Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬಹುರಾಜ್ಯ ಸಹಕಾರಿ ಕಾಯ್ದೆ...

ಬಹುರಾಜ್ಯ ಸಹಕಾರಿ ಕಾಯ್ದೆ ತಿದ್ದುಪಡಿಯಿಂದಾಗುವ ವಿಷಮತೆ

ಕೇಸರಿ ಹರವೂ, ಬೆಂಗಳೂರುಕೇಸರಿ ಹರವೂ, ಬೆಂಗಳೂರು20 April 2023 12:49 PM IST
share
ಬಹುರಾಜ್ಯ ಸಹಕಾರಿ ಕಾಯ್ದೆ ತಿದ್ದುಪಡಿಯಿಂದಾಗುವ ವಿಷಮತೆ

►► ಸರಣಿ - 07

ನಾಳೆ ನಂದಿನಿ ವಹಿವಾಟು ಕ್ಷೀಣಿಸಿ, ಅಮುಲ್ ಅಥವಾ ಬೇರೆ ಯಾವುದೇ ಸಂಸ್ಥೆಯ ವಹಿವಾಟು ಹೆಚ್ಚಾದರೆ ನಮ್ಮ ಭೂರಹಿತರು, ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳು ಕರೆಯುವ ಅಷ್ಟೂ ಹಾಲು ನಿಯಮಿತವಾಗಿ, ಅದೇ ಬೆಲೆಯಲ್ಲಿ ಮಾರಾಟವಾಗುತ್ತದೆ ಎನ್ನುವ ಖಾತರಿ ಇಲ್ಲದಂತಾಗುತ್ತದೆ ಮತ್ತು, ಇಂದು ಹಾಲು ಉತ್ಪಾದಕರು ಒಕ್ಕೂಟದಿಂದ ಪಡೆಯುತ್ತಿರುವ ಪಶು ಆರೋಗ್ಯ, ಮತ್ತಿತರ ಸೌಲಭ್ಯಗಳೂ ಅವರಿಗೆ ಸಿಗದೆ ಹೋಗಬಹುದು. ಆದರೆ, ಈ ಕ್ರೋನಾಲಜಿ ಪೂರ್ಣವಾಗಿಬಿಟ್ಟರೆ ಅವು ಬಂಡವಾಳಶಾಹಿಗೇ ಅನುಕೂಲಕರವಾಗಿರುತ್ತವೆ.   

ಕರ್ನಾಟಕದಲ್ಲಿ ಒಂದೆರಡು ದಶಕಗಳಿಂದಲೂ ನಂದಿನಿ ಅಲ್ಲದೆ ಬೇರೆ ಡೇರಿಗಳೂ ವಹಿವಾಟು ನಡೆಸುತ್ತಿವೆ. ಮಹಾರಾಷ್ಟ್ರದ ಕೊಲ್ಹಾಪುರ ಮೂಲಕ ಗೋಕುಲ್ ಸಹಕಾರಿ ಡೇರಿ ಇಂದಿಗೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಹಾಲು ಶೇಖರಣೆ ಮಾಡಿ, ಕರ್ನಾಟಕದಲ್ಲೇ ಮಾರುತ್ತಿದೆ. ಅಲ್ಲದೆ, ಆರೋಕ್ಯ, ದೊಡ್ಲ ಮೊದಲಾದ ಖಾಸಗಿ ಡೇರಿಗಳೂ ಇಲ್ಲಿ ಹಾಲು ಶೇಖರಣೆ ಮತ್ತು ಮಾರಾಟ ಮಾಡುತ್ತಿವೆ. ಇವಕ್ಕೆ ಸ್ಪರ್ಧೆ ಒಡ್ಡಲೆಂದೇ ನಂದಿನಿ ತನ್ನ ಜಾಹೀರಾತುಗಳಲ್ಲಿ ‘ಬೆಳ್ಳಗಿರುವುದೆಲ್ಲ ಹಾಲಲ್ಲ’ ಎನ್ನುವ ಕಾಪಿ ಲೈನ್ ಬಳಸುತ್ತಿರುವುದು ತಿಳಿದೇ ಇದೆ. ರಾಜ್ಯದ ಹಾಲು ವಹಿವಾಟು ಹೀಗಿದ್ದರೂ ಇಂದಿಗೂ ರಾಜ್ಯದಲ್ಲಿ ನಂದಿನಿಯದೇ ಏಕಸ್ವಾಮ್ಯವಿದೆ. ಸ್ಥಳೀಯ ಉತ್ಪನ್ನ, ದಶಕಗಳಿಂದಲೂ ಚಾಲನೆಯಲ್ಲಿದೆ, ನಮ್ಮ ರೈತರದೇ ಉತ್ಪನ್ನ, ನಮ್ಮವರೇ ಅನೇಕರು ಅಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಪೂರೈಕೆ ಆತಂಕರಹಿತ - ಹೀಗೆ ನಮ್ಮ ಗ್ರಾಹಕರ ಬ್ರ್ಯಾಂಡ್ ಲಾಯಲ್ಟಿ ಅದಕ್ಕೆ ಒದಗಿಬಂದುದು ಈ ಏಕಸ್ವಾಮ್ಯಕ್ಕೆ ಕಾರಣಗಳೂ ಹೌದು. ಹೀಗಿದ್ದೂ ಅಮುಲ್ ನಮ್ಮ ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂದರೆ ನಮಗೆ ಆತಂಕವೇಕೆ?

