ಸರಕಾರಿ ಉದ್ಯೋಗಳಲ್ಲಿ ಮೀಸಲಾತಿ ಏರಿಕೆ ವಿಧೇಯಕ ಹಿಂದಿರುಗಿಸಿದ ಜಾರ್ಖಂಡ್ ರಾಜ್ಯಪಾಲ

ರಾಂಚಿ, ಎ. 20: ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಹೆಚ್ಚಿಸುವ ಪ್ರಸ್ತಾವವನ್ನು ಒಳಗೊಂಡ ವಿಧೇಯಕವನ್ನು ಜಾರ್ಖಂಡ್ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣ ಹಿಂದಿರುಗಿಸಿದ್ದಾರೆ. ‘‘ಜಾರ್ಖಂಡ್ ಪೋಸ್ಟ್ಗಳು ಹಾಗೂ ಸೇವೆಗಳಲ್ಲಿ ಖಾಲಿ ಹುದ್ದೆಗಳಲ್ಲಿ ಮೀಸಲಾತಿ (ತಿದ್ದುಪಡಿ) ಮಸೂದೆ-2022 ವಿಧೇಯಕವನ್ನು ರಾಜ್ಯ ವಿಧಾನ ಸಭೆ ನವೆಂಬರ್ ನಲ್ಲಿ ಅಂಗೀಕರಿಸಿತ್ತು.
ಪರಿಶಿಷ್ಟ ಪಂಗಡಕ್ಕೆ ಶೇ. 26ರಿಂದ ಶೇ. 28, ಇತರ ಹಿಂದುಳಿದ ವರ್ಗಗಳಿಗೆ ಶೇ. 14ರಿಂದ ಶೇ. 27 ಹಾಗೂ ಪರಿಶಿಷ್ಟ ಜಾತಿಗೆ ಶೇ. 10ರಿಂದ ಶೇ. 12 ಮೀಸಲಾತಿ ಏರಿಕೆ ಪ್ರಸ್ತಾವನ್ನು ಈ ವಿಧೇಯಕ ಹೊಂದಿತ್ತು.
ಆರ್ಥಿಕ ದುರ್ಬಲ ವರ್ಗಕ್ಕೆ ಅಸ್ತಿತ್ವದಲ್ಲಿರುವ ಶೇ. 10 ಮೀಸಲಾತಿಯೊಂದಿಗೆ ಈ ವಿಧೇಯಕ ರಾಜ್ಯ ಸರಕಾರದಲ್ಲಿ ಒಟ್ಟು ಮೀಸಲಾತಿಯನ್ನು ಶೇ. 77ಕ್ಕೆ ಕೊಂಡೊಯ್ಯುಲಿತ್ತು.
Next Story





