ಕಾರ್ಕಳ: ಕೆಎಂಇಎಸ್ ಪದವಿಪೂರ್ವ ಕಾಲೇಜಿಗೆ 100% ಫಲಿತಾಂಶ

ಕಾರ್ಕಳ: ಕುಕ್ಕುಂದೂರಿನ ಕೆ.ಎಂ.ಇ.ಎಸ್ ಶಿಕ್ಷಣ ಸಂಸ್ಥೆಗೆ ಈ ವರ್ಷದ ದ್ವಿತೀಯ ಪಿಯುಸಿಯಲ್ಲಿ 100% ಶೇಕಡಾ ಫಲಿತಾಂಶ ದಾಖಲಾಗಿದೆ.
ಪರೀಕ್ಷೆಗೆ ಕುಳಿತ 71 ವಿದ್ಯಾರ್ಥಿಗಳಲ್ಲಿ 30 ವಿಧ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. 37 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 4 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿರುತ್ತಾರೆ. 20 ವಿದ್ಯಾರ್ಥಿಗಳು ಶೇಕಡ 90% ಗಿಂತ ಹೆಚ್ಚು ಅಂಕಪಡೆದರೆ, ವಾಣಿಜ್ಯ ವಿಭಾಗದಲ್ಲಿ 581 ಅಂಕ ಪಡೆದ ಮಾನ್ಯ ಶೆಟ್ಟಿ ಪ್ರಥಮ ಸ್ಥಾನ ಪಡೆದರೆ, 579 ಅಂಕ ಪಡೆದ ಚೈತನ್ಯ ದ್ವಿತೀಯ ಸ್ಥಾನಿಯಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 577 ಅಂಕ ಪಡೆದ ನಿನಾದ ಪ್ರಭುಪ್ರಥಮ ಸ್ಥಾನಿಯಾದರೆ 575 ಅಂಕ ಪಡೆದ ತಾನಿಯ ಬೇಗಂ ದ್ವಿತೀಯ ಸ್ಥಾನಿಯಾಗಿದ್ದಾರೆ.
Next Story





