್‌ನ್ನು ಪರಿಶೀಲಿಸಿದ ವ್ಯಕ್ತಿಯೋರ್ವರು ತನ್ನ 1.16 ಲ.ರೂ. ಕಳೆದುಕೊಂಡಿರುವ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫಿರ್ಯಾದಿದಾರರ ಟೆಲಿಗ್ರಾಂ ಖಾತೆಗೆ ಬೇರೊಂದು ಟೆಲಿಗ್ರಾಂ ಖಾತೆಯಿಂದ ಲಿಂಕ್ ಬಂದಿತ್ತು. ಅದನ್ನು ಪರಿಶೀಲಿಸಿದಾಗ ಅಳಿಸಿಹೋಗಿತ್ತು. ಮರುದಿನ ದೂರುದಾರ ವ್ಯಕ್ತಿ ಅಂಗಡಿಯೊಂದಕ್ಕೆ ಹೋಗಿ ಯುಪಿಐ ಮೂಲಕ ಹಣ ಪಾವತಿಸುವಾಗ ‘ಟ್ರಾನ್ಸಾಕ್ಷನ್ ಎಕ್ಸೀಡೆಡ್’ ಎಂಬ ಸಂದೇಶ ಬಂದಿತ್ತು. ಅದರ ಬಗ್ಗೆ ಬ್ಯಾಂಕ್‌ಗೆ ತೆರಳಿ ಪರಿಶೀಲಿಸಿದಾಗ ಅವರ ಖಾತೆಯಿಂದ ಮಾ.1 ಮತ್ತು ಮಾ.2ರಂದು 1.16 ಲ.ರೂ. ಕಡಿತವಾಗಿರುವುದು ಗಮನಕ್ಕೆ ಬಂದಿದೆ ಎನ್ನಲಾಗಿದೆ.
ಈ ಬಗ್ಗೆ ವ್ಯಕ್ತಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
Next Story