ಉಡುಪಿ: ಡ್ರಗ್ಸ್ ಮಾರಾಟ; ಓರ್ವನ ಬಂಧನ

ಉಡುಪಿ, ಎ.20: ಅಕ್ರಮವಾಗಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಓರ್ವನನ್ನು ಉಡುಪಿ ಸೆನ್ ಪೊಲೀಸರು ನಗರದ ಸಿಟಿ ಬಸ್ ನಿಲ್ದಾಣದ ಸರಸ್ವತಿ ಶಾಲೆಯ ಬಳಿ ಇಂದು ಬೆಳಗ್ಗೆ ಬಂಧಿಸಿದ್ದಾರೆ.
ಮುಹಮ್ಮದ್ ಅಫ್ವಾನ್ ಬಂಧಿತ ಆರೋಪಿ. ಈತನಿಂದ 20,000ರೂ. ಮೌಲ್ಯದ 5.23 ಗ್ರಾಂ ತೂಕದ ಡ್ರಗ್ಸ್, 2ಸಾವಿರ ರೂ. ಮೌಲ್ಯದ ಒಂದು ಮೊಬೈಲ್ ಪೋನ್ ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