2021ರಲ್ಲಿ 12.40 ಮಿಲಿಯನ್ ಡಾಲರ್ ಇದ್ದ ಭಾರತದ ಡೇರಿ ಉತ್ಪನ್ನಗಳ ಆಮದು 2022ರಲ್ಲಿ 38.86 ಮಿಲಿಯನ್ ಡಾಲರ್‌ಗೆ ಹೆಚ್ಚಿದೆ. ಅದೇ 2021ರಲ್ಲಿ ರಫ್ತಿನ ಪ್ರಮಾಣ 619.24 ಮಿಲಿಯನ್ ಡಾಲರ್ ಇದ್ದುದು 2022ರಲ್ಲಿ 525.07 ಮಿಲಿಯನ್ ಡಾಲರ್‌ಗೆ ಕುಸಿದಿದೆ (ಮೂಲ: ಭಾರತ ಸರಕಾರದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವಾಲಯ). ಎನ್‌ಡಿಡಿಬಿ ಪ್ರಕಾರ ಜಾಗತಿಕ ಡೇರಿ ಮಾರುಕಟ್ಟೆಯಲ್ಲಿ ಜರ್ಮನಿಯ ರಫ್ತು ಪಾಲು ಶೇ. 12.4, ನ್ಯೂಝಿಲ್ಯಾಂಡ್ 12, ನೆದರ್ ಲ್ಯಾಂಡ್ಸ್ 11.6, ಫ್ರಾನ್ಸ್ 8.3, ಅಮೆರಿಕ 5.3 ಇದ್ದರೆ, ಭಾರತದ ರಫ್ತು ಕೇವಲ ಶೇ. ಒಂದಕ್ಕಿಂತ ಕಡಿಮೆಯಿದೆ. ಅದೇ ದೇಶದ ಸರಾಸರಿ ತಲಾವಾರು ಹಾಲಿನ ಲಭ್ಯತೆ 2018ರಲ್ಲಿ ದಿನಕ್ಕೆ 374 ಗ್ರಾಂ ಇದ್ದುದು, 2022 ರಲ್ಲಿ 444 ಗ್ರಾಂಗೆ ಏರಿದೆ. ಇದು ಜಾಗತಿಕ ಸರಾಸರಿಗಿಂತಲೂ ಹೆಚ್ಚು ಎಂದು ಈ ಹಿಂದೆ ಚರ್ಚಿಸಿದ್ದೇವೆ.  

