ಪರೀಕ್ಷಾರ್ಥ ಉಡಾವಣೆಯಲ್ಲಿ ಸ್ಫೋಟಗೊಂಡ ವಿಶ್ವದ ಅತಿ ದೊಡ್ಡ ರಾಕೆಟ್ ಸ್ಟಾರ್‌ಶಿಪ್

ಟೆಕ್ಸಾಸ್: ಬಾಹ್ಯಾಕಾಶ ಯಾತ್ರಿಗಳನ್ನು ಚಂದ್ರ, ಮಂಗಳ ಹಾಗೂ ಅದರಾಚೆಯ ಗ್ರಹಗಳಿಗೆ ಕರೆದೊಯ್ಯಲು ವಿನ್ಯಾಸಗೊಳಿಸಲಾಗಿದ್ದ ಸ್ಪೇಸ್‌ಎಕ್ಸ್‌ನ ಈವರೆಗಿನ ಅತ್ಯಂತ ಶಕ್ತಿಶಾಲಿ ಸ್ಟಾರ್‌ಶಿಪ್ ರಾಕೆಟ್ ಗುರುವಾರ ನಡೆಸಲಾದ ಪರೀಕ್ಷಾರ್ಥ ಉಡಾವಣೆಯಲ್ಲಿ ಸ್ಫೋಟಗೊಂಡಿದೆ ಎಂದು ndtv.com ವರದಿ ಮಾಡಿದೆ.
ಮಧ್ಯಂತರ ಸಮಯವಾದ ಬೆಳಗ್ಗೆ 8.33ರ ಹೊತ್ತಿಗೆ ಟೆಕ್ಸಾಸ್‌ನಲ್ಲಿರುವ ಬೊಕಾ ಚೀಕಾದ ಖಾಸಗಿ ಸ್ಪೇಸ್‌ಎಕ್ಸ್ ಉಡ್ಡಯನ ಕೇಂದ್ರವಾದ ಸ್ಟಾರ್‌ಬೇಸ್‌ನಿಂದ ಈ ದೈತ್ಯ ರಾಕೆಟ್ ಯಶಸ್ವಿಯಾಗಿ ಆಕಾಶಕ್ಕೆ ಚಿಮ್ಮಿತು.
ಸ್ಟಾರ್‌ಶಿಪ್ ರಾಕೆಟ್‌ನ ಕವಚವು ನೌಕೆಯು ಗಗನಕ್ಕೆ ಚಿಮ್ಮಿದ ಮೂರು ನಿಮಿಷಗಳ ನಂತರ ಮೊದಲ ಹಂತದ ರಾಕೆಟ್ ಬೂಸ್ಟರ್‌ನಿಂದ ಕಳಚಿಕೊಳ್ಳಬೇಕಿತ್ತು. ಆದರೆ, ನಿಗದಿಯಂತೆ ಕವಚವು ಬೇರ್ಪಡದ ಕಾರಣ ರಾಕೆಟ್ ಸ್ಫೋಟಗೊಂಡಿತು.
ಈ ಕುರಿತು ಟ್ವೀಟ್ ಮಾಡಿರುವ ಸ್ಪೇಸ್‌ಎಕ್ಸ್, "ನೌಕೆಯ ಪರೀಕ್ಷೆಯು ಚೇತೋಹಾರಿಯಾಗಿಲ್ಲದಿದ್ದರೂ, ಮೊದಲ ಹಂತದ ಬೇರ್ಪಡೆಗೂ ಮುನ್ನ ಸ್ಟಾರ್‌ಶಿಪ್ ನೌಕೆಯು ನಿಗದಿಗಿಂತ ಮುಂಚಿತವಾಗಿ ಕ್ಷಿಪ್ರ ಬೇರ್ಪಡೆಯನ್ನು ಅನುಭವಿಸಿತು" ಎಂದು ಹೇಳಿದೆ.
Starship Super Heavy has experienced an anomaly before stage separation! pic.twitter.com/MVw0bonkTi
— Primal Space (@thePrimalSpace) April 20, 2023