ಉಡುಪಿ: ಮೊಬೈಲ್‌ಗೆ ಲಿಂಕ್ ಕಳುಹಿಸಿ ಲಕ್ಷಾಂತರ ರೂ. ವಂಚನೆ

ಉಡುಪಿ, ಎ.20: ಪಾರ್ಸೆಲ್ ಕಳುಹಿಸಲು ಮೊಬೈಲ್‌ಗೆ ಬಂದ ಲಿಂಕ್ ಒತ್ತಿದ್ದಾಗ ಖಾತೆಯಿಂದ ಲಕ್ಷಾಂತರ ರೂ. ಹಣ ಕಡಿತಗೊಳಿಸಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐನೇಶ್ ಡಿಸೋಜ ಎಂಬವರು ತನ್ನ ತಾಯಿಯ ಪಾಸ್‌ಪೋರ್ಟ್‌ನ್ನು ವೀಸಾ ಸ್ಟಾಪಿಂಗ್ ಬಗ್ಗೆ ಕಳುಹಿಸಿದ್ದು ಎ.18ರಂದು ಇವರಿಗೆ ಕರೆ ಮಾಡಿದ ವ್ಯಕ್ತಿ, ತಾವು ನೀಡಿರುವ ವಿಳಾಸಕ್ಕೆ ಪಾರ್ಸೆಲ್ ಡೆಲಿವರಿ ಮಾಡಲು ಆಗುವುದಿಲ್ಲ, ಬೇರೆ ವಿಳಾಸವನ್ನು ನೀಡುವಂತೆ ತಿಳಿಸಿದ್ದನು.
ಈ ವಿಳಾಸಕ್ಕೆ ಪಾರ್ಸೇಲ್ ಡೆಲಿವರಿ ಮಾಡಲು ಹೆಚ್ಚುವರಿ ಮೊತ್ತವನ್ನು ನೀಡಬೇಕಾಗುತ್ತದೆ ಎಂದು ತಿಳಿಸಿ ಐನೇಶ್ ಡಿಸೋಜರ ಮೊಬೈಲ್‌ಗೆ ಲಿಂಕ್ ಕಳುಹಿಸಿದ್ದನು. ಆ ಲಿಂಕ್‌ನ್ನು ಕ್ಲಿಕ್ ಮಾಡಿದಾಗ ಇವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 1,08,811ರೂ. ಹಣ ಕಡಿತ ಮಾಡಿ ಮೋಸ ಮಾಡಲಾಗಿದೆ ಎಂದು ದೂರಲಾಗಿದೆ.
Next Story





