ಐಪಿಎಲ್:ಪಂಜಾಬ್ ಗೆಲುವಿಗೆ 175 ರನ್ ಗುರಿ ನೀಡಿದ ಆರ್‌ಸಿಬಿ
ಪ್ಲೆಸಿಸ್, ಕೊಹ್ಲಿ ಅರ್ಧಶತಕ

ಮೊಹಾಲಿ, ಎ.20: ಆರಂಭಿಕ ಆಟಗಾರ ಎಫ್ ಡು ಪ್ಲೆಸಿಸ್(84 ರನ್, 56 ಎಸೆತ)ಹಾಗೂ ನಾಯಕ ವಿರಾಟ್ ಕೊಹ್ಲಿ (59 ರನ್, 47)ಮೊದಲ ವಿಕೆಟ್‌ಗೆ ಸೇರಿಸಿದ ಭರ್ಜರಿ ಜೊತೆಯಾಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್‌ನ 27ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ಗೆಲುವಿಗೆ 175 ರನ್ ಗುರಿ ನೀಡಿದೆ.
ಗುರುವಾರ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 174 ರನ್ ಗಳಿಸಿದೆ. ಕೊಹ್ಲಿ ಹಾಗೂ ಪ್ಲೆಸಿಸ್ ಮೊದಲ ವಿಕೆಟಿಗೆ 16.1 ಓವರ್‌ಗಳಲ್ಲಿ 137 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ, ಆರ್‌ಸಿಬಿ ಈ ಬುನಾದಿಯನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಗಿದೆ. ಹರ್‌ಪ್ರಿತ್ ಬ್ರಾರ್ ಅವರು ಕೊಹ್ಲಿ ವಿಕೆಟನ್ನು ಪಡೆದು ಈಜೋಡಿಯನ್ನು ಬೇರ್ಪಡಿಸಿದರು.
ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್(0) ರನ್ ಖಾತೆ ತೆರೆಯಲು ವಿಫಲರಾದರು. ದಿನೇಶ್ ಕಾರ್ತಿಕ್(7 ರನ್) ಬೇಗನೆ ವಿಕೆಟ್ ಕೈಚೆಲ್ಲಿದರು.
ಪಂಜಾಬ್ ಪರ ಹರ್‌ಪ್ರೀತ್(2-31)ಯಶಸ್ವಿ ಬೌಲರ್ ಎನಿಸಿಕೊಂಡರು.





