ನಾಮಪತ್ರ ಸಲ್ಲಿಸಲು ಹೋಗುತ್ತಿದ್ದೇನೆ, ಎಲ್ಲಿಂದ ಅಂತ ಗೊತ್ತಿಲ್ಲ: ತೀವ್ರ ಕುತೂಹಲ ಮೂಡಿಸಿದ ಡಿ.ಕೆ ಸುರೇಶ್ ಹೇಳಿಕೆ

ಬೆಂಗಳೂರು: ಪದ್ಮನಾಭನಗರ ಕ್ಷೇತ್ರದಲ್ಲಿ ಆರ್.ಅಶೋಕ್ ವಿರುದ್ಧ ಸಂಸದ ಡಿ.ಕೆ.ಸುರೇಶ್ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿ ನಡುವೆ 'ನಾಮಪತ್ರ ಸಲ್ಲಿಸಲು ಹೋಗುತ್ತಿದ್ದೇನೆ' ಎಂಬ ಡಿ.ಕೆ.ಸುರೇಶ್ ಹೇಳಿಕೆ ಮತ್ತಷ್ಟು ಕುತೂಹಲ ಮೂಡಿಸಿದೆ.
ರಾಮನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ವರಿಷ್ಠರ ಸೂಚನೆಯಂತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾನು ಕೂಡ ನಾಮಪತ್ರ ಸಲ್ಲಿಸುತ್ತೇನೆ. ಹೀಗಾಗಿ ನಾಮಪತ್ರ ಸಲ್ಲಿಸಲು ಹೋಗುತ್ತಿದ್ದೇನೆ' ಎಂದು ಹೇಳಿದರು.
ಯಾವ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುತ್ತೀರಿ? ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಯಾವುದಾದರೊಂದು ಕ್ಷೇತ್ರದಿಂದ ಅರ್ಜಿ ಹಾಕುತ್ತೇನೆ. ಎಲ್ಲಿಂದ ಅಂತ ಗೊತ್ತಿಲ್ಲ. 2 ಗಂಟೆ ವರೆಗೆ ಕಾದು ನೋಡಿ' ಎಂದಷ್ಟೇ ಹೇಳಿದ್ದಾರೆ.
Next Story