ಒಂದು ಕಡೆ ಹಾಲಿನ ಉತ್ಪಾದನೆ ವರ್ಷಂಪ್ರತಿ ಹೆಚ್ಚುತ್ತಿದ್ದು, ಆಮದಿನ ಪ್ರಮಾಣವೂ ಪ್ರತಿವರ್ಷ ಹೆಚ್ಚುತ್ತಿದ್ದು, ರಫ್ತು ಮಾತ್ರ ಇಳಿಕೆಯಾಗುತ್ತಲೇ ಹೋದರೆ ಅದಕ್ಕೆ ಪರಿಹಾರವೇನು? ಉತ್ಪತ್ತಿಯನ್ನು ಕಡಿಮೆ ಮಾಡಬೇಕು ಅಥವಾ ರಫ್ತನ್ನು ಹೆಚ್ಚಿಸಬೇಕು. ಮೊದಲನೆಯದನ್ನು ಮಾಡಹೋದರೆ ರೈತರ ಆದಾಯ ಕಡಿಮೆಯಾಗುತ್ತದೆ, ಅನೇಕರು ಹೈನುಗಾರಿಕೆ ತ್ಯಜಿಸಬಹುದು ಮತ್ತು ಡೇರಿ ಉದ್ಯಮದಲ್ಲಿ ತೊಡಗಿಕೊಂಡ ಹಲವಾರು ಬಗೆಯ ಉದ್ಯೋಗಗಳಿಗೆ ಪೆಟ್ಟು ಬೀಳುತ್ತದೆ. ಒಂದು ಅಂದಾಜಿನ ಪ್ರಕಾರ ದೇಶದಲ್ಲಿ ಹತ್ತು ಕೋಟಿಗೂ ಹೆಚ್ಚು ರೈತ ಕುಟುಂಬಗಳು ಹಾಲು ಕರೆಯುತ್ತಿವೆ, ಅಷ್ಟೇ ಪ್ರಮಾಣದ ಜನ ಒಂದಲ್ಲ ಒಂದು ರೀತಿಯಲ್ಲಿ ಡೇರಿ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ.

ಎರಡನೆಯ ಸವಾಲು, ದೇಶದ ಡೇರಿ ಉದ್ಯಮದ ದೊಡ್ಡ ಪಾಲು ಇರುವುದು ಸಹಕಾರಿ ಕ್ಷೇತ್ರದಲ್ಲಿ. ಆದರೆ ಸಹಕಾರಿ ಕ್ಷೇತ್ರವು ರಫ್ತಿನಲ್ಲಿ ಈವರೆಗೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಸಾಧಿಸಿಲ್ಲ, ಆದ್ದರಿಂದ ಡೇರಿ ಕ್ಷೇತ್ರದ ಹಾಲು ಶೇಖರಣೆ, ಸಂಸ್ಕರಣೆ ಮತ್ತು ತಾಜಾ ಹಾಲು ವಿತರಣೆಯನ್ನು ಸ್ವಲ್ಪಕಾಲ ಸಹಕಾರಿ ಕ್ಷೇತ್ರದಲ್ಲಿಯೇ ಇಟ್ಟು, ಮೌಲ್ಯವರ್ಧಿತ ಉತ್ಪನ್ನಗಳ ಆಂತರಿಕ ಮತ್ತು ರಫ್ತು ಮಾರುಕಟ್ಟೆಯನ್ನು ಖಾಸಗಿ ಕ್ಷೇತ್ರಕ್ಕೆ ವಹಿಸಿಕೊಡುವುದು ಸರಕಾರದ ಆಲೋಚನೆಯಿರಬಹುದು. ಈ ರೀತಿಯ ಬೇಡಿಕೆ ನಮ್ಮ ದೇಶದಲ್ಲಿ ರಿಟೇಲ್ ಮಾರುಕಟ್ಟೆಯಲ್ಲಿ ತೊಡಗಿಕೊಂಡ ಭಾರತೀಯ ಬೃಹತ್ ಬಂಡವಾಳಶಾಹಿ ಕಂಪೆನಿಗಳಿಂದ ಇತ್ತು. ಜೊತೆಗೆ, ಅವರಿಗೆ ದಿನವೂ ರೈತರು ಮತ್ತು ಕಾರ್ಮಿಕರೊಂದಿಗೆ ವ್ಯವಹರಿಸಿ ಹಾಲು ಶೇಖರಣೆ ಮಾಡುವ ಮತ್ತು ಸಾಗಿಸುವ ಜವಾಬ್ದಾರಿ ಬೇಡವಾಗಿತ್ತು. ಈ ಹೊಂದಾಣಿಕೆಯಿಂದ ಎರಡೂ ಸಾಧ್ಯವಾಗುತ್ತದೆ. ಹೀಗೆ, ಈಗಾಗಲೇ ಆಂತರಿಕವಾಗಿ self-relian ಆಗಿರುವ ಡೇರಿ ಕ್ಷೇತ್ರದ ಮಾರುಕಟ್ಟೆಯನ್ನು ಖಾಸಗಿಗೆ ಒಪ್ಪಿಸುವುದು ಮತ್ತು ಈ self-reliance ಬಲದಿಂದ ಜಾಗತಿಕ ರಫ್ತು ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಹೆಚ್ಚಿಸುವುದು. ಎನ್‌ಡಿಡಿಬಿ ತಂದಿರುವ Roadmap and Strategies to Promote Export of Dairy Products for the (Global)Organized Dairy Sector ಎನ್ನುವ ಯೋಜನಾ ಹೊತ್ತಿಗೆಯ ಪ್ರಕಾರ, ವಿಶ್ವದ ಡೇರಿ ವಲಯದ ಮಾರುಕಟ್ಟೆ ಬೆಳವಣಿಗೆ 2030ರ ಹೊತ್ತಿಗೆ ಶೇ. 1-1.5 ಆಗುವ ನಿರೀಕ್ಷೆ ಇರುವಲ್ಲಿ, ಭಾರತದ ರಫ್ತು ಗುರಿ ಈಗಿನ ಶೇ. 0.38ರಿಂದ ಶೇ. 5ಕ್ಕೆ ತಲುಪುವುದಾಗಿರಬೇಕು ಎನ್ನುತ್ತದೆ. ಆಗ ದೇಶದ ರಫ್ತು ಗಾತ್ರ ಐದೂವರೆ ಬಿಲಿಯನ್ ಡಾಲರ್ ಆಗುತ್ತದೆ ಎಂದೂ ಎನ್‌ಡಿಡಿಬಿ ಅಂದಾಜಿಸುತ್ತದೆ.   

