ಕನಕಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಆಸ್ತಿ ವಿವರ ಘೋಷಣೆ

ರಾಮನಗರ, ಎ. 20: ರಾಮನಗರ ಜಿಲ್ಲೆಯ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಡಿ.ಕೆ.ಸುರೇಶ್, 353.70 ಕೋಟಿ ರೂ.ಗಳ ಆಸ್ತಿಯನ್ನು ಘೋಷಿಸಿದ್ದಾರೆ. ಈ ಪೈಕಿ 55.23 ಕೋಟಿ ರೂ.ಚರಾಸ್ತಿ ಹಾಗೂ 298.47 ಕೋಟಿ ರೂ.ಸ್ಥಿರಾಸ್ತಿ ಇದೆ ಎಂದು ತಿಳಿಸಿದ್ದಾರೆ.
ಡಿ.ಕೆ.ಸುರೇಶ್ ತಮಗೆ 88.30 ಕೋಟಿ ರೂ.ಗಳ ಸಾಲ ಇರುವುದಾಗಿ ತಿಳಿಸಿದ್ದಾರೆ. ಅಲ್ಲದೆ, 55.85 ಕೋಟಿ ರೂ.ಗಳ ಸಾಲಕ್ಕೆ ಸಂಬಂಧಿಸಿದಂತೆ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳಿಂದ ವ್ಯಾಜ್ಯ ಇರುವುದಾಗಿ ತಿಳಿಸಿದ್ದಾರೆ.
2021-22ನೆ ಸಾಲಿನಲ್ಲಿ 2.29 ಕೋಟಿ ರೂ.ಆದಾಯ ಘೋಷಿಸಿರುವ ಡಿ.ಕೆ.ಸುರೇಶ್ ಬಳಿ 12.52 ಲಕ್ಷ ರೂ. ನಗದು ಇದೆ. ಇವರ ವಿರುದ್ಧ 10 ಕ್ರಿಮಿನಲ್ ಕೇಸ್‍ಗಳು ದಾಖಲಾಗಿದ್ದು, ಯಾವುದರಲ್ಲಿಯೂ ಶಿಕ್ಷೆಯಾಗಿಲ್ಲ. 21.35 ಲಕ್ಷ ರೂ.ಮೌಲ್ಯದ 1260 ಗ್ರಾಂ ಚಿನ್ನ, 2.10 ಲಕ್ಷ ರೂ.ಮೌಲ್ಯದ 4860 ಗ್ರಾಂ ಬೆಳ್ಳಿ ವಸ್ತುಗಳು ಇರುವುದಾಗಿ ಸುರೇಶ್ ಪ್ರಕಟಿಸಿದ್ದಾರೆ.
Next Story





