ಅರಂತೋಡು ತೆಕ್ಕಿಲ್ ಪ್ರತಿಷ್ಠಾನದಿಂದ ಸೌಹಾರ್ದ ಇಫ್ತಾರ್ ಕೂಟ

ಸುಳ್ಯ : ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಅರಂತೋಡು ಇದರ ವತಿಯಿಂದ 18ನೇ ವರ್ಷದ ಸೌಹಾರ್ದ ಇಪ್ತಾರ್ ಕೂಟವು ತೆಕ್ಕಿಲ್ ಸಮುದಾಯ ಭವನದಲ್ಲಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ ಶಾಹಿದ್ ತೆಕ್ಕಿಲ್‌ರ ಅಧ್ಯಕ್ಷತೆಯಲ್ಲಿ ನಡೆಯಿತು.
ಅರಂತೋಡು ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಇಸಾಕ್ ಬಾಖವಿ ದುಆ ನೆರವೇರಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಸ್ವಾಗತಿಸಿದರು.
ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೃಷ್ಣಪ್ಪ, ಸುಳ್ಯ ಗಾಂಧಿನಗರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಕೆ.ಎಂ. ಮುಸ್ತಫ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ, ಯುವ ಕಾಂಗ್ರೆಸ್ ಸುಳ್ಯ ವಿಧಾನ ಸಭಾ ಕ್ಷೇತ್ರದ ವೀಕ್ಷಕ ಕಮಲ್ ಜಿತ್, ಕಲ್ಲುಗುಂಡಿ ವಿಷ್ಣುಮೂರ್ತಿ ದೈವಸ್ಥಾನದ ಅಧ್ಯಕ್ಷ ಜಗದೀಶ್ ರೈ ಕಲ್ಲುಗುಂಡಿ, ಸುಳ್ಯ ಬ್ಲಾಕ್ ಪ್ರಚಾರ ಸಮಿತಿಯ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ ಎಸ್. ಸಂಶುದ್ದೀನ್, ನಿವೃತ್ತ ಅಧ್ಯಾಪಕ ದಾಮೋದರ ಮಾಸ್ಟರ್, ಡಾ. ಹರ್ಷವರ್ದನ್ ಕುತ್ತಮೊಟ್ಟೆ, ಸುಳ್ಯ ವೆಂಕಟ್ರಮಣ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ್, ಸಂಪಾಜೆ ಗ್ರಾಪಂ ಸದಸ್ಯ ಅಬೂಸಾಲಿ ಗೂನಡ್ಕ, ತಾಜ್ ಮುಹಮ್ಮದ್ ಸಂಪಾಜೆ, ಎ.ಕೆ ಇಬ್ರಾಹಿಂ ಕಲ್ಲುಗುಂಡಿ, ಪ್ರತಿಷ್ಠಾನದ ಕೋಶಾಧಿಕಾರಿ ಟಿ.ಎಂ ಜಾವೇದ್ ತೆಕ್ಕಿಲ್, ಎನ್‌ಎಸ್‌ಯುಐ ಸುಳ್ಯ ಬ್ಲಾಕ್ ಅಧ್ಯಕ್ಷ ಕೀರ್ತನ್ ಕೊಡಪಾಲ, ಜಾಲ್ಸೂರು ಗ್ರಾಪಂ ಸದಸ್ಯ ಅಬ್ದುಲ್ ಮಜೀದ್ ಅಡ್ಕಾರ್, ಉನೈಸ್ ಪೆರಾಜೆ, ಸಿದ್ದೀಕ್ ಕೊಕ್ಕೋ, ಹನೀಫ್ ಸಂಟ್ಯಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಅಧ್ಯಾಪಕ ಯು. ಚಿದಾನಂದ ಗೂನಡ್ಕ, ವಾಹನ ಚಾಲಕ ಮಾಲಕರ ಸಂಘದ ಅಧ್ಯಕ್ಷ ಜನಾರ್ದನ ಇರ್ಣೆ, ಪತ್ರಕರ್ತ ಶರೀಫ್ ಜಟ್ಟಿಪಳ್ಳ, ಅನ್ವಾರುಲ್ ಹುದಾ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಮಜೀದ್, ಪಟೇಲ್ ಚಾರಿಟೇಬಲ್ ಅಧ್ಯಕ್ಷ ಬದ್ರುದ್ದೀನ್ ಪಟೇಲ್, ಎ.ಇ. ಹನೀಫ್, ಹನೀಫ್ ಸೆಂಟ್ಯಾರ್ ಸುಳ್ಯ, ನಾಸಿರ್ ಇಂಜಿನಿಯರ್ ಪೆರಾಜೆ, ಕೆ.ಬಿ ಇಬ್ರಾಹಿಂ, ಅಬ್ದುಲ್ ರಝಾಕ್ ತೆಕ್ಕಿಲ್, ಮಹಮ್ಮದ್ ಕುಂಞಿ ತೆಕ್ಕಿಲ್, ಅಬ್ದುಲ್ ಖಾದರ್ ಪಟೇಲ್, ಹಾಜಿ ಕೆ.ಎಂ ಮಹಮ್ಮದ್, ಹಾಜಿ ಸಾಜಿದ್ ಅಝ್ ಹರಿ, ನಿವೃತ್ತ ಉಪನ್ಯಾಸಕ ಅಬ್ದುಲ್ಲ ಮಾಸ್ತರ್, ಉಬೈಸ್ ಗೂನಡ್ಕ, ಅಬ್ದುಲ್ ಖಾದರ್ ಮೊಟ್ಟೆಂಗಾರ್, ಇಬ್ರಾಹಿಂ ಚೆರೂರ್, ಅಮೀರ್ ಕುಕ್ಕುಂಬಳ, ಕೆ.ಎಂ ಮೂಸಾನ್, ಎ. ಉಮ್ಮರ್, ಫಸೀಲು, ಸರ್ಫುದ್ದೀನ್, ಆಶಿಕ್, ತಾಜುದ್ದೀನ್ ಅರಂತೋಡು, ಹನೀಫ್ ಮೊಟ್ಟೆಂಗಾರ್, ರಿಯಾಝ್ ಉದಯನರ, ಮುನೀರ್ ಸೆಂಟ್ಯಾರ್, ಅಬ್ದುಲ್ ಲತೀಫ್ ತೆಕ್ಕಿಲ್, ಸಾಬಿತ್ ಹುದಾವಿ ಭಾಗವಹಿಸಿದ್ದರು.