ಈ ಕಾರ್ಯಸಾಧನೆಗಾಗಿಯೇ ಈಗಾಗಲೇ ರಾಜ್ಯಾದ್ಯಂತ ಬಹುಚರ್ಚಿತ ಕ್ರೋನಾಲಜಿ ಬಿಚ್ಚಿಕೊಳ್ಳುತ್ತ ಹೋಗಿದ್ದನ್ನು ನಾವು ನೋಡಿದ್ದೇವೆ. ಡೇರಿ ಕ್ಷೇತ್ರವನ್ನು ಖಾಸಗಿಯ ಏಕಸ್ವಾಮ್ಯಕ್ಕೆ ತೆಗೆದುಕೊಳ್ಳಬೇಕೆಂದು ಬಯಸಿದ ದೇಶದ ರಿಟೇಲ್ ವ್ಯಾಪಾರಸ್ಥ ಬಂಡವಾಳಶಾಹಿಗಳಿಂದ ಆಕ್ಷೇಪವಿದ್ದ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕದಿರುವುದು, ಕೆಲಕಾಲ ಸುಮ್ಮನಿದ್ದು ಕೇಂದ್ರದಲ್ಲಿ ಸಹಕಾರಿ ಮಂತ್ರಾಲಯವನ್ನು ಸೃಷ್ಟಿ ಮಾಡುವುದು, ಆನಂತರ ಬಹುರಾಜ್ಯ ಸಹಕಾರ ಸಂಘಗಳ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಮಂಡಿಸುವುದು, ದೇಶದಲ್ಲಿ ಮೊದಲ ಎರಡು ಸ್ಥಾನಗಳಲ್ಲಿರುವ ಸಹಕಾರಿ ಒಕ್ಕೂಟಗಳನ್ನು ವಿಲೀನಗೊಳಿಸಿದರೆ ಯೋಜನಾ ನಕ್ಷೆ ಸುಲಭವೆಂದು ಅಮುಲ್-ನಂದಿನಿಯ ವಿಲೀನದ ಬಗ್ಗೆ ಘೋಷಿಸುವುದು, ಅದಕ್ಕೆ ರಾಜ್ಯದಲ್ಲಿ ಪ್ರತಿರೋಧವೆದ್ದಾಗ ಆ ಪ್ರಸ್ತಾವವನ್ನು ಬದಿಗೆ ಸರಿಸಿ ಎರಡು ಲಕ್ಷ ಹೊಸ ಹಾಲು ಶೇಖರಣಾ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಘೋಷಿಸುವುದು, ನಂತರ ಅಮುಲ್ ಸ್ವತಂತ್ರವಾಗಿ ಕರ್ನಾಟಕದಲ್ಲಿ ತಾಜಾಹಾಲು ಮಾರಾಟ ಮಾಡುವ ಬಿಸಿನೆಸ್ ಪ್ಲ್ಯಾನ್ ಅನ್ನು ಉಚ್ಚರಿಸುವುದು, ಆ ಮೂಲಕ ನಂದಿನಿಯನ್ನು ಮಂಕಾಗಿಸುವುದು... ಇದು ಕ್ರೋನಾಲಜಿಯ ಕಾರ್ಯನಕ್ಷೆ. ಇದರ ಮೂಲಕ ದೇಶದ ಸಮಾಜವಾದಿ, ಸಹಕಾರಿ ಆರ್ಥಿಕತೆಯನ್ನು ಸಂಪೂರ್ಣ ಬಂಡವಾಳಶಾಹಿ ಆರ್ಥಿಕತೆಗೆ ಮಣಿಸುವ ಮತ್ತು ಬದಲಿಸುವ ವಿಸ್ತಾರ ಗೇಮ್ ಪ್ಲ್ಯ್ಲಾನ್ ಅನ್ನೂ ಮುನ್ನಡೆಸಬಹುದು ಎನ್ನುವುದು ಪ್ರಭುತ್ವದ ಲೆಕ್ಕಾಚಾರ.  

