ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಜೀವಂತ ಪತ್ತೆ
![ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಜೀವಂತ ಪತ್ತೆ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಜೀವಂತ ಪತ್ತೆ](https://www.varthabharati.in/sites/default/files/images/articles/2023/04/20/374751-1682012465.jpeg)
ಕಠ್ಮಂಡು, ಎ.20: ನೇಪಾಳದ ಅನ್ನಪೂರ್ಣ ಪರ್ವತದಿಂದ ಇಳಿಯುತ್ತಿದ್ದಾಗ ಕೊರಕಲಿಗೆ ಬಿದ್ದು ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಅನುರಾಗ್ ಮಾಲೂರನ್ನು ರಕ್ಷಣಾ ತಂಡ ಜೀವಂತವಾಗಿ ಪತ್ತೆಹಚ್ಚಿದೆ. ಆದರೆ ಅವರ ಆರೋಗ್ಯಸ್ಥಿತಿ ಗಂಭೀರವಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಅನುರಾಗ್ ಜಗತ್ತಿನ 10ನೇ ಅತೀ ಎತ್ತರದ ಪರ್ವತವಾಗಿರುವ ಅನ್ನಪೂರ್ಣದಿಂದ ಇಳಿಯುತ್ತಿದ್ದ ಸಂದರ್ಭ ಸೋಮವಾರ ಸುಮಾರು 6 ಸಾವಿರ ಮೀಟರ್ ಎತ್ತರದಿಂದ ಕೊರಕಲಿಗೆ ಉರುಳಿ ನಾಪತ್ತೆಯಾಗಿದ್ದರು. ರಾಜಸ್ತಾನದ ಕಿಶನ್ಗಡ ನಿವಾಸಿಯಾಗಿರುವ ಇವರು ವಿಶ್ವಸಂಸ್ಥೆಯ ಜಾಗತಿಕ ಗುರಿಗಳನ್ನು ಸಾಧಿಸುವ ಉದ್ದೇಶದ ಯೋಜನೆಯಲ್ಲಿ ಪಾಲ್ಗೊಂಡಿದ್ದು ಎಲ್ಲಾ 7 ಖಂಡಗಳಲ್ಲಿನ 7 ಅತ್ಯಧಿಕ ಎತ್ತರದ ಶಿಖರ ಏರುವ ಮತ್ತು 8 ಸಾವಿರ ಮೀಟರ್ಗೂ ಎತ್ತರದ 14 ಶಿಖರಗಳನ್ನು ಏರುವ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
Next Story