ದ.ಕ.ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಕ್ಕೆ ವೀಕ್ಷಕರ ನೇಮಕ
ಮಂಗಳೂರು, ಎ.20: ದ.ಕ. ಜಿಲ್ಲೆಯ ಚುನಾವಣಾ ಕಾರ್ಯಗಳ ಮೇಲೆ ನಿಗಾ ಇಡಲು ಚುನಾವಣಾ ವೀಕ್ಷಕರನ್ನು ನೇಮಕ ಮಾಡಲಾಗಿದ್ದು. ಚುನಾವಣಾ ಖರ್ಚುಗಳಿಗೆ ಸಂಬಂಧಿಸಿದ ದೂರು ಅಹವಾಲುಗಳನ್ನು ಸಲ್ಲಿಸಲು ಸಾರ್ವಜನಿಕರು ವೀಕ್ಷಕರಿಗೆ ಸಲ್ಲಿಸಲು ಅವಕಾಶ ಇದೆ. ವೀಕ್ಷಕರ ವಿವರ ಹಾಗೂ ದೂರವಾಣಿ ಸಂಖ್ಯೆಗಳನ್ನು ನೀಡಲಾಗಿದೆ ಎಂದು ಹೆಚ್ಚುವರಿ ಚುನಾವಣಾ ಅಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಬೆಳ್ತಂಗಡಿ ಹಾಗೂ ಮೂಡುಬಿದಿರೆಗೆ ಡಾ. ಸರೋಜ್ ಕುಮಾರ್ (ಮೊ.ಸಂ: 9141046501) ಅವರನ್ನು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಬೆಳಗ್ಗೆ 8:30ರಿಂದ 9:30 ರವರಿಗೆ ಭೇಟಿ ಆಗಬಹುದು.
ಮಂಗಳೂರು ನಗರ ಹಾಗೂ ದಕ್ಷಿಣ ಕ್ಷೇತ್ರಕ್ಕೆ ಸೌರಭ್ ಭಗತ್, (ಮೊ.ಸಂ: 9141046502), ಮಂಗಳೂರು ಹಾಗೂ ಬಂಟ್ವಾಳ ಕ್ಷೇತ್ರಕ್ಕೆ ದೀಪಾಂಕರ್ ಸಿನ್ಹಾ (ಮೊ.ಸಂ: 9141046503), ಪುತ್ತೂರು ಹಾಗೂ ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಶಿವ ಸಹಾಯ್ ಅವಸ್ತಿ (ಮೊ.ಸಂ: 9141046504)ವೀಕ್ಷಕರಾಗಿದ್ದು ಅವರನ್ನು ಪ್ರತಿದಿನ ಪೂ. 11ರಿಂದ 12ರವರೆಗೆ ಪುತ್ತೂರು ನಿರೀಕ್ಷಣಾ ಮಂದಿರದಲ್ಲಿ ಭೇಟಿ ಆಗಬಹುದು.
ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದ ಪೊಲೀಸ್ ವೀಕ್ಷಕರಾಗಿ ಡಾ. ಕೋಯಾ ಪ್ರವೀಣ್ (ಮೊ.ಸಂ: 9141046514) ಅವರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.