ಸಹಕಾರಿ ವಲಯದಲ್ಲಿ ನಡೆಯುತ್ತಿರುವ ಬೇರೆ ವಲಯಗಳಲ್ಲಿ ಈ ಕ್ರೋನಾಲಜಿ ಹೇಗೆ ಪರಿಣಾಮ ಬೀರುತ್ತದೆಯೋ ತಿಳಿಯದು, ಆದರೆ ದೇಶದಲ್ಲಿ ಸಹಕಾರಿ ಕ್ಷೇತ್ರ ಅತ್ಯಂತ ಹೆಚ್ಚು ಯಶಸ್ಸು ಕಂಡದ್ದು ಡೇರಿ ಕ್ಷೇತ್ರದಲ್ಲಿ. ಹಾಗಾಗಿ ಡೇರಿಯನ್ನು ಖಾಸಗಿಗೆ ಒಪ್ಪಿಸುವ ಕಾರಣಕ್ಕಾಗಿಯೇ ಅದು ಬಿಚ್ಚಿಕೊಂಡಿದೆ ಎನ್ನುವುದು ಬಹುತೇಕ ಸ್ಪಷ್ಟ. ಹೇಗೆಂದರೆ, ಸರಿಸುಮಾರು ಇದೇ ನಮೂನೆಯ ಕ್ರೋನಾಲಜಿ ಈ ಹಿಂದೆ ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ತರುವಾಗಲೂ ಬಿಚ್ಚಿಕೊಂಡಿದ್ದು ಕಣ್ಣ ಮುಂದೆಯೇ ಇದೆ. ಮೊದಲಿಗೆ ಎಪಿಎಮ್‌ಸಿ ಕಾಯ್ದೆಗೆ ತಿದ್ದುಪಡಿ ತಂದು ರೈತರು ಎಪಿಎಮ್‌ಸಿ ಹೊರಗಡೆಯೂ ತಮ್ಮ ಬೆಳೆಗಳನ್ನು ಮಾರಬಹುದು, ಯಾರು ಬೇಕಾದರೂ ಕೊಳ್ಳಬಹುದು ಎಂದರು. ಕಾಂಟ್ರ್ಯಾಕ್ಟ್ ಕೃಷಿಯನ್ನು ಅಧಿಕೃತಗೊಳಿಸುವ ಕಾಯ್ದೆಯನ್ನು ತಂದು ರೈತರು ಕಂಪೆನಿಗಳೊಂದಿಗೆ ಕಾಂಟ್ರ್ಯಾಕ್ಟ್ ಮಾಡಿಕೊಂಡು ಬೆಳೆ ಬೆಳೆಯಬಹುದು ಎಂದರು. ಆನಂತರ ದಾಸ್ತಾನು ಶೇಖರಣೆಗೆ ಇದ್ದ ಮಿತಿಯನ್ನು ತೆಗೆದು ಹಾಕಿ ಯಾರು ಎಷ್ಟು ಬೇಕಾದರೂ ದಾಸ್ತಾನು ಮಾಡಿಕೊಳ್ಳಬಹುದು ಎನ್ನುವ ಕಾನೂನು ತಂದರು.

