ಮಿತ್ತೂರು ಕೆಜಿಎನ್ : ವಾಣಿಜ್ಯ ವಿಭಾಗಕ್ಕೆ 100% ಫಲಿತಾಂಶ

ವಿಟ್ಲ: ಮಾಣಿ ದಾರುಲ್ ಇರ್ಶಾದ್ ಅಧೀನದ ಮಿತ್ತೂರು ಕೆಜಿಎನ್ ಪಿಯು ಕಾಲೇಜಿನ ಬಾಲಕರ ವಾಣಿಜ್ಯ ವಿಭಾಗವು 2022-23 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 100 ಶೇಕಡಾ ಫಲಿತಾಂಶ ದಾಖಲಿಸಿದೆ.
ಬಾಲಕರ ವಿಭಾಗದಲ್ಲಿ ಪಿ.ಎ.ಸಅದ್ ಸನಾಹ್ 567(94.5%) ಅಂಕ ಪಡೆದು ಪ್ರಥಮ, ಮುಹಮ್ಮದ್ ತುಫೈಲ್ 562 (93.66%) ದ್ಬಿತೀಯ, ಮುಹಮ್ಮದ್ ಹಾಫಿಲ್ 546 (91%) ತೃತೀಯ ಹಾಗೂ ನವಾಝ್ 540(90%) ಚತುರ್ಥ ಸ್ಥಾನ ಗಳಿಸಿದ್ದಾರೆ.
ಕಬಕ ಹೆಣ್ಮಕ್ಕಳ ಕ್ಯಾಂಪಸ್ 100% : ಮಿತ್ತೂರು ಕೆಜಿಎನ್ ಕ್ಯಾಂಪಸ್ ಅಧೀನದ ಕಬಕ ಹೆಣ್ಮಕ್ಕಳ ಕ್ಯಾಂಪಸ್ ನ ವಿದ್ಯಾರ್ಥಿನಿಯರು ನೂರು ಶೇಕಡಾ ಫಲಿತಾಂಶ ದಾಖಲಿಸಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಆಯಿಷತ್ ಆಬಿದಾ ಸೂರಿಕುಮೇರು 573(95.5%) ಅಂಕ ಗಳಿಸಿ ಕಾಲೇಜಿಗೆ ಪ್ರಥಮಸ್ಥಾನಿಯಾಗಿದ್ದಾರೆ. ಫಾತಿಮತ್ ರಶೀದಾ ಕಬಕ 557(92.83%) ದ್ವಿತೀಯ, ಆಯಿಷಾ ಸಹ್ಲಾ ಒಕ್ಕೆತ್ತೂರು 554(92.33) ತೃತೀಯ, ಫಾತಿಮತ್ ಪರ್ಹಾ 549(91.5%) ಚತುರ್ಥ ಸ್ಥಾನ ಗಳಿಸಿದ್ದಾರೆ ಎಂದು ದಾರುಲ್ ಇರ್ಶಾದ್ ಮೇನೇಜಿಂಗ್ ಡೈರೆಕ್ಟರ್ ಮುಹಮ್ಮದ್ ಶರೀಫ್ ಸಖಾಫಿ ಮಾಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.