ನನ್ನ ಹತ್ಯೆ ನಡೆದರೆ ಬಿಜೆಪಿ ರಾಜಾಧ್ಯಕ್ಷರೇ ನೇರ ಹೊಣೆ: ಸತ್ಯಜಿತ್ ಸುರತ್ಕಲ್ ಆರೋಪ

ಮಂಗಳೂರು,ಎ.21: ಸರಕಾರವು ನನಗೆ ನೀಡಿರುವ ಅಂಗರಕ್ಷಕರ ಭದ್ರತೆಯನ್ನು ಹಿಂಪಡೆದಿದೆ. ಇದರ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷರ ಕೈವಾಡ ಇದೆ. ಅಲ್ಲದೇ ನನ್ನ ಬಾಯಿ ಮುಚ್ಚಿಸುವ ಸಲುವಾಗಿ ಸತತ ಎರಡು ಮೂರು ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ ಎಂದು ದ.ಕ ಜಿಲ್ಲಾ ಹಿಂದೂ ಜಾಗರಣ ವೇದಿಕೆಯ ಮುಖಂಡ ಸತ್ಯಜಿತ್ ಸುರತ್ಕಲ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ಗೃಹ ಮಂತ್ರಿಯವರಲ್ಲಿ ಹಾಗೂ ಸಚಿವೆ ಶೋಭಾ ಕರಂದ್ಲಾಜೆಯವರಲ್ಲಿಯೂ ಮಾತನಾಡಿದ್ದೇನೆ. ನನ್ನ ಹತ್ಯೆ ನಡೆದರೆ ಬಿಜೆಪಿ ರಾಜಾಧ್ಯಕ್ಷ ಹಾಗೂ ಅವರ ತಂಡ ನೇರ ಹೊಣೆ ಎಂದು ಸತ್ಯಜೀತ್ ಸುರತ್ಕಲ್ ಆರೋಪಿಸಿದ್ದಾರೆ.
ಸರಕಾರ ಕಳೆದ 16 ವರ್ಷಗಳಿಂದ ಪೊಲೀಸ್ ಗನ್ ಮ್ಯಾನ್ ಮೂಲಕ ಭದ್ರತೆಯನ್ನು ಕಲ್ಪಸಿತ್ತು. ಆದರೆ ಇತ್ತಿಚೆಗೆ ಬಂದ ಪತ್ರದಲ್ಲಿ ಶುಲ್ಕ ಪಾವತಿಸಿ ಭದ್ರತಾ ಸಿಬ್ಬಂದಿಯನ್ನು ಪಡೆದುಕೊಳ್ಳುವಂತೆ ಆದೇಶಿಸಿದೆ. ಇದರಲ್ಲಿ ಬಿಜೆಪಿ ಮುಖಂಡನ ಪಾತ್ರ ಇದ್ದು, ಹಣದಿಂದ ನನ್ನನ್ನು ಕೊಂಡುಕೊಳ್ಳಲು ಮುಂದಾಗಿದ್ದರು. ಆದರೆ ಇದಕ್ಕೆಲ್ಲ ನಾನು ಹೆದರಿ ಕೂರುವವವನಲ್ಲ ಎಂದು ಸತ್ಯಜಿತ್ ಆರೋಪಿಸಿದ್ದಾರೆ.
ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಹಿಂದು ಜಾಗರಣಾ ವೇದಿಕೆಯ ಮುಖಂಡರಾದ ರವಿರಾಜ್ ಬಿ.ಸಿ ರೋಡ್, ನಾಗೇಶ್ ಹಾಗೂ ಇತರರು ಉಪಸ್ಥಿತರಿದ್ದರು.