ಉಡುಪಿ ಜಿಲ್ಲೆಗೆ ಚುನಾವಣಾ ವೀಕ್ಷಕರ ನೇಮಕ
ಉಡುಪಿ, ಎ.20: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಉಡುಪಿ ಮತ್ತು ಕಾಪು ವಿಧಾನಸಭಾ ಕ್ಷೇತ್ರಗಳಿಗೆ ಐಎಎಸ್ ಅಧಿಕಾರಿ ತುಕಾರಾಂ ಹರಿಭಾವು ಮುಂಡೆ, ಕಾರ್ಕಳ ವಿಧಾನಸಭಾ ಕ್ಷೇತ್ರಕ್ಕೆ ಐಎಎಸ್ ಅಧಿಕಾರಿ ಆಂದ್ರ ವಂಶಿ, ಬೈಂದೂರು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರಗಳಿಗೆ ಐಎಎಸ್ ಅಧಿಕಾರಿ ಅಣ್ಣ ದಿನೇಶ್ ಕುಮಾರ್ ಇವರನ್ನು ಚುನಾವಣಾ ವೀಕ್ಷಕರನ್ನಾಗಿ ಹಾಗೂ ಬೈಂದೂರು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ವೆಚ್ಚದ ವೀಕ್ಷಕರಾಗಿ ಭಾರತೀಯ ಕಂದಾಯ ಸೇವೆಯ ಅಧಿಕಾರಿ ಗೊರಾಸೆ ಪ್ರಸಾದ್ ದತ್ತಾತ್ರೇಯ ಅವರನ್ನು ನೇಮಿಸಲಾಗಿದೆ.
ತುಕಾರಾಂ ಹರಿಭಾವು ಮುಂಡೆ ಅವರನ್ನು ಉಡುಪಿ ಬನ್ನಂಜೆಯಲ್ಲಿರುವ ಪ್ರವಾಸಿ ಮಂದಿರದ ಕೊಠಡಿ ಸಂಖ್ಯೆ ವಿಐಪಿ-1ರಲ್ಲಿ ಸಂಜೆ 4:00ರಿಂದ 5:00ರವರೆಗೆ (ಮೊ: 9481703751, 0820-2003023), ಆಂದ್ರ ವಂಶಿ ಅವರನ್ನು ಪ್ರವಾಸಿ ಮಂದಿರದ ಕೊಠಡಿ ಸಂಖ್ಯೆ ವಿಐಪಿ-ಎ ನಲ್ಲಿ ಬೆಳಗ್ಗೆ 9:00ರಿಂದ 10:00ರವರೆಗೆ (ಮೊ:9481545147, 0820-2003025), ಅಣ್ಣ ದಿನೇಶ್ ಕುಮಾರ್ ಅವರನ್ನು ಪ್ರವಾಸಿ ಮಂದಿರದ ಕೊಠಡಿ ಸಂಖ್ಯೆ ವಿಐಪಿ-ಬಿ ನಲ್ಲಿ ಬೆಳಗ್ಗೆ 9:00ರಿಂದ 10:00ರವರೆಗೆ (ಮೊ:87628 82841, 0820-2003021) ಹಾಗೂ ಗೊರಾಸೆ ಪ್ರಸಾದ್ ದತ್ತಾತ್ರೇಯ ಅವರನ್ನು ಪ್ರವಾಸಿ ಮಂದಿರದ ಕೊಠಡಿ ಸಂಖ್ಯೆ ವಿಐಪಿ-ಸಿ1ರಲ್ಲಿ ಬೆಳಗ್ಗೆ 10:00ರಿಂದ 11:00ರವರೆಗೆ (ಮೊ:9141358273, 0820-2003024) ಸಾರ್ವಜನಿಕರು/ಜನಪ್ರತಿನಿಧಿಗಳು ಭೇಟಿ ಮಾಡಿ, ಚುನಾವಣಾ ವೆಚ್ಚ ಸಂಬಂಧಿ ದೂರುಗಳಿದ್ದಲ್ಲಿ ನೀಡಬಹು ದಾಗಿದೆ ಎಂದು ಪ್ರಕಟಣೆ ತಿಳಿಸಿದೆ.







