ಮಣಿಪಾಲ: ಇ-ಸಿಗರೇಟ್ ಮಾರಾಟ; ಓರ್ವನ ಬಂಧನ

ಮಣಿಪಾಲ : ಮಣಿಪಾಲದ ವಿದ್ಯಾರತ್ನ ನಗರ ಡಾ.ವಿ.ಎಸ್. ಆಚಾರ್ಯ ರಸ್ತೆಯಲ್ಲಿರುವ ವಸತಿ ಸಮುಚ್ಛಯದ ರೂಮ್‌ನಲ್ಲಿ ನಿಷೇಧಿತ ಇ-ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ದ ಸ್ಮೋಕ್ ಕೋ. ಎಂಬ ಅಂಗಡಿಗೆ ಎ.19ರಂದು ಬೆಳಗ್ಗೆ ದಾಳಿ ನಡೆಸಿದ ಮಣಿಪಾಲ ಪೊಲೀಸರು, ಓರ್ವನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ಮುಹಮ್ಮದ್ ಉನೈಶ್(24) ಎಂದು ಗುರುತಿಸಲಾಗಿದೆ.
ಅಂಗಡಿಯಲ್ಲಿದ್ದ ಒಟ್ಟು 1,29,100ರೂ. ಮೌಲ್ಯದ ನಕಲಿ ಸಿಗರೇಟ್ ಮತ್ತು ಇ-ಸಿಗರೇಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





