ಕಾಂಗ್ರೆಸ್ ನೀಡಿದ ದಾಖಲೆ ನಕಲಿ ಎಂದು ಉಮಾನಾಥ ಕೋಟ್ಯಾನ್ ಸಾಬೀತು ಪಡಿಸಲಿ: ಮಿಥುನ್ ರೈ

ಮಂಗಳೂರು: ಶಾಸಕ ಉಮಾನಾಥ ಕೋಟ್ಯಾನ್ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಮತ್ತು ಬೆನಾಮಿ ಆಸ್ತಿ ಹೊಂದಿರುವ ಬಗ್ಗೆ ಕಾಂಗ್ರೆಸ್ ಪಕ್ಷ ನಕಲಿ ದಾಖಲೆ ನೀಡಿದೆ ಈ ಬಗ್ಗೆ ದಾಖಲೆ ನೀಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಆ ಕೆಲಸ ಅವರು ಮಾಡಲಿ. ಅವರ ಹೇಳಿಕೆಗೆ ಸ್ವಾಗತ ಮತ್ತು ಅವರ ಸವಾಲನ್ನು ಸ್ವೀಕರಿಸಲು ಸಿದ್ಧವಾಗಿರುವುದಾಗಿ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಮೂಡಬಿದ್ರೆ ಶಾಸಕರು ಅಲ್ಲಿನ ಕೃಷಿ ಭೂಮಿಯನ್ನು ಕೈಗಾರಿಕೆಗಾಗಿ ಸ್ವಾಧೀನ ಪಡಿಸಿಕೊಳ್ಳಲು ಸರಕಾರದ ಹಂತದಲ್ಲಿ ನಡೆಸಿರುವ ಪತ್ರಗಳ ದೃಢೀಕೃತ ಪ್ರತಿಗಳನ್ನು ಪಡೆದು ಹೇಳಿಕೆ ನೀಡಿದ್ದೇನೆ. ಆಧಾರ ರಹಿತವಾಗಿ ಹೇಳಿಕೆ ನೀಡಿಲ್ಲ. ಈ ಬಗ್ಗೆ ಯಾವ ದೈವ ದೇವರ ಮುಂದೆ ಆ ಪ್ರದೇಶದ ಜನರ ಮುಂದೆ ನಮ್ಮ ಮಾತುಗಳನ್ನು ಪುನರುಚ್ಚರಿ ಸುತ್ತೇವೆ. ನಾವು ಸತ್ಯವನ್ನೇ ಹೇಳುತ್ತಿದ್ದೇವೆ. ಯಾರನ್ನೂ ತೇಜೋವಧೆ ಮಾಡುವ ಅಗತ್ಯ ಕಾಂಗ್ರೆಸ್ ಗೆ ಇಲ್ಲ ಎಂದು ಮಿಥುನ್ ರೈ ತಿಳಿಸಿದ್ದಾರೆ.
ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಕರ್ನಿರೆ, ಅತಿಕಾರಿ ಬೆಟ್ಟು, ಬಳ್ಕುಂಜೆ, ಕೊಲ್ಲೂರು, ಉಳಿಪ್ಪಾಡಿ ಯಲ್ಲಿ ಸುಮಾರು 800 ರಿಂದ 900 ಎಕರೆ ಭೂಮಿ ಕೈಗಾರಿಕಾ ಉದ್ದೇಶಕ್ಕೆ ನೀಡಲು ಜನರು ಉತ್ಸುಕರಾಗಿದ್ದಾರೆ. ಲಭ್ಯ ವಿರುವ ಈ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲು ಮೇ.15,2020 ರಂದು ಆಗಿನ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಗೆ ಬರೆದಿರುವ ಪತ್ರ ದ ಪ್ರತಿಯನ್ನು ಮತ್ತು ಮುಖ್ಯ ಮಂತ್ರಿಯ ವತಿಯಿಂದ ಶಾಸಕ ಉಮಾನಾಥ ಕೊಟ್ಯಾನ್ ರಿಗೆ ನೀಡಲಾದ ಟಿಪ್ಪಣಿ ಯ ಪ್ರತಿಗಳನ್ನು ಸುದ್ದಿ ಗೋಷ್ಠಿ ಯಲ್ಲಿ ಹಾಜರು ಪಡಿಸಿದ ಮಿಥುನ್ ರೈ ಈ ದಾಖಲೆಗಳನ್ನು ನಕಲಿ ಎಂದು ಉಮಾನಾಥ ಕೋಟ್ಯಾನ್ ಸಾಬೀತು ಪಡಿಸಲಿ ಎಂದು ಮಿಥುನ್ ರೈ ಸವಾಲೆಸೆದರು.