ಯೆಮೆನ್‌ನ ರಾಜಧಾನಿಯಲ್ಲಿ ಕಾಲ್ತುಳಿತ: ಕನಿಷ್ಠ 78 ಮಂದಿ ಮೃತ್ಯು

ಸನಾ: ಯೆಮೆನ್‌ನ ರಾಜಧಾನಿಯಲ್ಲಿ ಬುಧವಾರ ತಡರಾತ್ರಿ ಹಣಕಾಸಿನ ನೆರವು ವಿತರಿಸುವ ಕಾರ್ಯಕ್ರಮವೊಂದರಲ್ಲಿ ಜನರು ಮುತ್ತಿಗೆ ಹಾಕಿದ ಪರಿಣಾಮ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ 78 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಡಝನ್ ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಹೌತಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸನಾ ಮಧ್ಯಭಾಗದಲ್ಲಿರುವ ಓಲ್ಡ್ ಸಿಟಿಯಲ್ಲಿ ವ್ಯಾಪಾರಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಬಡವರು ಜಮಾಯಿಸಿದಾಗ ಈ ಘಟನೆ ನಡೆದಿದೆ.
ಕೆಲ ವ್ಯಾಪಾರಿಗಳು ಸರಕಾರದ ಆಂತರಿಕ ಸಚಿವಾಲಯದ ಗಮನಕ್ಕೆ ತಾರದೇ ಬುಧವಾರ ನೆರವಿನ ರೂಪದಲ್ಲಿ ಜನರಿಗೆ ಹಣ ವಿತರಣೆ ಮಾಡಿರುವುದು ನಡೆದಿದೆ. ಹಣ ವಿತರಣೆಗೆ ಕಾರಣರಾದವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೌತಿ ಆಂತರಿಕ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಗಾಯಗೊಂಡ ಹತ್ತಾರು ಜನರನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಕನಿಷ್ಠ 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹಿರಿಯ ಆರೋಗ್ಯ ಅಧಿಕಾರಿಗಳು ತಿಳಿಸಿದರು.
Next Story





