ಕುಂದಾಪುರ ಜೆಡಿಎಸ್ ಅಭ್ಯರ್ಥಿ ರಮೇಶ್ ನಾಮಪತ್ರ ಸಲ್ಲಿಕೆ

ಕುಂದಾಪುರ, ಎ.20: ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪುರಸಭೆ ವ್ಯಾಪ್ತಿಯ ಟಿ.ಟಿ.ರೋಡ್‌ನ ರಮೇಶ್ ಕುಂದಾಪುರ ಗುರುವಾರ ಚುನಾವಣಾಕಾರಿ ರಶ್ಮೀ ಎಸ್.ಆರ್. ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಜಯಕುಮಾರ್ ಪರ್ಕಳ, ಕಿಶೋರ್ ಕುಮಾರ್, ಶ್ರೀಕಾಂತ್ ಕಚ್ಚೂರು, ವಾಸುದೇವ ರಾವ್ ಉಪಸ್ಥಿತರಿದ್ದರು.
ಕುಂದಾಪುರ ನಗರಕ್ಕೆ ಬರುವ ಜನರ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿ ಮೂಲ ಭೂತ ಸೌಕರ್ಯ ಕಲ್ಪಿಸಬೇಕಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಯಷ್ಟೇ ಸೌಲಭ್ಯ ದೊರಕಿಸಿಕೊಡಬೇಕಿದೆ. ಕೋಡಿಯಂತಹ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಒದಗಿಸಿ ಪ್ರವಾಸಿ ತಾಣವಾಗಿಸಬೇಕಿದೆ. ಐಟಿ ಹಬ್ ನಿರ್ಮಾಣ, ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ಸೇರಿದಂತೆ ಅನೇಕ ಅಭಿವೃದ್ಧಿಯ ಕನಸನ್ನು ಹೊತ್ತು ಚುನಾವಣ ಕಣಕ್ಕೆ ಇಳಿಯಲಾಗಿದೆ ಎಂದು ರಮೇಶ್ ತಿಳಿಸಿದರು.
Next Story





