ಸಿದ್ದರಾಮಯ್ಯರಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತೆ!

ಮೈಸೂರು, ಎ.20: ವರುಣಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮಾಜಿ ಮುಖ್ಯಮಂತ್ರಿ, ರಾಜ್ಯ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯರಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತೆಯಾಗಿದ್ದಾರೆ.
ನಂಜನಗೂಡು ತಾಲೂಕು ಪಂಚಾಯತ್ ಕಚೇರಿಯಲ್ಲಿ ಬುಧವಾರ ನಾಮಪತ್ರ ಸಲ್ಲಿಸಿದ ವೇಳೆ ಸಿದ್ದರಾಮಯ್ಯ ಸಲ್ಲಿರುವ ಅಫಿಡವಿತ್ ನಲ್ಲಿ ಕುಟುಂಬದ ಆಸ್ತಿ ವಿವರ ನೀಡಿದ್ದಾರೆ.
ಸಿದ್ದರಾಮಯ್ಯರ ಚರಾಸ್ತಿ ರೂ.9.58 ಕೋಟಿ, ಸ್ಥಿರಾಸ್ತಿ ರೂ.9.43 ಕೋಟಿ ಇದ್ದು, ರೂ.6.84 ಕೋಟಿ ಸಾಲವಿದೆ ಎಂದು ಆಸ್ತಿ ಘೋಷಿಸಿಕೊಂಡಿದ್ದಾರೆ.
ಕಾಂಗ್ರೆಸ್ ಮುಖಂಡ ಕೆ.ಜೆ.ಜಾರ್ಜ್ ಅವರಿಂದ 4 ಕೋಟಿ ರೂ. ಸಾಲ ಪಡೆದಿದ್ದಾರೆ.
ಪತ್ನಿ ಪಾರ್ವತಿಯವರ ಚರಾಸ್ತಿ ರೂ.11.26 ಕೋಟಿ, ಸ್ಥಿರಾಸ್ತಿ ರೂ.20.85 ಕೋಟಿ ಇದೆ. ಬ್ಯಾಂಕ್ ಆಫ್ ಬರೋಡಾದಲ್ಲಿ 1.93 ಕೋಟಿ ರೂ. ಸಾಲವಿದೆ. ಸಿದ್ದರಾಮಯ್ಯ ಕೈಯಲ್ಲಿರುವ ನಗದು 1.5 ಲಕ್ಷ ರೂ.
ಸಿದರಾಮಯ್ಯ ವಿರುದ್ಧ 13 ಪ್ರಕರಣಗಳು ದಾಖಲಾಗಿದ್ದು, 4 ಪ್ರಕರಣಗಳ ವಿಚಾರಣೆ ನಡೆದಿದೆ. 5 ಪ್ರಕರಣಗಳು ಸಿಐಡಿ ತನಿಖೆಗೆ ಒಳಪಟ್ಟಿವೆ.