ಈ ಎರಡೂ ಕ್ರೋನಾಲಜಿಗಳಲ್ಲಿಯೂ ಉತ್ಪಾದಿಸುವ ಎಲ್ಲ ರಿಸ್ಕ್‌ಗಳೂ ಉತ್ಪಾದಕರ ಮೇಲೆಯೇ ಬಿದ್ದು, ಉತ್ಪಾದನೆಗಳು ತಿರಸ್ಕೃತವಾಗುವ ಮತ್ತು ಮಾರುಕಟ್ಟೆಯ ಆಧಾರದ ಮೇಲೆ ಬೆಲೆಗಳ ಏರುಪೇರು ಆಗುವ ಸಾಧ್ಯತೆಗಳೇ ಕಾಣುತ್ತಿವೆ. ಗ್ರಾಹಕರೂ ಬೆಲೆಯ ಏರುಪೇರಿಗೆ ಆಗಾಗ ತಲೆ ಕೊಡಬೇಕಾಗುವ ಪರಿಸ್ಥಿತಿ ಬರಲಿದೆ. ನಾಳೆ ನಂದಿನಿ ವಹಿವಾಟು ಕ್ಷೀಣಿಸಿ, ಅಮುಲ್ ಅಥವಾ ಬೇರೆ ಯಾವುದೇ ಸಂಸ್ಥೆಯ ವಹಿವಾಟು ಹೆಚ್ಚಾದರೆ ನಮ್ಮ ಭೂರಹಿತರು, ಸಣ್ಣ ಮತ್ತು ಅತಿಸಣ್ಣ ರೈತ ಕುಟುಂಬಗಳು ಕರೆಯುವ ಅಷ್ಟೂ ಹಾಲು ನಿಯಮಿತವಾಗಿ, ಅದೇ ಬೆಲೆಯಲ್ಲಿ ಮಾರಾಟವಾಗುತ್ತದೆ ಎನ್ನುವ ಖಾತರಿ ಇಲ್ಲದಂತಾಗುತ್ತದೆ ಮತ್ತು, ಇಂದು ಹಾಲು ಉತ್ಪಾದಕರು ಒಕ್ಕೂಟದಿಂದ ಪಡೆಯುತ್ತಿರುವ ಪಶು ಆರೋಗ್ಯ, ಮತ್ತಿತರ ಸೌಲಭ್ಯಗಳೂ ಅವರಿಗೆ ಸಿಗದೆ ಹೋಗಬಹುದು. ಆದರೆ, ಈ ಕ್ರೋನಾಲಜಿ ಪೂರ್ಣವಾಗಿಬಿಟ್ಟರೆ ಅವು ಬಂಡವಾಳಶಾಹಿಗೇ ಅನುಕೂಲಕರವಾಗಿರುತ್ತವೆ.   

ಹಾಗಾಗಿ ನಾವು ಅಮುಲ್ ನಮ್ಮ ರಾಜ್ಯದಲ್ಲಿ ತಾಜಾಹಾಲು ಮಾರಾಟಕ್ಕೆ ಇಳಿಯುವುದು ಬೇಡ ಎಂದು ಹೋರಾಡುವುಕ್ಕಿಂತಲೂ ದೃಢವಾಗಿ ಉದ್ದೇಶಿತ ಬಹುರಾಜ್ಯ ಸಹಕಾರಿ ಸಂಘಗಳ ಕಾಯ್ದೆಗೆ ತಿದ್ದುಪಡಿ ಬೇಡ ಎಂದು ಆಗ್ರಹಿಸುವ ಹೋರಾಟವನ್ನು ಕೈಗೆತ್ತಿಕೊಳ್ಳಬೇಕು.

(ನಾಳೆ: ಸಹಕಾರಿ ಸಂಘಗಳ ನಡುವೆ ಇರಬೇಕಾದ ಸಹಬಾಳ್ವೆ)

share
ಕೇಸರಿ ಹರವೂ, ಬೆಂಗಳೂರು
ಕೇಸರಿ ಹರವೂ, ಬೆಂಗಳೂರು
Next Story
X