ವಾಹನ ಢಿಕ್ಕಿ: ಚೆಕ್‌ಪೋಸ್ಟ್ ಸಿಬ್ಬಂದಿಗಳಿಗೆ ಗಾಯ

ಹೆಬ್ರಿ, ಎ.20: ಪಿಕ್‌ಅಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಚೆಕ್‌ಪೋಸ್ಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೊಲೀಸ್ ಸಹಿತ ಇಬ್ಬರು ಸಿಬ್ಬಂದಿ ಗಾಯಗೊಂಡ ಘಟನೆ ಎ.19ರಂದು ರಾತ್ರಿ 11.30ರ ಸುಮಾರಿಗೆ ನಾಡ್ಪಾಲು ಗ್ರಾಮದ ಸೋಮೇಶ್ವರ ಎಂಬಲ್ಲಿ ನಡೆದಿದೆ.
ಗಾಯಗೊಂಡವರನ್ನು ಹೆಬ್ರಿ ಠಾಣೆಯ ಸಿಬ್ಬಂದಿ ರೆಹಮತ್ ಮತ್ತು ಅಬಕಾರಿ ಇಲಾಖೆಯ ಕೃಷ್ಣ ಅಚಾರಿ ಎಂದು ಗುರುತಿಸಲಾಗಿದೆ. ಚುನಾವಣೆ ಪ್ರಯುಕ್ತ ನಾಡ್ಪಾಲು ಗ್ರಾಮದ ಸೋಮೇಶ್ವರ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಆಗುಂಬೆ ಕಡೆಯಿಂದ ಬಂದ ಪಿಕಾಪ್ ವಾಹನ ಹತೋಟಿ ತಪ್ಪಿ ಸಿಬ್ಬಂದಿ ರೆಹಮತ್ ಮತ್ತು ಅಬಕಾರಿ ಇಲಾಖೆಯ ಕೃಷ್ಣ ಅಚಾರಿ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಇವರು ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story